ಚಿಕ್ಕಬಳ್ಳಾಪುರ: ಸರಣಿ ಅಪಘಾತದಲ್ಲಿ ಮೂವರು ದುರ್ಮರಣ; ಐವರಿಗೆ ಗಂಭೀರ ಗಾಯ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚೊಕ್ಕರೆಡ್ಡಿಹಳ್ಳಿ ಬಳಿ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಬಸ್, ಬೈಕ್, ಬೊಲೇರೋ ಹಾಗೂ ಆಟೋಗಳ ನಡುವೆ ಡಿಕ್ಕಿ ಸಂಭವಿಸಿದೆ. ಐವರಿಗೆ ಗಂಭೀರ ಗಾಯಗಳಾಗಿವೆ. ಚಿಂತಾಮಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ, ನವೆಂಬರ್ 09: ಜಿಲ್ಲೆಯ ಚಿಂತಾಮಣಿ ತಾಲೂಕಿನ ಚೊಕ್ಕರೆಡ್ಡಿಹಳ್ಳಿ ಬಳಿ ಬಸ್, ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಶ್ರೀನಿವಾಸ್(50), ನರಸಮ್ಮ(50) ಮತ್ತು ರಾಮಾಂಜಿನಮ್ಮ(45) ಮೃತರು. ವೆಂಕಟೇಶ್, ಪ್ರೀತಿ, ಪ್ರಿಯಾಂಕಾ ಸೇರಿ ಐವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಡಿವೈಎಸ್ಪಿ ರಘು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದಿದ್ದೇನು?
ಚಿಂತಾಮಣಿ ತಾಲೂಕಿನ ಚೊಕ್ಕರೆಡ್ಡಿಹಳ್ಳಿ ಬಳಿ ಬಸ್, ಎರಡು ಆಟೋಗಳು, ಬೊಲೆರೋ ವಾಹನ ಹಾಗೂ ಬೈಕ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ದುರಂತದಲ್ಲಿ ಚಿಂತಾಮಣಿ ತಾಲೂಕಿನ ಬ್ರಾಹ್ಮಣರಹಳ್ಳಿ ನಿವಾಸಿಗಳು ಮೃತಪಟ್ಟಿದ್ದಾರೆ.
ಇವಿ ಬಿಎಂಟಿಸಿ ಬಸ್ ಹರಿದು ಚಾಲಕ ಸಾವು: ಡಿಪೋದಲ್ಲೇ ಸಂಭವಿಸಿದ ದುರಂತ
ಬೆಂಗಳೂರಿನ ಬಿಡದಿಯ ಬಿಎಂಟಿಸಿ ಬಸ್ ಡಿಪೋದಲ್ಲಿ ಇವಿ ಬಸ್ ಹರಿದು ಚಾಲಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ನವೆಂಬರ್ 6ರಂದು ಮಧ್ಯಾಹ್ನ ಸುಮಾರು 3:15ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಶಿವಕುಮಾರ್ (24) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಶಾರ್ಟ್ ಸರ್ಕ್ಯೂಟ್‌ಗೆ ಸುಟ್ಟು ಭಸ್ಮವಾದ ಮೂರು ಅಂಗಡಿಗಳು!
ಇವರು ಇದೇ ಡಿಪೋದಲ್ಲಿ ಇವಿ ಬಿಎಂಟಿಸಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಸ್ ನಿಲ್ಲಿಸಿ ವಾಪಸ್ ಬರುತ್ತಿದ್ದ ವೇಳೆ ಮತ್ತೊಂದು ಇಲೆಕ್ಟ್ರಿಕ್ ಬಿಎಂಟಿಸಿ ಬಸ್ ಅಚಾನಕ್ ಬಂದು ಅವರ ಮೈಮೇಲೆ ಹರಿದಿದೆ. ಘಟನೆಯ ದೃಶ್ಯ ಡಿಪೋದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎರಡು ದಿನ ಸಾವು ಬದುಕಿನ ಹೋರಾಟ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಅವರು, ಚಿಕಿತ್ಸೆ ಫಲಕಾರಿಯಾಗದೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಮೂಲತಃ ರಾಣೆಬೆನ್ನೂರಿನವರಾದ ಶಿವಕುಮಾರ್ ಖಾಸಗಿ ಏಜೆನ್ಸಿ ಮೂಲಕ ಬಿಎಂಟಿಸಿ ಇವಿ ಬಸ್ ಚಾಲಕರಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




