ಸ್ವಾತಂತ್ರ್ಯ ಅಮೃತ ಮಹೋತ್ಸವದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ತಮ್ಮ ಕಾಲು ನೋವನ್ನು ತೋಡಿಕೊಂಡ್ರು

| Updated By: ಆಯೇಷಾ ಬಾನು

Updated on: Aug 11, 2022 | 5:24 PM

ವಿದುರಾಶ್ವತ್ಥದ ವೀರಸೌಧಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಗೌರಿಬಿದನೂರಿನ ಅಲ್ಕಾಪುರದಿಂದ ವಿಧುರಾಶ್ವತ್ಥದ ವರೆಗೂ ನಡೆಸಿದ ಪಾದಯಾತ್ರೆ ಮುಕ್ತಾಯವಾಗಿದ್ದು ನಾಯಕರು ವೀರ ಸೌಧದ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ತಮ್ಮ ಕಾಲು ನೋವನ್ನು ತೋಡಿಕೊಂಡ್ರು
ಸಿದ್ದರಾಮಯ್ಯ
Follow us on

ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್(DK Shivakumar) ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯುತ್ತಿದ್ದು ಪಾದಯಾತ್ರೆಯ ಕೊನೆಯಲ್ಲಿ ಸಾಂಕೇತಿಕವಾಗಿ ನಾಯಕರು ಭಾಗಿಯಾಗಿದ್ದಾರೆ. ವಿದುರಾಶ್ವತ್ಥ ಗೇಟ್ ನಿಂದ ದೇವಸ್ಥಾನದ ವರೆಗೂ ಭಾಗಿಯಾಗಿದ್ದಾರೆ.

ವಿದುರಾಶ್ವತ್ಥದ ವೀರಸೌಧಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಗೌರಿಬಿದನೂರಿನ ಅಲ್ಕಾಪುರದಿಂದ ವಿದುರಾಶ್ವತ್ಥದ ವರೆಗೂ ನಡೆಸಿದ ಪಾದಯಾತ್ರೆ ಮುಕ್ತಾಯವಾಗಿದ್ದು ನಾಯಕರು ವೀರ ಸೌಧದ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ನನಗೆ ಕಾಲು ನೋವು ಇದೆ ನಡೆಯಲು ಆಗಲ್ಲ

ಇನ್ನು ಚಿಕ್ಕಬಳ್ಳಾಪುರದಲ್ಲಿ ನಡೆದ ಪಾದಯಾತ್ರೆ ವೇಳೆ ಸಿದ್ದರಾಮಯ್ಯ ತಮಗೆ ಕಾಲು ನೋವು ಇರುವುದಾಗಿ ಹೇಳಿಕೊಂಡ್ರು. ನನಗೆ ಕಾಲು ನೋವು ಇದೆ ನಡೆಯಲು ಆಗಲ್ಲ. ಒಂದು ಕೀಲೋ ಮೀಟರ್ ನಷ್ಟ ಮಾತ್ರ ಪಾದಯಾತ್ರೆ ಮಾಡ್ತೇನೆ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡು ಹತ್ತಾರು ಕಿಲೋ ಮೀಟರ್ ನಡೆಯಲು ಹಿಂದೇಟು ಹಾಕಿದ್ರು. ಗೌರಿಬಿದನೂರು ಪ್ರವಾಸಿ ಮಂದಿರದಿಂದ ನೇರವಾಗಿ ವಿಧುರಾಶ್ವತ್ಥಕ್ಕೆ ಹೋರಟು ಹೋದ್ರು. ವಿದುರಾಶ್ವತ್ಥದಲ್ಲಿ ಊಟ ಮಾಡಿ ಸ್ವಾತಂತ್ರ್ಯ ಯೋಧರ ಕುರಿತು ಕಿರು ಚಲನಚಿತ್ರ ವಿಕ್ಷಣೆ ಮಾಡಿದ್ರು. ಡಿಕೆ ಶಿವಕುಮಾರ್ ಬಂದ ಮೇಲೆ ಸ್ಮಾರಕ ಸೌಧಕ್ಕೆ ಪುಷ್ಪ ನಮನ ಸಲ್ಲಿಸಿದ್ರು.

ಇನ್ನು ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೈಕೋರ್ಟ್ ಆದೇಶ ಗೌರವಿಸುತ್ತೇವೆ. ಎಸಿಬಿಯ ಪ್ರಕರಣಗಳು ಲೋಕಾಯುಕ್ತಕ್ಕೆ ಹೋಗುತ್ತವೆ. ಬೇರೆ ರಾಜ್ಯಗಳಲ್ಲೂ ಎಸಿಬಿ ಇದೆ. ಹೈಕೋರ್ಟ್ ಆದೇಶ ನೋಡಿ ಬಳಿಕ ಮಾತನಾಡುತ್ತೇನೆ ಎಂದರು.

Published On - 5:04 pm, Thu, 11 August 22