Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಭೀಕರ ಅಪಘಾತ, ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಸ್ಕೂಟಿ ಸವಾರ, ವಿಡಿಯೋ ನೋಡಿ

ಚಿಕ್ಕಮಗಳೂರು: ಭೀಕರ ಅಪಘಾತ, ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಸ್ಕೂಟಿ ಸವಾರ, ವಿಡಿಯೋ ನೋಡಿ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Ganapathi Sharma

Updated on: Dec 13, 2023 | 12:36 PM

ಕಾರೊಂದು ಡಿಕ್ಕಿಯಾಗಿ ಸ್ಕೂಟಿ ತೀವ್ರವಾಗಿ ಜಖಂಗೊಂಡ ಘಟನೆ ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ಸ್ಕೂಟಿ ಸವಾರ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೋ ಇಲ್ಲಿದೆ.

ಚಿಕ್ಕಮಗಳೂರು, ಡಿಸೆಂಬರ್ 13: ವ್ಯಕ್ತಿಯೊಬ್ಬರು ಹೋಂಡಾ ಆ್ಯಕ್ಟಿವಾದಲ್ಲಿ ಸಂಚರಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾಗಿ ಸ್ಕೂಟಿ ತೀವ್ರವಾಗಿ ಜಖಂಗೊಂಡ ಘಟನೆ ಚಿಕ್ಕಮಗಳೂರಿನ (Chikkamagaluru) ಬೇಲೂರು ರಸ್ತೆಯಲ್ಲಿ (Belur Road) ಮಂಗಳವಾರ ನಡೆದಿದೆ. ಅದೃಷ್ಟವಶಾತ್ ಸ್ಕೂಟಿ ಸವಾರ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರೊಂದು ಎಡಭಾಗದಲ್ಲಿ ನಿಧಾನವಾಗಿ ಹೋಗುತ್ತಿರುತ್ತದೆ. ಬಲಭಾಗದ ರೋಡ್ ಡಿವೈಡರ್‌ ಬಳಿ ಹೋಂಡಾ ಆಕ್ಟೀವಾದಲ್ಲಿ ವ್ಯಕ್ತಿ ತನ್ನ ಪಾಡಿಗೆ ಹೋಗುತ್ತಿದ್ದರು. ಇದರ ಹಿಂದೆ ವೇಗವಾಗಿ ಬಂದ ಕಾರೊಂದು, ಕಾರಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಸ್ವಲ್ಪ ಬಲಭಾಗಕ್ಕೆ ವಾಲಿದೆ. ಅಷ್ಟೇ ಅಲ್ಲದೆ, ಬಲಭಾಗದಲ್ಲಿ ಹೋಗ್ತಿದ್ದ ಸ್ಕೂಟಿಗೆ ರಭಸದಿಂದ ಗುದ್ದಿ ಮುಂದೆ ಹೋಗಿದೆ. ಆ್ಯಕ್ಟೀವಾ ಪುಡಿಪುಡಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮನುಷ್ಯನ ಮುಖ‌ ಹೊಲುವ ವಿಚಿತ್ರ ಕುರಿಮರಿ ಜನನ

ಸಣ್ಣಪುಟ್ಟ ಗಾಯಗೊಂಡ ಸ್ಕೂಟಿ ಸವಾರನಿಗೆ ತಕ್ಷಣವೇ ಸ್ಥಳದಲ್ಲಿದ್ದವರು ಆರೈಕೆ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಕಾರು ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ