ಚಿಕ್ಕಬಳ್ಳಾಪುರ: ಸರ್ಕಾರಿ ವೈದ್ಯರಿಗೆ ಚೆಲ್ಲಾಟ, ಪೊಲೀಸರಿಗೆ ಪೀಕಲಾಟ

| Updated By: Rakesh Nayak Manchi

Updated on: Oct 17, 2023 | 7:50 PM

ವೈದ್ಯರು ಮರಣೋತ್ತರ ಪರೀಕ್ಷೆ ನಡೆಸದ ಕಾರಣ ಚಿಕ್ಕಬಳ್ಳಾಪುರ ಪೊಲೀಸರು, ಹೂತು ಹಾಕಿದ್ದ ಶವವನ್ನು ಮತ್ತೆ ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು, ನಲ್ಲಗುಟ್ಟಪಾಳ್ಯ ಗ್ರಾಮದ ಶ್ರೀನಿವಾಸ್ ಹಾಗೂ ಶಶಿಕಲಾ ದಂಪತಿಯ 7 ವರ್ಷದ ಬಾಲಕ ವೇದೇಶ, ಸ್ಕಿನ್ ಅಲರ್ಜಿಗೆಂದು ಸೇವಿಸಿದ್ದ ನಾಟಿ ಔಷಧಿ ಆತನ ಪ್ರಾಣತೆಗೆದ ಆರೋಪ ಕೇಳಿಬಂದಿತ್ತು.

ಚಿಕ್ಕಬಳ್ಳಾಪುರ: ಸರ್ಕಾರಿ ವೈದ್ಯರಿಗೆ ಚೆಲ್ಲಾಟ, ಪೊಲೀಸರಿಗೆ ಪೀಕಲಾಟ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಬಳ್ಳಾಪುರ, ಅ.17: ನಾಟಿ ಔಷಧಿ ಸೇವಿಸಿ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಧಿಯಿಂದ ಬಾಲಕನ ಮೃತದೇಹದ ಮರಣೋತ್ತವ ಪರೀಕ್ಷೆಯನ್ನು ವೈದ್ಯರು ನಡೆದ ಕಾರಣ ಶವವನ್ನು ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಅಕ್ಟೋಬರ್ 13 ರಂದು ಶ್ರೀನಿವಾಸ, ಆತನ ಮಗಳು ಹಾಗೂ ಮಗ ವೇದೇಶ ಚರ್ಮದ ಅಲರ್ಜಿ ಚಿಕಿತ್ಸೆಗೆಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಬೋಯಿನಹಳ್ಳಿಯ ನಾಟಿ ವೈದ್ಯ ಸತೀಶ್ ಬಳಿ ಹೋಗಿದ್ದರು. ಅಲ್ಲಿ ಅವರು ನೀಡಿದ್ದ ನಾಟಿ ಔಷಧಿ ಸೇವಿಸಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀವಾಸ ಮತ್ತು ಮಗಳು ಚಿಕಿತ್ಸೆ ಫಲಕಾರಿಯಾಗಿ ಬದುಕುಳಿದಿದ್ದಾರೆ. ಆದರೆ ಮಗ ವೇದೇಶ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಂದು ಬೆಳಗಿನ ಜಾವ ಮೃತಪಟ್ಟಿದ್ದ.

ನಡೆಯದ ಮರಣೋತ್ತರ ಪರೀಕ್ಷೆ

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಸೀನಿಯರ್ ಮೆಡಿಕಲ್ ಆಫೀಸರ್ ಡಾ. ಅನಿಲ್, ಬಾಲಕನನ್ನು ಪರೀಕ್ಷೆ ನಡೆಸಿ ಬಾಲಕ ಮೃತಪಟ್ಟಿದ್ದಾಗಿ ಘೋಷಿಸಿದ್ದರು. ಆದರೆ ಬಾಲಕನು ಮೃತಪಟ್ಟ ಬಗ್ಗೆ ದಾಖಲೆಯಲ್ಲಿ ಉಲ್ಲೇಖ ಮಾಡದೇ, ಸಕಾಲಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡದೇ, ಅಂದು ಬಾಲಕನ ಶವವನ್ನು ಪೋಷಕರಿಗೆ ಹಸ್ತಾಂತರಿಸಿದ್ದರು.

ಅಂದು ಸಂಜೆ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಶವ ಕೇಳಿದಾಗ ಶವವಿರಲಿಲ್ಲ. ನಂತರ ಬಾಲಕನ ಗ್ರಾಮಕ್ಕೆ ಭೇಟಿ ನೀಡುವಷ್ಟರಲ್ಲಿ ಶವ-ಸಂಸ್ಕಾರ ಮಾಡಲಾಗಿತ್ತು. ಇದರಿಂದ ಮರಣೋತ್ತರ ಪರೀಕ್ಷೆ ನಡೆಸದೇ ಶವ ಹಸ್ತಾಂತರ ಮಾಡಿದ್ದಕ್ಕೆ ಪೊಲೀಸರು ವೈದ್ಯರ ವಿರುದ್ಧ ಗರಂ ಆಗಿದ್ದಾರೆ.

ಸರ್ಕಾರಿ ವೈದ್ಯರ ಉದ್ಧಟತನ

ಇತ್ತ 7 ವರ್ಷದ ಮಗನನ್ನು ಕಳೆದುಕೊಂಡಿರುವ ಶ್ರೀನಿವಾಸ್ ಹಾಗೂ ಶಶಿಕಲಾ ದಂಪತಿ, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಬೋಯಿನಹಳ್ಳಿ ಗ್ರಾಮದ ನಾಟಿವೈದ್ಯ ಸತೀಶ್ ವಿರುದ್ಧ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯೊಂದರಿಂದ ಅಚಾತುರ್ಯ, 3-ವರ್ಷದ ಮಗೂಗೆ ಎಕ್ಸ್ಪೈರಿಯಾದ ಔಷಧಿ!

ಬಾಲಕ ಅನುಮಾನಸ್ಪದ ಸಾವು ಸಿಆರ್​ಪಿಸಿ 174ಸಿ ರಡಿ ಪೊಲೀಸರು ದೂರು ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ. ತನಿಖೆಗೆ ಪೂರಕವಾಗಿ ಶವ ಸಂಸ್ಕಾರವಾಗಿರುವ ಬಾಲಕನ ಶವ ಮೇಲೆತ್ತಿ ಫೊರೆಂಸಿಕ್ ತಜ್ಞರ ತಂಡ ವರದಿ ಕೊಡಬೇಕಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಫೊರೆಂಸಿಕ್ ತಜ್ಞರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರುಗಳು ಯಾರೊಬ್ಬರೂ ಮರಣೋತ್ತರ ಪರೀಕ್ಷೆಗೆ ಸಮಯ ನಿಗದಿ ಮಾಡದೇ, ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸೂಚಿಸದೇ ಉದ್ಧಟತನ ತೋರಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಬಾಲಕ ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವೈದ್ಯಕೀಯ ಕಾಲೇಜಿನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದರೂ ವೈದ್ಯರು ರಜೆಯ ಕಾರಣಗಳನ್ನು ಹೇಳಿಕೊಂಡು ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಮರಣೋತ್ತರ ಪರೀಕ್ಷೆ ನಡೆಸಿದರೆ ಮುಂದೆ ಕೋರ್ಟ್, ಕಛೇರಿಗೆ ಹೋಗಿ ಸಾಕ್ಷಿ ಹೇಳಬೇಕಾಗುತ್ತೆ ಎನ್ನುವ ಒಣಗೇಡಿತನದಿಂದ ವೈದ್ಯರು ಇತ್ತೀಚಿಗೆ ಮರಣೋತ್ತರ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ