ಚಿಕ್ಕಬಳ್ಳಾಪುರ, ಡಿ.24: ಎಸ್ಬಿಐ(SBI) ಬ್ಯಾಂಕ್ಗೆ ಸೇರಿದ ಎಟಿಎಂ(ATM)ಗೆ ನುಗ್ಗಿದ ಖದೀಮರು, ಬರೊಬ್ಬರಿ 20 ಲಕ್ಷ ರೂ. ಹಣವನ್ನು ಕದ್ದು, ಬಳಿಕ ಎಟಿಎಂಗೆ ಬೆಂಕಿ ಹಾಕಿದ ಘಟನೆ ಚಿಕ್ಕಬಳ್ಳಾಪುರ(Chikkaballapur) ನಗರದ ಎಂ.ಜಿ ರಸ್ತೆಯ ದರ್ಗಾ ಬಳಿ ನಡೆದಿದೆ. ಸದರಿ ಎ.ಟಿ.ಎಂ ನ್ನು ಹಿಟಾಚಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಸಿ.ಎಂ.ಎಸ್ ಸಂಸ್ಥೆ ಹಣ ತುಂಬುವ ಕೆಲಸ ಮಾಡುತ್ತಿತ್ತು. ಆದ್ರೆ, ತಡರಾತ್ರಿ ಎ.ಟಿ.ಎಂ ಗೆ ನುಗ್ಗಿರುವ ದುಷ್ಕರ್ಮಿಗಳ ತಂಡ, ಎಟಿಎಂ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಬಳಸಿ ನಂತರ ಗ್ಯಾಸ್ ಕಟರ್ನಿಂದ ಎಟಿಎಂ ಬಾಗಿಲುಗಳನ್ನು ಕಟ್ ಮಾಡಿದ್ದಾರೆ.
ನಂತರ ಎಟಿಎಂನಲ್ಲಿದ್ದ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಕದ್ದು ಎಟಿಎಂ ಯಂತ್ರಕ್ಕೆ ಗ್ಯಾಸ್ ಕಟರ್ನಿಂದಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಎಟಿಎಂ ಕಟ್ಟಡದ ಮಾಲಿಕ ಶ್ರೀನಿವಾಸ್ ತಿಳಿಸಿದ್ದಾರೆ. ಇನ್ನು ಈ ಖತರ್ನಾಕ್ ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತಿಚೀಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು ಹಾಗೂ ಪೊಶೆಟ್ಟಿಯಲ್ಲಿ ಇದೆ ರೀತಿಯ ಕೆಲವು ಘಟನೆಗಳು ನಡೆದಿವೆ. ಆದ್ರೆ, ಆರೋಪಿಗಳು ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನೆಲಮಂಗಲ: ಎಟಿಎಂ ಹಣ ದೋಚಲು ವಿಫಲ ಯತ್ನ, ಸಾವಿರಾರು ರೂಪಾಯಿ ಬೆಂಕಿಗೆ ಆಹುತಿ
ನಿನ್ನೆ(ಡಿ.23) ಮದ್ಯರಾತ್ರಿಯೇ ಘಟನೆ ಆಗಿದ್ದರೂ, ಇಂದು ಮಧ್ಯಾನ್ನದವರೆಗೂ ಯಾರ ಗಮನಕ್ಕೂ ಬಂದಿಲ್ಲ. ಕಟ್ಟಡದ ಮಾಲೀಕ ಶ್ರೀನಿವಾಸ್ ಎಂಬುವವರು ಎಟಿಎಂ ಗೆ ಬಂದು ನೋಡಿದಾಗ ಪ್ರಕರಣ ಬಯಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್ ಹಾಗೂ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ