ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯೊಂದರಿಂದ ಅಚಾತುರ್ಯ, 3-ವರ್ಷದ ಮಗೂಗೆ ಎಕ್ಸ್ಪೈರಿಯಾದ ಔಷಧಿ!

ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಫಾರ್ಮಸಿಯ ಸಿಬ್ಬಂದಿಗೆ ತಾನು ಮಾಡಿದ ಎಡವಟ್ಟಿನ ಅರಿವಾಗಿ ಇವರಿಗೆ ಫೋನ್ ಮಾಡಿ ಔಷಧಿ ಬದಲಾಯಿಸಿಕೊಳ್ಳುವಂತೆ ಹೇಳಿದ್ದಾರೆ. ಮಗುವಿಗೆ ತೊಂದರೆಯಾಗದ ಕಾರಣ ಆಸ್ಪತ್ರೆಯವರನ್ನು ಕ್ಷಮಿಸಬಹುದು, ಆದರೆ ಸಮಸ್ಯೆಯಾಗಿದ್ದರೆ ಹೊಣೆ ಹೊರುತ್ತಿದ್ದರೇ ಎಂಬ ಪ್ರಶ್ನೆ ಉದ್ಭವಿಸೋದು ಸಹಜ.

ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯೊಂದರಿಂದ ಅಚಾತುರ್ಯ, 3-ವರ್ಷದ ಮಗೂಗೆ ಎಕ್ಸ್ಪೈರಿಯಾದ ಔಷಧಿ!
|

Updated on: Oct 12, 2023 | 1:20 PM

ಚಿಕ್ಕಬಳ್ಳಾಪುರ: ಅದೊಂದು ಕಾಲವಿತ್ತು, ವೈದ್ಯನೇ ಬ್ರಹ್ಮ ಅಂತ ಜನ ನಂಬುತ್ತಿದ್ದ ಕಾಲ. ಈಗ ವೈದ್ಯಕೀಯ ವೃತ್ತಿ ಪಕ್ಕಾ ಕಮರ್ಷಿಯಲ್ (commercial) ಅಗಿಬಿಟ್ಟಿದೆ. ಆಸ್ಪತ್ರೆಗಳಲ್ಲಿ ಅಚಾತುರ್ಯಗಳು ನಡೆಯವುದನ್ನು ನಾವು ವರದಿ ಮಾಡುತ್ತರುತ್ತೇವೆ. ಎಲ್ಲ ವೈದ್ಯರು ದುಡ್ಡಿನ ಹಿಂದೆ ಬಿದ್ದಿದ್ದಾರೆ ಅಂತ ನಾವು ಹೇಳುತ್ತಿಲ್ಲ. ಸಮರ್ಪಣಾ ಮನೋಭಾವದಿಂದ (committed to profession) ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಅನೇಕ ವೈದ್ಯರು ನಮ್ಮ ನಡುವೆ ಇದ್ದಾರೆ. ಚಿಕ್ಕಬಳ್ಳಾಪುರದಲ್ಲಿರುವ ಸುರಕ್ಷಾ ಹೆಸರಿನ ನರ್ಸಿಂಗ್ ಹೋಂ (Suraksha Nursing Home) ಒಂದರಲ್ಲಿ ನಿನ್ನೆ ಅಚಾತುರ್ಯವೊಂದು ನಡೆದಿದೆ. ನರ್ಸಿಂಗ್ ಹೋಂಗಳಲ್ಲಿ ಸಾಮಾನ್ಯವಾಗಿ ಅವರದ್ದೇ ಫಾರ್ಮಸಿ ಇರುತ್ತದೆ. ಮಾಧ್ಯಮಗಳೊದಿಗೆ ಮಾತಾಡುತ್ತಿರುವ ಈ ವ್ಯಕ್ತಿಯ ಮೂರು-ವರ್ಷದ ಮಗನಿಗೆ ಸುರಕ್ಷಾ ಅಸ್ಪತ್ರೆಯ ಫಾರ್ಮಸಿ ಅವಧಿ ಮುಗಿದ ಔಷಧಿಯೊಂದನ್ನು ನೀಡಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಫಾರ್ಮಸಿಯ ಸಿಬ್ಬಂದಿಗೆ ತಾನು ಮಾಡಿದ ಎಡವಟ್ಟಿನ ಅರಿವಾಗಿ ಇವರಿಗೆ ಫೋನ್ ಮಾಡಿ ಔಷಧಿ ಬದಲಾಯಿಸಿಕೊಳ್ಳುವಂತೆ ಹೇಳಿದ್ದಾರೆ. ಮಗುವಿಗೆ ತೊಂದರೆಯಾಗದ ಕಾರಣ ಆಸ್ಪತ್ರೆಯವರನ್ನು ಕ್ಷಮಿಸಬಹುದು, ಆದರೆ ಸಮಸ್ಯೆಯಾಗಿದ್ದರೆ ಹೊಣೆ ಹೊರುತ್ತಿದ್ದರೇ ಎಂಬ ಪ್ರಶ್ನೆ ಉದ್ಭವಿಸೋದು ಸಹಜ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us