AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರಿಂದ ಉಚಿತ ಸಾಮೂಹಿಕ ಮದುವೆ ಆಯೋಜನೆ: ಮದ್ವೆಗಾಗಿ ಮುಗಿಬಿದ್ದ ಅಪ್ರಾಪ್ತರು, ಎರಡನೇ ಮದುವೆಗೂ ಬಂದವು ಅರ್ಜಿ

ಮದುವೆ ಎನ್ನುವುದು ಶ್ರೀಮಂತರಿಗೆ ಐಶ್ವರ್ಯ ಪ್ರದರ್ಶನವಾದರೆ, ಬಡವರಿಗೆ ಸಾಲದ ಶೂಲಕ್ಕೆ ತಳ್ಳುವ ಶಾಪ. ಆದರೆ ಕಡು ಬಡವರಿಗೆ ಉಚಿತ ಮದುವೆ ಸೇರಿದಂತೆ ಹುಡುಗಿ ಕೈಹಿಡಿಯುವ ಹುಡುಗನಿಗೆ 50 ಸಾವಿರ ರೂಪಾಯಿ ಮೌಲ್ಯದ ಸೀಮೆ ಹಸು, 50 ಸಾವಿರ ರೂಪಾಯಿ ನಗದು ಸೇರಿದಂತೆ ಅದ್ದೂರಿ ಮದುವೆ ಮಾಡುವುದಾಗಿ ಹಾಲಿ ಶಾಸಕರೊಬ್ಬರು ಘೋಷಣೆ ಮಾಡಿದ್ದೆ ತಡ, ಮದುವೆಗೆ ಅಪ್ರಾಪ್ತರು ಸೇರಿದಂತೆ ಎರಡನೆ ಮದುವೆ ಮಾಡಿಕೊಳ್ಳಲು ಮುಗಿಬಿದ್ದಿದ್ದಾರೆ.

ಶಾಸಕರಿಂದ ಉಚಿತ ಸಾಮೂಹಿಕ ಮದುವೆ ಆಯೋಜನೆ: ಮದ್ವೆಗಾಗಿ ಮುಗಿಬಿದ್ದ ಅಪ್ರಾಪ್ತರು, ಎರಡನೇ ಮದುವೆಗೂ ಬಂದವು ಅರ್ಜಿ
ಶಾಸಕರಿಂದ ಸಾಮೂಹಿಕ ಮದುವೆ ಆಯೋಜನೆ, ಹರಿದು ಬಂದ ಅರ್ಜಿಗಳು
ಕಿರಣ್ ಹನುಮಂತ್​ ಮಾದಾರ್
|

Updated on:Mar 10, 2023 | 7:23 AM

Share

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ನ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(S.N. Subbareddy) ಪ್ರತಿವರ್ಷದಂತೆ ಈ ವರ್ಷವೂ 501 ಉಚಿತ ಸಾಮೂಹಿಕ ಮದುವೆ ಸಮಾರಂಭವನ್ನು ಬಾಗೇಪಲ್ಲಿಯ ಗಡಿದಂ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಇಂದು (ಮಾ.10) ಆಯೋಜನೆ ಮಾಡಿದ್ದಾರೆ. ಜೊತೆಗೆ ಸಾಮೂಹಿಕ ಮದುವೆ ಸಮಾರಂಭದಲ್ಲಿ ಈ ಭಾರಿ ತಮ್ಮ ಏಕೈಕ ಪುತ್ರ ಅಭಿಷೇಕ್ ರೆಡ್ಡಿಯ ಮದುವೆಯನ್ನು ಹಮ್ಮಿಕೊಂಡಿದ್ದಾರೆ. ಸಾಮೂಹಿಕ ಮದುವೆಯಲ್ಲಿ ಹೆಚ್ಚಿನ ಜೋಡಿಗಳನ್ನು ಸೆಳೆಯಲು ಮುಂದಾಗಿರುವ ಶಾಸಕರು, ತಮ್ಮ ಕಾರ್ಯಕ್ರಮದಲ್ಲಿ ಮದುವೆಯಾದರೆ, ತಲಾ ವಧುವರರಿಗೆ 50 ಸಾವಿರ ರೂಪಾಯಿ ಮೌಲ್ಯದ ಒಂದು ಸೀಮೆ ಹಸು, 50 ಸಾವಿರ ರೂಪಾಯಿ ಹಣ, ಗುಣಮಟ್ಟದ ತಾಳಿ, ಬಟ್ಟೆ, ಕಾಲುಂಗುರ ಸೇರಿದಂತೆ ಹುಡುಗಿ ಕೈಹಿಡಿಯುವ ವರನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ ವೇಲ್, ಜಮೀನು ಮಂಜೂರು ಆಫರ್ ನೀಡಿದ್ದಾರೆ. ಇದರಿಂದ ಹಿಂದೆ ಮುಂದೆ ನೋಡದ ಕೆಲವು ಅಪ್ರಾಪ್ತರು ಹಾಗೂ ಮದುವೆಯಾದವರು ಕೂಡ ಮದುವೆ ನೊಂದಣಿಗೆ ಬಂದು ಸಿಕ್ಕಿ ಹಾಕಿಕೊಂಡಿದ್ದಾರೆ.

ಶಾಸಕರ ಆಫರ್​ಗಳನ್ನು ಪಡೆಯಲು ಬರೋಬ್ಬರಿ 350ಕ್ಕೂ ಹೆಚ್ಚು ಜೋಡಿಗಳು ಮದುವೆಗೆ ಅರ್ಜಿ ಹಾಕಿದ್ರು. ಆದರೆ ಬಾಲ್ಯ ವಿವಾಹ, ಪೋಷಕರ ಒಪ್ಪಿಗೆ ಇಲ್ಲದಿರುವ ಹಾಗೂ ಎರಡನೆ ಮದುವೆಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪ್ರತಿಯೊಂದು ಅರ್ಜಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಾಸಕರ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಕೊನೆಗೆ 212 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲಿದ್ದಾರೆ. ಮತ್ತೊಂದೆಡೆ ಕಳೆದ ಮೂರು ವರ್ಷಗಳಿಂದ ಕೊರೊನಾ ಕಾಟ ಹೆಚ್ಚಾಗಿ ಕೆಲವರು ಮದುವೆ ಮಾಡಿಕೊಳ್ಳುವುದನ್ನೆ ಮುಂದೂಡಿದ್ರು. ಇದೀಗ ಕೊರೊನಾ ಇಲ್ಲದಿರುವುದರಿಂದ ಆರ್ಥಿಕವಾಗಿ ಹೊರೆಯಾಗಲ್ಲ ಎಂದು ಜೋಡಿಗಳು ಮದುವೆಗೆ ಮುಂದಾಗಿದ್ದಾರೆ. ಆದ್ರೆ ಕೆಲವರು ದುರಾಸೆಗೆ ಬಿದ್ದು ಅಪ್ರಾಪ್ತರ ಮದುವೆ, ಎರಡನೆ ಮದುವೆಗೆ ಮುಂದಾಗಿ ಅರ್ಜಿ ಹಾಕಿದ್ದು ವಿಪರ್ಯಾಸ.

ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:22 am, Fri, 10 March 23