AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಉರುಳಿ ಬಿದ್ದ ಹಳೆ ಕಾಲದ ಮರ: ತಪ್ಪಿದ ಭಾರೀ ಅನಾಹುತ

ವಯಸ್ಸಾದ ಮರ ಒಂದು ರಸ್ತೆಯಲ್ಲಿದ್ದ ಟ್ರ್ಯಾಕ್ಟರ್, ಮನೆ, ದನದ ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ತೆರವುಗೊಳಿಸಿ ಅಂತಾ ಅಲ್ಲಿಯ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಮರ ತಾನಾಗಿಯೇ ಉರುಳಿದೆ.

ಚಿಕ್ಕಬಳ್ಳಾಪುರ: ಉರುಳಿ ಬಿದ್ದ ಹಳೆ ಕಾಲದ ಮರ: ತಪ್ಪಿದ ಭಾರೀ ಅನಾಹುತ
ಉರುಳಿ ಬಿದ್ದ ಮರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 03, 2023 | 4:07 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 3: ಗ್ರಾಮದ ಜನವಸತಿ ಪ್ರದೇಶದಲ್ಲಿದ್ದ ಹಳೆ ಕಾಲದ ಮರ (tree) ವೊಂದು ಟೊಳ್ಳಾಗಿ ನಿಂತಿತ್ತು. ಯಾವುದೇ ಕ್ಷಣದಲ್ಲಿ ಬೀಳಬಹುದು, ದಮ್ಮಯ್ಯ ಮರ ತೆರವುಗೊಳಿಸಿ ಅಂತಾ ಅಲ್ಲಿಯ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಯಾರೂ ಮರವನ್ನು ತೆರವುಗೊಳಿಸಲಿಲ್ಲ. ಇದರಿಂದ ಮರವೇ ಇಂದು ಗ್ರಾಮದ ಟ್ರ್ಯಾಕ್ಟರ್, ಮನೆಯ ಮೇಲೆ ಉರುಳಿ ಬಿದ್ದಿದೆ. ಅದೃಷ್ಠವಶಾತ್ ಜನರು ಬಚಾವ್ ಆದ ಘಟನೆ ನಡೆದಿದೆ.

ಘಟನೆ ನಡೆದಿರುವುದು ಎಲ್ಲಿ:

ಚಿಕ್ಕಬಳ್ಳಾಪುರ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಚಂದ್ರಮ್ಮ ವೆಂಕಟೇಶಪ್ಪ ಎಂಬುವರ ಮನೆಯ ಮುಂದೆ ಬೃಹತ್ ಅರಳಿ ಮರವೊಂದಿತ್ತು. ಮರಕ್ಕೆ ವಯಸ್ಸಾಗಿತ್ತು. ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮರ ತೆರವುಗೊಳಿಸುವಂತೆ ಸ್ಥಳೀಯರು ಅಗಲಗುರ್ಕಿ ಗ್ರಾ.ಪಂ ಅಧಿಕಾರಿಗಳು ಹಾಗೂ ಸ್ಥಳಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಕಲಬುರಗಿ: ಮಳೆಯ ಅಬ್ಬರ, ಸಿಡಿಲು ಬಡಿದು 11 ಮೇಕೆ, ಓರ್ವ ಮಹಿಳೆ ಸಾವು

ಆದರೆ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸ್ಪಂಧಿಸಿರಲಿಲ್ಲ. ಆದರೆ ಇಂದು ರಸ್ತೆಯಲ್ಲಿದ್ದ ಟ್ರ್ಯಾಕ್ಟರ್, ಮನೆ, ದನದ ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಮರದ ಕೆಳಗೆ ಜನರು ಯಾರೂ ಇರಲಿಲ್ಲ.

ಮತ್ತೊಂದೆಡೆ ಗ್ರಾಮದಲ್ಲಿರುವ ವಿದ್ಯುತ್ ಜಾಲದ ಮೇಲೆಯೂ ಮರ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ಜೋತು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಜನರ ಮೇಲೆ ಮರ ಬಿದ್ದು ಯಾರಿಗಾದರೂ ಪ್ರಾಣ ಹೋಗಿದ್ದರೆ ಆಗ ಅಧಿಕಾರಿಗಳು ಏನು ಮಾಡುತ್ತಿದ್ದರು ಅಂತಾ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇನ್ನು ಮುಂದಾದರೂ ಬದ್ದತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಕೋಟೆಯ ಬೃಹತ್‌ ಗೋಡೆಯ ಮೇಲೆ ಬೆಳೆದ ಗಿಡಗಳು: ಗೋಡೆಯೇ ಶಿಥಿಲಗೊಳ್ಳುವ ಆತಂಕ

ಬೀದರ್‌: ಏಶಿಯಾ ಖಂಡದಲ್ಲಿಯೇ ಅತಿ ಬೃಹತ್ತಾದ ಬೀದರ್ ಕೋಟೆಯನ್ನ ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಐತಿಹಾಸಿಕ ಬೀದರ್‌ ಕೋಟೆಯ ಒಂದು ಕಡೆಯ ಬೃಹದಾಕಾರದ ಗೋಡೆಯ ಮೇಲೆ ಗಿಡ- ಗಂಟಿಗಳು ಬೆಳೆದು ನಿಂತಿದ್ದು, ಇಡೀ ಗೋಡೆಯೇ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಆರೋಗ್ಯ ಸಚಿವರು ನಿರ್ದೇಶನ ನೀಡಿ ಒಂದು ತಿಂಗಳಾದರೂ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸದ ನಮ್ಮ ಕ್ಲಿನಿಕ್​

ಎತ್ತರದ ಗೋಡೆಯ ಮೇಲ್ಭಾಗದಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು, ಬೇರು ಬಿಟ್ಟಿವೆ. ಇದರಿಂದ ಗೋಡೆ ಬಿರುಕು ಬಿಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜಿಲ್ಲಾಧಿಕಾರಿ ನಿವಾಸದಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಡೆಗೆ ಸಾಗುವ ಮಾರ್ಗದ ಕೋಟೆಯ ಬೃಹತ್‌ ಗೋಡೆಯ ಮೇಲೆ ಗಿಡಗಳು ಹುಲುಸಾಗಿ ಪೊದೆಯಂತೆ ಬೆಳೆದಿದ್ದರಿಂದ ಇಡೀ ಗೋಡೆ ಹಸುರಿನಿಂದ ಕಂಗೊಳಿಸುವಂತಾಗಿದೆ.

ಗಿಡ- ಗಂಟಿಗಳಿಂದ ಐತಿಹಾಸಿಕ ಸ್ಮಾರಕವಾದ ಕೋಟೆ ಸೌಂದರ‍್ಯಕ್ಕೆ ಧಕ್ಕೆ ಎದುರಾಗುವ ಅಪಾಯವೂ ಇದೆ. ಗೋಡೆ ಬಿರುಕು ಬಿಟ್ಟರೆ ಮತ್ತೆ ಅದರ ದುರಸ್ತಿ ಕಾರ್ಯ ಅಸಾಧ್ಯವಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು ಕೂಡಲೆ ಗಿಡಗಳನ್ನ ಕಟ್ ಮಾಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!