Chikkaballapur:ಇದ್ದಕ್ಕಿದ್ದಂತೆ ಕೆರೆಯಲ್ಲಿ ಸಾವನ್ನಪ್ಪಿದ ಮೀನುಗಳು; ಕೆರೆಗೆ ವಿಷ ಪ್ರಾಶನವೊ? ನೀರೇ ವಿಷವಾಯಿತಾ? ಅನ್ನೊ ಅನುಮಾನ!

|

Updated on: Jun 18, 2023 | 1:19 PM

ಅದು ಚಿಕ್ಕಬಳ್ಳಾಪುರ ನಗರದ ಮದ್ಯದಲ್ಲಿರುವ ಕೆರೆ. ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರಿನಿಂದ ತುಂಬಿ ತುಳುಕುತ್ತಿದೆ. ಅದೇ ಕೆರೆಯಲ್ಲಿ ಕಲರ್ ಕಲರ್ ಮೀನುಗಳ ಸಾಕಾಣಿಕೆ ಮಾಡಲಾಗಿತ್ತು. ಆದ್ರೆ, ಕೆರೆಯಲ್ಲಿ ಸ್ವಚ್ಛಂದವಾಗಿ ಬೆಳೆದಿದ್ದ ಮೀನುಗಳು ಇದ್ದಕ್ಕಿದಂತೆ ಸತ್ತು ಮೇಲೆ ತೆಲುತ್ತಿವೆ. ಇದ್ರಿಂದ ಕೆರೆಗೆ ವಿಷ ಪ್ರಾಶನವೊ, ಇಲ್ಲ ನೀರೆ ವಿಷವಾಯಿತಾ ಅನ್ನೊ ಅನುಮಾನ ಮೂಡಿದೆ.

Chikkaballapur:ಇದ್ದಕ್ಕಿದ್ದಂತೆ ಕೆರೆಯಲ್ಲಿ ಸಾವನ್ನಪ್ಪಿದ ಮೀನುಗಳು; ಕೆರೆಗೆ ವಿಷ ಪ್ರಾಶನವೊ? ನೀರೇ ವಿಷವಾಯಿತಾ? ಅನ್ನೊ ಅನುಮಾನ!
ಚಿಕ್ಕಬಳ್ಳಾಪುರ
Follow us on

ಚಿಕ್ಕಬಳ್ಳಾಪುರ: ತುಂಬಿದ ಕೆರೆಯಲ್ಲಿ ಸತ್ತಿರುವ ಮೀನುಗಳು, ಅದನ್ನು ಹಿಡಿದು ಚೀಲಕ್ಕೆ ತುಂಬಿಕೊಳ್ಳುತ್ತಿರುವ ಯುವಕರು, ಇಂಥಹ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ(Chikkaballapur) ನಗರದ ಮುಷ್ಟೂರು ಬಡಾವಣೆಯಲ್ಲಿ. ಹೌದು, ಮುಷ್ಟೂರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗಿತ್ತು. ಗುತ್ತಿಗೆದಾರರು ಮೀನುಗಳನ್ನು ಹಿಡಿದು ಮಾರಾಟ ಮಾಡುವುದಕ್ಕೂ ಮೊದಲೇ ಮೀನುಗಳು ನೀರಿನಲ್ಲಿ ಸತ್ತು, ತೆಲಾಡುತ್ತಿವೆ. ಇನ್ನು ಕೆಲವು ಯುವಕರು ಸತ್ತ ಮೀನುಗಳನ್ನು ಬಿಡದೆ ಮೂಟೆಗಟ್ಟಲೆ ಹಿಡಿದುಕೊಂಡು ಹೊಗುತ್ತಿದ್ದಾರೆ.

ಕೆರೆಯ ನೀರಿಗೆ ಯಾರಾದ್ರೂ ವಿಷ ಬೆರೆಸಿದ್ದಾರಾ?, ಅಥವಾ ಹೆಚ್​ಎನ್​ ವ್ಯಾಲಿ ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರೆ ವಿಷಪೂರಿತವಾಯ್ತಾ? ತಿಳಿದು ಬಂದಿಲ್ಲ. ಆದ್ರೆ, ಕೆರೆ ನೀರಿನಲ್ಲಿ ಸಾಕಾಣಿಕೆ ಮಾಡಿದ್ದ ಮೀನುಗಳು ಸತ್ತಿರುವ ಕಾರಣ ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಮೀನುಗಾರಿಕೆ ಇಲಾಖೆಯವರು ಹೇಳೊದೆ ಬೇರೆ ಬಾಂಗ್ಲಾದಲ್ಲಿ ಸೀವೇಜ್ ನೀರಿನಲ್ಲಿ ಮೀನುಗಾರಿಕೆ ಮಾಡ್ತಾರೆ, ಸಂಸ್ಕರಿತ ತ್ಯಾಜ್ಯದಲ್ಲಿ ಮೀನು ಸಾಕಾಣಿಕೆಯಿಂದ ಏನು ತೊಂದರೆಯಿಲ್ಲ. ಮೀನುಗಳ ಟೆಸ್ಟ್ ಬದಲಾಗಬಹುದು ಎನ್ನುತ್ತಾರೆ. ಆದರೆ ಮೀನುಗಳು ಯಾಕೆ ಸತ್ತಿವೆ ಎಂಬ ಕುರಿತು ಉತ್ತರ ಕೊಟ್ಟಿಲ್ಲ.

ಇದನ್ನೂ ಓದಿ:ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಮೀನುಗಾರಿಕೆ ಯಾಂತ್ರಿಕ ಬೋಟ್: 2.5 ಲಕ್ಷ ರೂ. ಹಾನಿ, ಸೂಕ್ತ ಪರಿಹಾರಕ್ಕೆ ಆಗ್ರಹ

ಚಿಕ್ಕಬಳ್ಳಾಪುರ ನಗರದ ಸುತ್ತಲೂ ಎತ್ತ ನೋಡಿದ್ರೂ, ಅಮಾನಿ ಬೈರಸಾಗರ ಕೆರೆ, ಕಂದವಾರ ಕೆರೆ, ರಂಗಧಾಮ ಕೆರೆ, ಮುಷ್ಟೂರು ಕೆರೆಗಳು ಇದ್ದು ಎಲ್ಲಾ ಕೆರೆಗಳಲ್ಲಿ ಮೀನುಗಾರಿ ನಡೆದಿದೆ. ಆದ್ರೆ, ಎಲ್ಲಾ ಕೆರೆಗಳಲ್ಲಿ ಈಗಾಗಲೆ ಎರಡು ಮೂರು ಭಾರಿ ಮೀನುಗಳು ಸತ್ತಿವೆ. ಆದರೂ ಸೂಕ್ತ ಕಾರಣ ಕಂಡು ಹಿಡಿಯುವುದರ ಬದಲು ಮೀನುಗಾರಿಕೆ ಇಲಾಖೆ ಹಾರಿಕೆ ಉತ್ತರ ಹೇಳುತ್ತಿದೆ.

ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ