ಧಾರಾಕರ ಮಳೆಗೆ ನಲುಗಿದ ಚಿಕ್ಕಬಳ್ಳಾಪುರ ರೈತರು!! ತರಕಾರಿ, ಕೃಷಿ ಬೆಳೆಗಳು ಹಾಳು ಹಾಳು!!

| Updated By: ಸಾಧು ಶ್ರೀನಾಥ್​

Updated on: Aug 27, 2022 | 7:27 PM

ಒಟ್ನಲ್ಲಿ ಮೊದಲು ಮಳೆ ಮಳೆ ಅಂತ ದೇವರಿಗೆ ಹರಕೆ ಕಟ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಜನ, ಈಗ ಮಳೆಯ ಹೆಸರು ಕೇಳಿದ್ರೆ ಬೆಚ್ಚಿ ಬೀಳೊವಷ್ಟು ಮಳೆ ಸುರಿದಿದ್ದು, ರೈತರು ಬೆಳೆದ ಬೆಳೆಗಳು ಮಳೆಗೆ ಹಾನಿಯಾಗ್ತಿದೆ. ರೈತರ ಮೇಲೆ ಕರುಣೆ ತೋರಿ ಕೆಲವು ದಿನಗಳ ಕಾಲ ಮಳೆರಾಯ ಬಿಡುವು ತೆಗೆದುಕೊಳ್ಳಬೇಕಿದೆ.

ಧಾರಾಕರ ಮಳೆಗೆ ನಲುಗಿದ ಚಿಕ್ಕಬಳ್ಳಾಪುರ ರೈತರು!! ತರಕಾರಿ, ಕೃಷಿ ಬೆಳೆಗಳು ಹಾಳು ಹಾಳು!!
ಧಾರಾಕರ ಮಳೆಗೆ ನಲುಗಿದ ಚಿಕ್ಕಬಳ್ಳಾಪುರದ ರೈತರು!! ತರಕಾರಿ ಕೃಷಿ ಬೆಳೆಗಳು ಹಾಳು, ಹಾಳು!!
Follow us on

ಬಯಲು ಸೀಮೆ, ಬರದ ನಾಡು ಎಂಬೆಲ್ಲಾ ಕುಖ್ಯಾತಿ ಹಣೆಪಟ್ಟಿ ಅಟಂಟಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತಾಪಿ ಜನರತ್ತ ವರುಣದೇವ ಕರುಣೆ ತೋರಿದ್ದು… ಬೇಡ ಬೇಡ ಅಂದ್ರೂ… ಈಗ ಮಳೆ ಸಾಕು ಸಾಕು ಎನ್ನುವಷ್ಟು ಬರ್ತಿದೆ. ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ ಆ ಜಿಲ್ಲೆಯ ತರಕಾರಿ ಬೆಳೆಗಳು ಹೂ ಬೆಳೆಗಳು ಸೇರಿದಂತೆ ಕೃಷಿ ಬೆಳೆಗಳು ಹಾಳಾಗಿ ಅಲ್ಲಿಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ.

ಒಂದೆಡೆ ಬೆಳೆದ ತರಕಾರಿಗಳಿಗೆ ಉತ್ತಮ ಬೆಲೆ ಮತ್ತೊಂದೆಡೆ ಕೈಗೆ ಬಂದ ತುತ್ತು ಬಾಯಿಗೆ ಬರೊವಷ್ಟರಲ್ಲಿ ಮಳೆರಾಯವ ಅವಕೃಪೆಗೆ ಒಳಗಾದ ತರಕಾರಿ ಬೆಳೆಗಳು, ಇಂಥ ದೃಸ್ಯ ಕಂಡು ಬಂದಿದ್ದು ಚಿಕ್ಕಬಳ್ಳಾಪು ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ಬಾಗದಲ್ಲಿ. ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರದ ಸುತ್ತಮುತ್ತ ಬೆಳೆದ ತರಕಾರಿ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇನ್ನೂ ಚಿಕ್ಕಬಳ್ಳಾಪುರದ ವಾಪಸಂದ್ರ ಬಳಿ ರೈತ ಪ್ರಕಾಶ ಎನ್ನುವವರು 90 ಸಾವಿರ ರೂಪಾಯಿ ಬಂಡವಾಳ ಹಾಕಿ ಕ್ಯಾರೆಟ್ ಹಾಗೂ ಬೀಟ್ ರೂಟ್ ಬೆಳೆದಿದ್ದರು. ಆದ್ರೆ ಮಳೆಯ ನೀರು ಜಮೀನಿಗೆ ನುಗ್ಗಿ ಕ್ಯಾರೆಟ್ ಹಾಗೂ ಬಿಟ್ ರೂಟ್ ನೀರಿನಲ್ಲಿ ಕೊಳೆಯುತ್ತಿದೆ.

ಇನ್ನು ಗುಡಿಬಂಡೆ ಸುತ್ತಮುತ್ತ ಬೆಳೆದಿದ್ದ ತರಕಾರಿ ಬೆಳೆಗಳು ಸಹ ಮಳೆಯ ಹೊಡೆತಕ್ಕೆ ನಲುಗಿವೆ. ಗೌರಿಬಿದನೂರು ತಾಲುಕಿನ ನಗರಗೆರೆ ಹೋಬಳಿಯ ಚೋಳಶೆಟ್ಟಿಹಳ್ಳಿ ಸುತ್ತಮುತ್ತ ನಾಯನ ಕರೆ ಕೋಡಿ ಹೊಡೆದು ಮೆಣಸಿಕಾಯಿ, ಜೋಳ, ಸುಗಂಧರಾಜ ಹೂ ಜಲಾವೃತವಾಗಿದೆ. ಮತ್ತೊಂದೆಡೆ ಪರೇಸಂದ್ರ ಗುಡಿಬಂಡೆ ಗೌರಿಬಿದನೂರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಅಮಾನಿ ಬೈರಸಾಗರ ಕೆರೆಯ ನೀರಿನಿಂದ ಜಲಾವೃತವಾಗಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡ್ತಿದ್ದಾರೆ.

ಒಟ್ನಲ್ಲಿ ಮೊದಲು ಮಳೆ ಮಳೆ ಅಂತ ದೇವರಿಗೆ ಹರಕೆ ಕಟ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಜನ, ಈಗ ಮಳೆಯ ಹೆಸರು ಕೇಳಿದ್ರೆ ಬೆಚ್ಚಿ ಬೀಳೊವಷ್ಟು ಮಳೆ ಸುರಿದಿದ್ದು, ರೈತರು ಬೆಳೆದ ಬೆಳೆಗಳು ಮಳೆಗೆ ಹಾನಿಯಾಗ್ತಿದೆ. ರೈತರ ಮೇಲೆ ಕರುಣೆ ತೋರಿ ಕೆಲವು ದಿನಗಳ ಕಾಲ ಮಳೆರಾಯ ಬಿಡುವು ತೆಗೆದುಕೊಳ್ಳಬೇಕಿದೆ.

ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ