AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ-ಚಿಕ್ಕಬಳ್ಳಾಪುರ ರೈತರಿಗೆ ಶಾಪವಾದ ಇಂಧನ ಇಲಾಖೆ ಆದೇಶ; ಏನಿದು? 

ಅಲ್ಲಿಯ ಜನರ ಜೀವನಾಡಿಯೇ ಕೃಷಿ. ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಪುಷ್ಪೋದ್ಯಮವೇ ಅವರ ಜೀವನಾಡಿ. ಇನ್ನು ಅಲ್ಲಿ ನದಿ, ನಾಲೆಗಳೇ ಇಲ್ಲ. ಅಲ್ಲಿರುವ ಅಂರ್ತಜಲ ನೀರನ್ನೇ ಬಳಕೆ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಇಂತಹದರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅದೊಂದು ಆದೇಶ, ರೈತರ ಕಾಯಕಕ್ಕೆ ಸಂಕಷ್ಟ ತಂದೊಡ್ಡಿದೆ. ಅಷ್ಟಕ್ಕೂ ಅದ್ಯಾವ ಆದೇಶ, ಅದೇನು ಅಂತೀರಾ? ಇಲ್ಲಿದೆ.

ಕೋಲಾರ-ಚಿಕ್ಕಬಳ್ಳಾಪುರ ರೈತರಿಗೆ ಶಾಪವಾದ ಇಂಧನ ಇಲಾಖೆ ಆದೇಶ; ಏನಿದು? 
ಚಿಕ್ಕಬಳ್ಳಾಪುರ ರೈತರ ಗೋಳು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Jan 25, 2024 | 4:34 PM

Share

ಚಿಕ್ಕಬಳ್ಳಾಪುರ, ಜ.25: ಹೂವು, ಹಣ್ಣು, ತರಕಾರಿ, ರೇಷ್ಮೆ ಸೇರಿದಂತೆ ಹೈನೋದ್ಯಮಕ್ಕೆ ರಾಜ್ಯದಲ್ಲೇ ಕೋಲಾರ-ಚಿಕ್ಕಬಳ್ಳಾಪುರ (Kolar-Chikkaballapura) ಅವಳಿ ಜಿಲ್ಲೆಗಳು ಖ್ಯಾತಿ ಪಡೆದಿವೆ. ಇನ್ನು ಆ 2 ಜಿಲ್ಲೆಗಳಲ್ಲಿ ನದಿ, ನಾಲೆ ಸೇರಿದಂತೆ ಶಾಶ್ವತ ನೀರಿನ ಮೂಲಗಳಿಲ್ಲ. ಇಂತಹದರಲ್ಲಿ ಅಲ್ಲಿಯ ರೈತರು ಸುಮಾರು 2 ಸಾವಿರ ಅಡಿಗಳವರೆಗೂ ಬೋರ್‍ವೆಲ್ ಕೊರೆದು ಅವುಗಳಿಗೆ 25 ಹೆಚ್‍ಪಿ ಸಾಮರ್ಥ್ಯದ ಪಂಪ್‍ಸೆಟ್‍ಗಳನ್ನು ಅಳವಡಿಸಿ ಆ ಮೂಲಕ ಕೃಷಿಯನ್ನು ಮಾಡುತ್ತಿದ್ದಾರೆ. ಆದರೆ, ರಾಜ್ಯಸರ್ಕಾರ ಇತ್ತೀಚಿಗೆ 10 ಹೆಚ್‍ಪಿಗಿಂತ ಮೇಲ್ಪಟ್ಟ ಸಾಮರ್ಥ್ಯದ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲ್ಲ ಎನ್ನುವ ಆದೇಶ ಹೊರಡಿಸಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿದ್ಯುತ್ ಜಾಲಕ್ಕೆ ಅಳವಡಿಸಿರುವ ಬೋರ್ವೆಲ್ ಪಂಪ್‍ಸೆಟ್‍ಗಳನ್ನು ವ್ಯವಸ್ಥಿತವಾಗಿ ಸಕ್ರಮಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ. ಅಕ್ರಮ-ಸಕ್ರಮ ಯೋಜನೆಯಡಿ ರೈತರು ಉಚಿತ ವಿದ್ಯುತ್‍ಗೆ ಅರ್ಜಿ ಹಾಕುವಂತೆ ಪ್ರಕಟಣೆ ಹೊರಡಿಸಿತ್ತು. ರಾಜ್ಯಾದ್ಯಂತ 44,364 ಅರ್ಜಿಗಳು ಸ್ವೀಕೃತವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೊಂದರಲ್ಲೇ 1,942 ಅರ್ಜಿಗಳು ಸ್ವೀಕೃತವಾಗಿವೆ. ಸರ್ಕಾರವು ಮುಂದಿನ ದಿನಗಳಲ್ಲಿ ಅಕ್ರಮ ಬೋರ್ವೆಲ್ ಸಂಪರ್ಕಗಳಿಗೆ ವಿದ್ಯುತ್ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ವಿಜಯಪುರ: ಭೀಮಾನದಿ ಪಟ್ಟದಲ್ಲಿ ನಿಷೇದಾಜ್ಞೆ ಜಾರಿ: ವಿದ್ಯುತ್ ಸಂಪರ್ಕ ಕಟ್, ರೈತರು ಆಕ್ರೋಶ

10 ಹೆಚ್‍ಪಿ ಸಾಮರ್ಥ್ಯದವರೆಗೂ ಮಾತ್ರ ಉಚಿತ ವಿದ್ಯುತ್ ಒದಗಿಸುವುದಾಗಿ, 10 ಹೆಚ್‍ಪಿಗಿಂತ ಮೇಲ್ಪಟ್ಟ ಸಾಮರ್ಥ್ಯದ ಬೋರ್‍ವೆಲ್‍ಗಳಿಗೆ ಉಚಿತ ವಿದ್ಯುತ್ ನೀಡಿಲ್ಲ ಎನ್ನುವ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್, ಅವಳಿ ಜಿಲ್ಲೆಯ ರೈತರುಗಳಿಗೆ ವಿನಾಯತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ರೈತರ ಬೋರ್‍ವೆಲ್‍ಗಳಿಗೆ ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಸಂಪರ್ಕ ಹಾಗೂ ಸಕ್ರಮಗೊಳಿಸುವ ವಿಚಾರದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಭೆ ನಡೆಸಿ, ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರ ಸಮಸ್ಯೆ ಸರ್ಕಾರಕ್ಕೆ ಬಂದಿದೆ. ಸದ್ಯಕ್ಕೆ ರೈತರಿಗೆ ತೊಂದರೆ ಮಾಡುವುದಿಲ್ಲವೆಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?