Year End 2022: ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಭೀತಿ -ಪಾರ್ಟಿ ಪ್ರಿಯರ ಚಿತ್ತ ನಂದಿಗಿರಿಧಾಮದ ಸುತ್ತಮುತ್ತ! ಎಲ್ಲಾ ಹೌಸ್ ಫುಲ್!
ಚಿಕ್ಕಬಳ್ಳಾಫುರ ಜಿಲ್ಲಾ ಪೊಲೀಸರು ರಾತ್ರಿ 11.30ರವೆರೆಗೆ ಮಾತ್ರವೇ ಪಾರ್ಟಿ, ಸಂಭ್ರಮಾಚರಣೆಗೆ ಅವಕಾಶ ನೀಡಿದ್ದಾರೆ. ನೀತಿ ನಿಯಮ ಉಲ್ಲಂಘಿಸಿ ಪಾರ್ಟಿ ಮೋಜು ಮಸ್ತಿ ಅವ್ಯವಹಾರ ಮಾಡಿದ್ರೆ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ ಎಚ್ಚರಿಸಿದ್ದಾರೆ.
ಇನ್ನೇನು ಹೊಸ ವರ್ಷ (New Year 2023) ಬಂದೆ ಬಿಡ್ತು ಅಂತಾ ಈ ಬಾರಿ ಜೋರಾಗಿ ಪಾರ್ಟಿ ಮೂಡಲ್ಲಿದ್ದ ಪಾರ್ಟಿ ಪ್ರಿಯರಿಗೆ, ಮತ್ತದೇ ಪೆಡಂಭೂತವಾಗಿ ಕಾಡತೊಡಗಿದೆ! ಕೊರೊನಾ ಸೋಂಕಿನ ಭೀತಿ (Covid 19) ಮತ್ತೆ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bangalore) ಹೆಜ್ಜೆಹೆಜ್ಜೆಗೂ ಕೊರೊನಾ ಹಾಗೂ ಪೊಲೀಸರ ನಿರ್ಬಂಧದ ಭೀತಿ ಹಿನ್ನೆಲೆ ಪಾರ್ಟಿ ಪ್ರಿಯರ ಚಿತ್ತ ನಂದಿಗಿರಿಧಾಮದ (Nandi Hills) ಸುತ್ತಮುತ್ತ ಮೂಡಿದ್ದು, ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಗಳು ಹೌಸ್ ಫುಲ್ ಆಗಿವೆ. ಈ ಕುರಿತು ಒಂದು ವರದಿ.
ಕೊರೊನಾ ಸೋಂಕು ಹೊಂಟೋಯ್ತು ಅಂತ ಜನ ಫುಲ್ ಖುಷಿಯಾಗಿದ್ದು, ಈ ಬಾರಿ ಹೊಸ ವರ್ಷದಲ್ಲಿ ಜೋರಾದ ಪಾರ್ಟಿ ಮೂಡಲ್ಲಿ ಇದ್ರು. ಆದ್ರೆ ವಿದೇಶಿ ಕೊರೊನಾಗಳು ಮತ್ತೆ ಅಪ್ಪಳಿಸುವ ಭೀತಿ ಹಿನ್ನೆಲೆ ಸರ್ಕಾರ ಪಾರ್ಟಿ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಗಳು ಲಾಡ್ಜ್ ಗಳಿಗೆ ನಿರ್ಬಂಧ ವಿಧಿಸಿದೆ.
ಇದ್ರಿಂದ ರಾಜಧಾನಿ ಬೆಂಗಳೂರಿನ ಜನ, ಬೆಂಗಳೂರು ನಗರದ ಬದಲು ಹೊರವಲಯದತ್ತ ಚಿತ್ತ ಹರಿಸಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಫುರ ತಾಲೂಕಿನ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್ ಹೋಮ್ ಸ್ಟೇ ಗಳತ್ತ ಚಿತ್ತ ಹರಿಸಿದ್ದಾರೆ. ಇದ್ರಿಂದ ವಾರಕ್ಕೂ ಮುಂಚೆ ಇರೊಬರೊ ರೂಮ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ.
Also Read:
ಬಾಂಬ್ ಸ್ಫೋಟ ನೆನಪಿಸಿಕೊಂಡ ಬೆಂಗಳೂರು ಪೊಲೀಸ್ ಕಮಿಷನರ್: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬಿಗಿ ಬಂದೋಬಸ್ತ್
ನಂದಿಗಿರಿಧಾಮದ ಬಳಿ ಡಿಸ್ಕವರಿ ವಿಲೇಜ್ ರೆಸಾರ್ಟ್ ಅಭಿನಂದನ್ ಹೋಟೆಲ್, ಮೌಂಟ್ ವ್ಯೂ, ಸಿಂಚನಾ ಪ್ಯಾಲೆಸ್, ಎಸ್.ಆರ್.ಕೆ. ಸೇರಿದಂತೆ ಕೆಲವು ಹೋಮ್ ಸ್ಟೇ ಗಳು ಇವೆ. ಬಹುತೇಕ ಎಲ್ಲಾ ಕಡೆ ರೂಮ್ ಗಳು ಬುಕ್ ಆಗಿವೆ. ಮತ್ತೊಂದೆಡೆ ಚಿಕ್ಕಬಳ್ಳಾಫುರ ಜಿಲ್ಲಾ ಪೊಲೀಸರು ರಾತ್ರಿ 11.30ರವೆರೆಗೆ ಮಾತ್ರವೇ ಪಾರ್ಟಿ, ಸಂಭ್ರಮಾಚರಣೆಗೆ ಅವಕಾಶ ನೀಡಿದ್ದಾರೆ.
ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ಮೋಜು ಮಸ್ತಿ ಅಂತ ಅನೈತಿಕ ಅಶ್ಲೀಲ ಅವ್ಯವಹಾರ ಮಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ ಎಚ್ಚರಿಸಿದ್ದಾರೆ.
ಒಟ್ನಲ್ಲಿ ಕೊರೊನಾ ಸೋಂಕಿನ ಭೀತಿ ಈ ಬಾರಿಯೂ… ಹೊಸ ವರ್ಷದ ಸಂಭ್ರಮಾಚರಣೆಯ ಮೇಲೆ ಕರಿನೆರಳು ಬೀರಿದೆ. ಬೆಂಗಳೂರು ಬಿಟ್ಟು ಹೊರವಲಯದತ್ತ ಹೋಗೋಣ ಅಂದ್ರೆ ಎಲ್ಲೆಡೆ ಬುಕಿಂಗ್ ಕ್ಲೋಸ್ ಆಗಿದೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ