ಚಿಕ್ಕಬಳ್ಳಾಪುರ: ಸಂಬಂಧಿಕನಿಂದಲೇ ಅತ್ಯಾಚಾರ, 7ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 08, 2024 | 3:15 PM

ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7ನೇ ತರಗತಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿಯಾದ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಬಳ್ಳಾಪುರ: ಸಂಬಂಧಿಕನಿಂದಲೇ ಅತ್ಯಾಚಾರ, 7ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಬಳ್ಳಾಪುರ, ಮಾ.08: 7ನೇ ತರಗತಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿಯಾದ ಕುರಿತು ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿ ಯುವಕನೇ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದ್ದು, ಓದುವ ವಯಸ್ಸಿನಲ್ಲಿ ಗರ್ಭಿಣಿಯಾದ ಅಪ್ರಾಪ್ತೆಯ ಸ್ಥಿತಿ ನೋಡಿ ಪೋಷಕರು ಕಂಗಾಲಾಗಿದ್ದಾರೆ. ಇದೀಗ ಬಾಲಕಿಯನ್ನ ರಕ್ಷಿಸಿ ಸರ್ಕಾರಿ ಬಾಲಕಿಯರ ಬಾಲಮಂದಿರಲ್ಲಿ ಆರೈಕೆ ಮಾಡಲಾಗಿದ್ದು, ಸಾರ್ವಜನಿಕರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದ್ದು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಈ ಪ್ರಕರಣ ಬೆಳಕಿಗೆ ಬಂದಿದೆ.

9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿ

ಹಾಸ್ಟೆಲ್​ನಲ್ಲಿ ಉಳಿದುಕೊಂಡು 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿಯಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಳೆದ ಜ.11 ರಂದು ನಡೆದಿತ್ತು. ಹಾಸ್ಟೆಲ್​ನಲ್ಲಿ ಬಾಲಕಿ ಚಲನವಲನವನ್ನು ಹಾಸ್ಟೆಲ್ ವಾರ್ಡನ್ ಗಮನಿಸಿಲ್ಲ, ಗರ್ಭಿಣಿಯಾದರೂ ಗೊತ್ತಾಗಿಲ್ಲ. ಹೀಗಾಗಿ ಕರ್ತವ್ಯ ಲೋಪ ಹಿನ್ನೆಲೆ ವಾರ್ಡನ್ ನಿವೇದಿತಾರನ್ನು ಅಮಾನತು ಮಾಡಲಾಗಿತ್ತು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ‌‌ ನಿವಾಸಿಯಾಗಿರುವ ಬಾಲಕಿ ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಇದನ್ನೂ ಓದಿ:ತುಮಕೂರು: ಗರ್ಭಿಣಿಯಾದ 9ನೇ ತರಗತಿ ವಿದ್ಯಾರ್ಥಿನಿ; ಹಾಸ್ಟೆಲ್ ವಾರ್ಡನ್ ಅಮಾನತು

ಆದರೆ,  ಏಳು ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆ ನೋವಿನಿಂದ ತಾಯಿಯ ಜೊತೆಗೆ ಬಾಗೆಪಲ್ಲಿ ಆಸ್ಪತ್ರೆಗೆ ತೆರಳಿದ್ದಾಗಿ ಪ್ರಕರಣ ಬೆಳಕಿಗೆ ಬಂದಿತ್ತು . ಆಸ್ಪತ್ರೆ ಸಿಬ್ಬಂದಿ ಸ್ಕ್ಯಾನಿಂಗ್ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ಸ್ಥಳೀಯ ಯುವಕನ ಜೊತೆ ಬಾಲಕಿ ಲೈಗಿಂಕ ಸಂರ್ಪಕದಲ್ಲಿದ್ದಳು ಎನ್ನಲಾಗುತ್ತಿದೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹಾಸ್ಟೆಲ್ ವಾರ್ಡನ್​ನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ‌ ಜಿ.ಪ್ರಭು ಆದೇಶ ಹೊರಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ