ಚಿಕ್ಕಬಳ್ಳಾಪುರ, ಅಕ್ಟೋಬರ್ 17: ಬಳ್ಳಾರಿಯ ಐರನ್‍ಓರ್ ಮೀರಿಸುವ ಹಾಗೆ ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನಲ್ಲಿ ಕಲ್ಲು, ಕ್ವಾರಿ, ಗ್ರಾನೈಟ್ ದಂಧೆ ಜೋರಾಗಿದೆ. ಕಲ್ಲು ಕ್ವಾರಿ, ಕ್ರಷರ್, ಗ್ರಾನೈಟ್ ದಂಧೆಯಲ್ಲಿ ಸರ್ಕಾರಕ್ಕೆ ತೋರಿಸುವುದು ಒಂದು ಲೆಕ್ಕವಾದರೇ, ಗ್ರಾನೈಟ್ ಮಾಫಿಯಾದವರು (Mining Mafia) ಮಾಡುವುದು ಇನ್ನೊಂದು ಲೆಕ್ಕವಾಗಿದೆ. ಇದರಿಂದ ಹೆಚ್ಚೆತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಾಟ ಮಾಡುವ ಟಿಪ್ಪರ್ ಗಳು, ಲಾರಿಗಳಿಗೆ ಜಿಪಿಎಸ್ ಯಂತ್ರ ಅಳವಡಿಸಿ 24 ಗಂಟೆಗಳ ಕಾಲ ಆನ್‍ಲೈನ್ ಮಾನಿಟರಿಂಗ್ (Online Monitoring) ಮಾಡುವ ಒನ್ ಸ್ಟೇಟ್ ಒನ್ ಜಿಪಿಎಸ್ (One State One GPS) ವ್ಯವಸ್ಥೆ ಜಾರಿ ಮಾಡಿದೆ.
ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನಿತರೆ ಕಡೆ ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್ಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಸ್ಟೋನ್ ಕ್ರಷರ್ಗಳು ಹಾಗೂ ಕ್ವಾರಿಗಳಿಂದ ಹೊರಡುವ ಟಿಪ್ಪರ್ ಮತ್ತು ಲಾರಿಗಳಿಗೆ ಪರ್ಮಿಟ್ ನೀಡಲಾಗುತ್ತಿದೆ. ಇಲಾಖೆಯ ಜಿಪಿಎಸ್ ಇರುವ ಟಿಪ್ಪರ್ಗಳಿಗೆ ಮಾತ್ರ ಪರ್ಮಿಟ್ ನೀಡಲಾಗುತ್ತಿದೆ. ಟಿಪ್ಪರ್ಗಳಲ್ಲಿನ ಕಲ್ಲಿನ ಉತ್ಪನ್ನಗಳಿಗೆ ತಲಾ ಟನ್‍ಗೆ 107 ರೂಪಾಯಿ ರಾಜಧನ ನಿಗಧಿ ಮಾಡಲಾಗಿದೆ. ನಿಗಧಿತ ದಿನಾಂಕ, ಸಮಯ, ಮಾರ್ಗ ಮತ್ತು ನಿಗದಿತ ಸ್ಥಳಕ್ಕೆ ಕಲ್ಲಿನ ಸಾಮಾಗ್ರಿಗಳ ಸರಬರಾಜು ಮಾಡಬಹುದಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಳವಡಿಸಿರುವ ಜಿಪಿಎಸ್ ತಂತ್ರಜ್ಞಾನವನ್ನು ತಿರುಚುವುದು, ಜಿಪಿಎಸ್ ಆಪ್ ಮಾಡುವುದು, ಯಂತ್ರದ ಬ್ಯಾಟರಿ ತೆಗೆದು ಹಾಕುವುದು, ಪರ್ಮಿಟ್ ನಿಯಮ ಉಲ್ಲಂಘನೆ ಮಾಡಿರುವುದು, ಆನ್‍ಲೈನ್ ಮಾನಿಟರಿಂಗ್ ಸಿಸ್ಟಂ ಒನ್ ಸ್ಟೇಟ್ ಒನ್ ಜಿಪಿಎಸ್ ಸಾಫ್ಟ್ವೇರ್ನಲ್ಲಿ ಕಂಡುಬಂದ ಹಿನ್ನೆಲೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 22 ಟಿಪ್ಪರ್ಗಳ ಜಿಪಿಎಸ್ ಲಾಕ್ ಮಾಡಲಾಗಿದೆಯೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀಮತಿ ಕೃಷ್ಣವೇಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ನಾಟಿ ಔಷಧಿ ಸೇವನೆ: ಮಗ ಸಾವು, ತಂದೆ-ಮಗಳು ಬಚಾವ್!
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ 1117 ಟಿಪ್ಪರ್ ಗಳಿಗೆ ಜಿ.ಪಿ.ಸ್ ಅಳವಡಿಸಲಾಗಿದೆ, ಅವುಗಳ ಚಲನವಲನಗಳನ್ನು ಆನ್ ಲೈನ್ ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ನಿಯಮ ಉಲ್ಲಂಘನೆ ಮಾಡುವ ವಾಹನಗಳಿಗೆ ಉತ್ನನ್ನಗಳ ಸಾಗಾಟಕ್ಕೆ ಅವಕಾಶ ನೀಡುತ್ತಿಲ್ಲವೆಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Tue, 17 October 23