‘ನಾನಿರುವುದೇ ನಿಮಗಾಗಿ’ ಹಾಡು ಹಾಡಿ ಜನರನ್ನು ರಂಜಿಸಿದ ಸಚಿವ ಸುಧಾಕರ್
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದಲ್ಲಿ ಸುಧಾಕರ್ ಹಾಡಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಯೂರ ಚಲನಚಿತ್ರ ಗೀತೆಯನ್ನು ಹಾಡುವ ಮೂಲಕ ಜನರನ್ನು ರಂಜಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದಲ್ಲಿ ಸುಧಾಕರ್ ಹಾಡಿದ್ದಾರೆ. ಸಚಿವರ ಗಾಯನಕ್ಕೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ. ನಾನಿರುವುದೆ ನಿಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ ಬಾಳುವಿರೆಲ್ಲ ಹಾಯಾಗಿ ಎಂದು ಹಾಡಿದ್ದಾರೆ.
Published on: Nov 07, 2021 11:46 AM