ಚಿಕ್ಕಬಳ್ಳಾಪುರ: ಪಿಎಸ್ಐ ನೇಮಕಾತಿ ಅಕ್ರಮ(PSI Recruitment Scam) ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಗೆ (Amruth Paul) ಸೇರಿದ ಫಾರ್ಮ್ ಹೌಸ್ ಗೆ ಸಿಐಡಿ(CID) ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ ನಲ್ಲಿ ನೆಟರಾಮ್ ಬನ್ಸಾಲ್ ಬಿನ್ ಲೇಟ್ ಬಾಲಕ್ ರಾಮ್ ಹೆಸರಿನಲ್ಲಿ ಇರುವ ಫಾರ್ಮ್ ಹೌಸ್ ತಲಾಶ್ ನಡೆಯುತ್ತಿದೆ. ಒಟ್ಟು 12 ಸರ್ವೆ ನಂಬರ್ಗಳಲ್ಲಿ ಫಾರ್ಮ್ ಹೌಸ್ ಜಮೀನು ಇದೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಮಾಡಿದ ಆರೋಪದ ಹಿನ್ನೆಲೆ ಸಿಐಡಿ ಪೊಲೀಸರು ಐಪಿಎಸ್ ಅಧಿಕಾರಿ ಅಮೃತ್ ಪೌಲ್ ರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಅಮೃತ್ ಪೌಲ್ ರ ಒಂದೊಂದೆ ಇತಿಹಾಸವನ್ನು ಎಕ್ಕಿ ತೆಗೆಯುತ್ತಿದ್ದಾರೆ. ಇನ್ನೂ ಇಂದು(ಜುಲೈ 06) ಅಮೃತ್ ಪೌಲ್ ರವರು ಬೇನಾಮಿ ಹೆಸರಿನಲ್ಲಿ ಮಾಡಿರುವ ಫಾರ್ಮ್ ಹೌಸ್ ಮೇಲೆ ಸಿಐಡಿ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಹೊಸ ಮನೆಗಳ ನಿರ್ಮಾಣ ಮಾಡುವುದಿಲ್ಲ ಹಾಗೂ ಜನರನ್ನು ಒಕ್ಕಲೆಬ್ಬಿಸುವುದಿಲ್ಲ: ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟನೆ
ರಾಷ್ಟ್ರೀಯ ಹೆದ್ದಾರಿ 234, ಚಿಕ್ಕಮಂಗಳೂರು ಜಿಲ್ಲೆ ಮೂಡಗೇರೆ ಟೂ ತಮಿಳುನಾಡಿನ ತಿರುವಣ್ಣಮಲೈಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ಹೊಂದುಕೊಂಡಂತೆ ಹೊಸಹುಡ್ಯ ಗ್ರಾಮದ ಬಳಿ ಅಮೃತ್ ಪೌಲ್ ಬೇನಾಮಿ ಹೆಸರಿನಲ್ಲಿ ಅಂದರೆ ನೆಟರಾಮ್ ಬನ್ಸಲ್ ಅನ್ನೋರ ಹೆಸರಿನಲ್ಲಿ ಒಟ್ಟು 12 ಸರ್ವೆ ನಂಬರ್ ಗಳಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಕೃಷಿ ಯೋಗ್ಯ ಭೂಮಿ 3 ಎಕರೆ 30 ಗುಂಟೆ ಭೂಮಿ ಇರುವುದು ಪತ್ತೆಯಾಗಿದೆ. ಸಿಐಡಿ ಡಿವೈಎಸ್ಪಿ ವಿರೇಂದ್ರಕುಮಾರ್ ನೇತೃತ್ವದಲ್ಲಿ ಆರು ಜನರ ತಂಡ ಫಾರ್ಮ್ ಹೌಸ್ ಗೆ ಭೇಟಿ ನೀಡಿ ದಾಖಲೆಗಳ ತಲಾಶ್ ನಡೆಸಿದೆ. ಜಮೀನಿನಲ್ಲಿ ಮಾವು ತೇಗು ಹಾಗೂ ತೆಂಗಿನ ಮರಗಳನ್ನು ಬೆಳೆಸಲಾಗಿದೆ. ಅರ್ಧ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಫಾರ್ಮ್ ಹೌಸ್ ನಿರ್ಮಾಣ ಮಾಡಲಾಗಿದೆ. ಕೇರಳ ಶೈಲಿಯಲ್ಲಿ ಫಾರ್ಮ್ ಹೌಸ್ ನಿರ್ಮಾಣ ಮಾಡಲಾಗಿದೆ.
ಫಾರ್ಮ್ ಹೌಸ್ ಒಳಗಡೆಯೆ ಈಜುಕೋಳ ನಿರ್ಮಾಣ ಮಾಡಲಾಗಿದೆ. ಇನ್ನೂ ರಜೆ ದಿನಗಳನ್ನು ಪೌಲ್ ಇಲ್ಲಿಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೊಬಳಿಯ ಹುಸಹುಡ್ಯ ಗ್ರಾಮದ ಸರ್ವೆ ನಂಬರ್ 251/2. 251/3. 252/2. 252/3. 253/2, 253/3. 250/2. 249/3, 249/2, 248/3, 148/2, 247/5, 247/2 ಒಟ್ಟು 12 ಸರ್ವೆ ನಂಬರ್ ಗಳಲ್ಲಿ ಜಮೀನು ಇರುವುದು ಗೊತ್ತಾಗಿದೆ. ಎಲ್ಲಾ ಭೂಮಿ ನೆಟರಾಮ್ ಬನ್ಸಲ್ ಹೆಸರಿನಲ್ಲಿ ಇದ್ದು ಪೌಲ್ ರವರ ಬೇನಾಮಿ ಆಗಿರಬೇಕು ಎಂದು ಶಂಕೆ ವ್ಯಕ್ತವಾಗಿದೆ. ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: Crime News: ಬಕ್ರೀದ್ಗಾಗಿ 250 ಮೇಕೆ ಕದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್..!
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
Published On - 5:37 pm, Wed, 6 July 22