ಚಿಕ್ಕಬಳ್ಳಾಪುರ, ಅ.13: ಹಳೇ ದ್ವೇಷ ಹಿನ್ನೆಲೆ ಚಿಂತಾಮಣಿ ನಗರಸಭೆ ಸದಸ್ಯ(Municipal Council Member) ಮುರಳಿ ಎಂಬುವವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಚಿಂತಾಮಣಿಯ ಗಜಾನನ ವೃತ್ತದಲ್ಲಿ ನಡೆದಿದೆ. ನಗರಸಭೆಯ 26ನೇ ವಾರ್ಡ್ ಸದಸ್ಯ ಆಗಿರುವ ಮುರಳಿ ಅವರು ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಮುಗಿಸಿ ನಡೆದುಕೊಂಡು ಹೋಗುತ್ತಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಕೂಡಲೇ ಮುರಳಿಯನ್ನು ಕೋಲಾರದ R.L ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿಂತಾಮಣಿ ತಾಲೂಕಾಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದಾರೆ.
ಇನ್ನು ನಗರಸಭಾ ಸದಸ್ಯರ ವೈಶಮ್ಯೆಕ್ಕೆ ಸುಪಾರಿ ಕೊಲೆಗೆ ಯತ್ನಿಸಿದಂತೆ ಇದ್ದು, ಮುರಳಿ ಅವರ ತಲೆ, ಕೈ, ಕುತ್ತಿಗೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೆ.ಜಿ.ಎಫ್ ಮೂಲದ ರೌಡಿಶೀಟರ್ಗಳಿಂದ ಕೃತ್ಯದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು; ಶಾಲಾ ಶಿಕ್ಷಕಿಯೊಂದಿಗೆ ಹುಟ್ಟಹಬ್ಬ ಆಚರಿಸಿದಕ್ಕೆ ಯುವಕನ ಮೇಲೆ ಮೂವರಿಂದ ಹಲ್ಲೆ, ಎಫ್ಐಆರ್ ದಾಖಲು
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಅಟ್ಯಾಕ್ ಮಾಡುವ ಬಗ್ಗೆ ಮುರುಳಿಗೆ ಮೊದಲೆ ಸುಳಿವು ಸಿಕ್ಕಿತ್ತು. ಹೌದು, ಕಳೆದ ಒಂದು ವಾರದಿಂದ ತನ್ನನ್ನು ಫಾಲೋ ಮಾಡುತ್ತಿರುವವರ ಬಗ್ಗೆ ಗಾಯಾಳು ಮುರುಳಿ ಅವರು ಮೌಖಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರಂತೆ. ಆದರೆ, ಮುರಳಿ ಮಾಹಿತಿಯನ್ನು ಪೊಲೀಸರು ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಚಿಂತಾಮಣಿ ನಗರಠಾಣೆ ಪೊಲೀಸರ ವಿರುದ್ದ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ