ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ: ಮಹಿಳೆ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಚಿಕ್ಕಬಳ್ಳಾಪುರದಲ್ಲಿ ವಿವಾಹಿತರ ಅನೈತಿಕ ಸಂಬಂಧ ದುರಂತ ಅಂತ್ಯ ಕಂಡಿದೆ. ಪ್ರಿಯತಮೆಯ ಮನೆಗೆ ತೆರಳಿ ಮೊದಲು ಆಕೆಯನ್ನು ಕೊಂದಿರುವ ಆರೋಪಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಜೋಡಿಗೆ ಮಕ್ಕಳಿದ್ದರೂ, ಕುಟುಂಬದ ವಿರೋಧದ ನಡುವೆಯೂ ಸಂಬಂಧ ಮುಂದುವರೆಸಿತ್ತು ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ: ಮಹಿಳೆ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಬಾಬಾಜಾನ್ ಮತ್ತು ಸಲ್ಮಾ
Edited By:

Updated on: Jan 26, 2026 | 6:21 PM

ಚಿಕ್ಕಬಳ್ಳಾಪುರ, ಜನವರಿ 26: ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಸಲ್ಮಾಳನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ಪ್ರಿಯತಮ ಬಾಬಾಜಾನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬಾಜಾನ್ ಯಾಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಇವರಿಬ್ಬರ ಅನೈತಿಕ ಸಂಬಂಧ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಈ ಹಿಂದೆ ಗಲಾಟೆ ಆಗಿತ್ತು ಎನ್ನಲಾಗಿದೆ.

ಸಲ್ಮಾ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯಾ ನಿವಾಸಿಯಾಗಿದ್ದು, ಈಕೆಯ ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದ. ಈಕೆಯೂ ಅದೇ ಕೆಲಸ ಮಾಡುತ್ತಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮತ್ತೊಂದೆಡೆ ಮೂಲತಃ ಆಂಧ್ರದ ನಿವಾಸಿಯಾಗಿರುವ ಬಾಬಾಜಾನ್ ಕುಟುಂಬ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ವಾಸವಿತ್ತು. ಈತ ಚೆಳೂರು ಪಟ್ಟಣದಲ್ಲಿ ರೂಮ್​​ ಮಾಡಿಕೊಂಡು ವಾಸವಿದ್ದ. ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳು ಇದ್ದರೂ ಪ್ರೀತಿ ಪ್ರೇಮದ ಹೆಸರಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ನಡುವೆ ಅದೇನಾಗಿತ್ತೋ ಗೊತ್ತಿಲ್ಲ. ಸಲ್ಮಾ ಮನೆಗೆ ಬಂದಿದ್ದ ಬಾಬಾಜಾನ್ ಆಕೆಯ ತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ!

ಇನ್ನು ಸಲ್ಮಾ ಕೊಲೆ ಬಳಿಕ ಚೆಳೂರು ಪಟ್ಟಣದಲ್ಲಿ ಮಾಡಿಕೊಂಡಿದ್ದ ಬಾಡಿಗೆ ರೂಮ್​​ಗೆ ತೆರಳಿರುವ ಬಾಬಾಜಾನ್​​, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೇಳೂರು ಠಾಣೆ ಪೊಲೀಸರು ಎರಡು ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಲ್ಮಾ ಹತ್ಯೆ ಪ್ರಕರಣದ ಜೊತೆಗೆ ಆತ್ಮಹತ್ಯೆ ಕೇಸ್​​ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ಕುಟುಂಬಸ್ಥರ ಗಲಾಟೆ ಬಳಿಕವೂ ಇವರು ಬೇರೆ ಬೇರೆ ಆಗಿರಲಿಲ್ಲ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.