ಗುಂಡಿ ತೋಡುವಾಗ ದೇವರ ವಿಗ್ರಹ ಪತ್ತೆ! ಜಮೀನಿನಲ್ಲಿ ದೊರೆತ ಕಲ್ಲಿನ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ಕುತೂಹಲ! ಪೂಜೆ ಪುನಸ್ಕಾರ

| Updated By: ಸಾಧು ಶ್ರೀನಾಥ್​

Updated on: Oct 11, 2022 | 6:07 PM

ಈ ವಿಗ್ರಹವು ಏಕಶಿಲೆ ಕಲ್ಲು ಬಂಡೆಯಲ್ಲಿ ಕೆತ್ತಲಾಗಿದ್ದು, ಜೋಡಿಯಾಗಿ ಒಂದೆಡೆ ಹರಿನಾರಾಯಣ, ಮತ್ತೊಂದೆಡೆ ಲಕ್ಷ್ಮಿ ವಿಗ್ರಹಗಳಿವೆ. ನೋಡಲು ಪುರಾತನ ವಿಗ್ರಹಗಳು ಇದ್ದಂತೆ ಕಾಣ್ತಿದೆ.

ಗುಂಡಿ ತೋಡುವಾಗ ದೇವರ ವಿಗ್ರಹ ಪತ್ತೆ! ಜಮೀನಿನಲ್ಲಿ ದೊರೆತ ಕಲ್ಲಿನ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ಕುತೂಹಲ! ಪೂಜೆ ಪುನಸ್ಕಾರ
ಗುಂಡಿ ತೋಡುವಾಗ ದೇವರ ವಿಗ್ರಹಗಳು ಪತ್ತೆ! ಜಮೀನಿನಲ್ಲಿ ದೊರೆತ ಕಲ್ಲಿನ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ಕುತೂಹಲ! ಪೂಜೆ ಪುನಸ್ಕಾರ
Follow us on

ನೂತನ ಮನೆ ನಿರ್ಮಾಣ ಮಾಡಿ, ಮನೆಗೆ ವಿದ್ಯುತ್​ ಸಂಪರ್ಕಕ್ಕಾಗಿ ಅರ್ತಿಂಗ್ ಹಾಕಲು ಗುಂಡಿ ತೋಡುತ್ತಿದ್ದಾಗ ಕಲ್ಲಿನ ಬಂಡೆಯೊಂದು ಸಿಕ್ಕಿದೆ. ಅದನ್ನು ಸ್ವಲ್ಪ ಹೊರಳಿಸಿದಾಗ… ಅಲ್ಲಿ ದೇವರ ವಿಗ್ರಹಗಳ ಕೆತ್ತನೆ (Stone God Statue) ಪತ್ತೆಯಾಗಿದೆ… ಜನ ಮುಗಿಬಿದ್ದು ಪೂಜೆ ಪುನಸ್ಕಾರ ಮಾಡಿ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ

ಇದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗೌರಿಬಿದನೂರು (Gauribidanur) ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮ. ಗ್ರಾಮದ ಶಿವಕುಮಾರ್ ಎನ್ನುವವರು ತಮ್ಮ ಜಮೀನಿನಲ್ಲಿ ನೂತನವಾಗಿ ಮನೆ ನಿರ್ಮಾಣ ಮಾಡಿದ್ದು, ಮನೆಗೆ ಅರ್ತಿಂಗ್ ಹಾಕಲು ಗೋಡೆ ಪಕ್ಕದಲ್ಲೆ ಗುಂಡಿ ತೆಗೆಸುತ್ತಿದ್ದರು. ಆದ್ರೆ ಕಲ್ಲು ಬಂಡೆಯೊಂದು ಪತ್ತೆಯಾಗಿದ್ದು ಅದನ್ನು ಮೇಲೆತ್ತಿ ನೋಡಿದರೆ… ಅದರಲ್ಲಿ ಹರಿನಾರಾಯಣ ಹಾಗೂ ಲಕ್ಷ್ಮಿ ವಿಗ್ರಹಗಳ ಕೆತ್ತನೆ ಫಳಫಳ ಹೊಳೆದಿದೆ. ಇದ್ರಿಂದ ಗಾಬರಿ ಹಾಗೂ ಕುತೂಹಲ ಒಟ್ಟಿಗೇ ಉಂಟಾಗಿ, ಗ್ರಾಮಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಇನ್ನು ಶಿವಕುಮಾರ್ ಮನೆಯ ಬಳಿ ಜಮೀನಿನಲ್ಲಿ, ಹರಿನಾರಾಯಣ ಹಾಗೂ ಲಕ್ಷ್ಮಿ ಕಲ್ಲಿನ ವಿಗ್ರಹಗಳು ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರಿಗೆ ಅದೇನೊ ಕುತೂಹಲ, ಭಕ್ತಿಭಾವ. ಮಹಿಳೆಯರಂತೂ ಮುಗಿಬಿದ್ದು ಪೂಜಾ ಸಾಮಾಗ್ರಿಗಳ ಜೊತೆ ಸ್ಥಳಕ್ಕೆ ಆಗಮಿಸಿ ಪೂಜೆ ಪುನಸ್ಕಾರ ಮಾಡಿ ಭಕ್ತಿ ಮೆರೆಯುತ್ತಿದ್ದಾರೆ.

ಈ ವಿಗ್ರಹವು ಏಕಶಿಲೆ ಕಲ್ಲು ಬಂಡೆಯಲ್ಲಿ ಕೆತ್ತಲಾಗಿದ್ದು, ಜೋಡಿಯಾಗಿ ಒಂದೆಡೆ ಹರಿನಾರಾಯಣ, ಮತ್ತೊಂದೆಡೆ ಲಕ್ಷ್ಮಿ ವಿಗ್ರಹಗಳಿವೆ. ನೋಡಲು ಪುರಾತನ ವಿಗ್ರಹಗಳು ಇದ್ದಂತೆ ಕಾಣ್ತಿದೆ. ಇದ್ರಿಂದ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರೆ ಅಸಲಿ ಸತ್ಯ ಏನು, ಯಾವ ಕಾಲದ್ದು ಈ ವಿಗ್ರಹ ಅಂತಾ ಗೊತ್ತಾಗುತ್ತೆ. (ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ)