ಕಲಬುರಗಿ: ಮಳೆಯ ಅಬ್ಬರ, ಸಿಡಿಲು ಬಡಿದು 11 ಮೇಕೆ, ಓರ್ವ ಮಹಿಳೆ ಸಾವು

ಬಿಸಿಲುನಾಡು ಕಲಬುರಗಿಯಲ್ಲಿ ನಿನ್ನೆಯಿಂದ ಧಿಡೀರನೆ ಮಲೆನಾಡಿನಂತೆ ಬದಲಾಗಿದೆ. ಪರಿಣಾಮ ಸಿಡಿಲು ಬಡಿದು 11 ಮೇಕೆಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಜೋಳ ಗ್ರಾಮದಲ್ಲಿ ನಡೆದಿದೆ. ಅದೇ ರೀತಿಯಾಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟಿದ್ದಾರೆ.

ಕಲಬುರಗಿ: ಮಳೆಯ ಅಬ್ಬರ, ಸಿಡಿಲು ಬಡಿದು 11 ಮೇಕೆ, ಓರ್ವ ಮಹಿಳೆ ಸಾವು
ಪ್ರಾತಿನಿಧಿಕ ಚಿತ್ರ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 03, 2023 | 3:36 PM

ಕಲಬುರಗಿ, ಸೆಪ್ಟೆಂಬರ್​ 3: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರದಿಂದಾಗಿ ಸಿಡಿಲು (lightning strike) ಬಡಿದು 11 ಮೇಕೆಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಜೋಳ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಪೂಜಾರಿ ಎಂಬುವರಿಗೆ ಸೇರಿದ 11 ಮೇಕೆಗಳು ಮಳೆ ಹಿನ್ನೆಲೆ ಮರದ ಕೆಳಗೆ ಆಶ್ರಯ ಪಡೆದಿದ್ದು, ಈ ವೇಳೆ ಸಿಡಿಲು ಬಡಿದು ಮೃತಪಟ್ಟಿವೆ. ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಿಡಿಲು ಬಡಿದು ಓರ್ವ ಮಹಿಳೆ ಸಾವು

ಅದೇ ರೀತಿಯಾಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟಿದ್ದಾರೆ. ಗ್ರಾಮದ ಮೂವತ್ತೈದು ವರ್ಷದ ಕಲಾವತಿ ಮೃತ ಮಹಿಳೆ. ನಿನ್ನೆ ಸಂಜೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾಳೆ.

ಇನ್ನೋರ್ವ ಮಹಿಳೆ ಘಟನೆಯಲ್ಲಿ ಗಾಯಗೊಂಡಿದ್ದು, ಆಕೆಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಫಜಲಪುರ ತಹಶಿಲ್ದಾರ್ ಸಂಜೀವ್ ಕುಮಾರ್ ದಾಸರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಬಣ್ಣಬಣ್ಣದ ದೀಪಗಳಿಂದ ಜಗಮಗಿಸುತ್ತಿರುವ ಆಲಮಟ್ಟಿ ಡ್ಯಾಂ ಟೂರ್​​ ಮಾಡೋಣಾ ಬನ್ನೀ

ಬಿಸಿಲುನಾಡು ಕಲಬುರಗಿಯಲ್ಲಿ ನಿನ್ನೆಯಿಂದ ಧಿಡೀರನೆ ಮಲೆನಾಡಿನಂತೆ ಬದಲಾಗಿದೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಮಳೆಯಾಗದೇ ಇದ್ದಿದ್ದರಿಂದ ಕಲಬುರಗಿ ಜನರು ಕಂಗಾಲಾಗಿದ್ದಾರೆ. ಮಳೆಗಾಲದಲ್ಲಿ ಕೂಡಾ ಬೇಸಿಗೆಯ ಬಿಸಿಲಿನ ಅನುಭವ ಜಿಲ್ಲೆಯ ಜನರಿಗೆ ಆಗಿತ್ತು. ಆದರೆ ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಬಾರಿ ಮಳೆ ಆಗುತ್ತಿದ್ದು, ಧಿಡೀರನೆ ಬಿಸಿಲನಾಡು ಮಲೆನಾಡಿನಂತಾಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಜನರು, ಅನೇಕ ತೊಂದರೆಗೆ ಸಿಲುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ನವರೇ ಕೆಲವರಿಗೆ ಬ್ಲಾಕ್​ಮೇಲ್ ಮಾಡುತ್ತಿದ್ದಾರೆ: ಬಿಜೆಪಿ ಶಾಸಕ ಡಾ ಸಿಎನ್​ ಅಶ್ವತ್ಥ್ ನಾರಾಯಣ ಆರೋಪ

ನಿನ್ನೆ ರಾತ್ರಿಯಿಂದ ಕಲಬುರಗಿ ನಗರದಲ್ಲಿ ಜಿಟಿಜಿಟಿ ಮಳೆ ಆರಂಭವಾಗಿತ್ತು. ಆದರೆ ಇಂದು ಮುಂಜಾನೆ ಎರಡು ಗಂಟಗೂ ಹೆಚ್ಚು ಕಾಲ ನಗರದಲ್ಲಿ ಬಾರಿ ಮಳೆ ಸುರಿಯಿತು. ಬಾರಿ ಮಳೆಯಿಂದ ನಗರದ ಶರಣಬಸವೇಶ್ವರ ದೇವಸ್ಥಾನ ರಸ್ತೆ ಸೇರಿದಂತೆ ಅನೇಕ ಕಡೆ ರಸ್ತೆಗಳು ಜಲಾವೃತಗೊಂಡಿದ್ದವು. ಹೀಗಾಗಿ ವಾಹನ ಸವಾರರು ಕೆಲಹೊತ್ತು ಪರದಾಡಿದ್ದಾರೆ.

ಜಿಟಿಜಿಟಿ ಮಳೆಯಾಗುತ್ತಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು. ಒಂದಡೆ ಮಳೆಯಿಂದ ರಸ್ತೆಗಳು ಜಲಾವೃತಗೊಂಡರೆ ಮತ್ತೊಂದಡೆ ತಗ್ಗು ಪ್ರದೇಶದಲ್ಲಿದ್ದ ಅನೇಕ ಅಂಗಡಿಗಳಿಗೆ ಮಳೆ ನೀರು ಹೊಕ್ಕಿತ್ತು. ಇದರಿಂದ ಅಂಗಡಿ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕಲಬುರಗಿ ನಗರದ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ ಕೂಡಾ ಜಲಾವೃತಗೊಂಡಿತ್ತು. ನೀರು ಹರಿದುಕೊಂಡು ಹೋಗಲು ವ್ಯವಸ್ಥೆ ಇಲ್ಲದೇ ಇದ್ದಿದ್ದರಿಂದ ಮಕ್ಕಳ ಆಟಿಕೆಗಳು ಜಲಾವೃತಗೊಂಡಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.