ಚಿಕ್ಕಬಳ್ಳಾಪುರ ಎಸ್ಪಿ ವಿರುದ್ದವೇ ತಿರುಗಿಬಿದ್ದ ಪೊಲೀಸ್ ಪೇದೆಗಳು
ಚಿಕ್ಕಬಳ್ಳಾಪುರ, ಮೇ.11: ಎಸ್ಪಿ ಕಛೇರಿ ಎದುರು ಇಂದು(ಮೇ.11) ಚಿಕ್ಕಬಳ್ಳಾಪುರ(
Chikkaballapur) ಜಿಲ್ಲೆಯ ಚೇಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಅಶೋಕ್ ಹಾಗೂ ಜಿಲ್ಲೆಯ
ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಸಿಬ್ಬಂದಿ ನರಸಿಂಹಮೂರ್ತಿ ಎಂಬುವವರು ಇದೀಗ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್ ನಾಗೇಶ್ ವಿರುದ್ದವೇ ತಿರುಗಿಬಿದ್ದಿದ್ದಾರೆ. ಎಸ್ಪಿ ಡಿ.ಎಲ್ ನಾಗೇಶ್ ತಾರತಮ್ಯ ನೀತಿ ಅನುಸರಿಸುತ್ತಿದ್ದು, ತಮ್ಮ ಮೇಲೆ ಇಲಾಖೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇಬ್ಬರನ್ನು ಎರಡೆರಡು ಭಾರಿ ಅಮಾನತು ಮಾಡಿ ಇಲಾಖೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ.
ಕಳೆದ ವರ್ಷದ ಹಿಂದೆ ಮನಿ ಡಬ್ಲಿಂಗ್ ಪ್ರಕರಣದಲ್ಲಿ ಅಂದಿನ ಪೊಲೀಸ್ ಇನ್ಸ್ ಪೆಕ್ಟರ್ ರವಿಕುಮಾರ್ ಸೇರಿ ಹಲವರ ಮೇಲೆ ಪ್ರಕರಣ ದಾಖಲಾಗಿ ಇಲಾಖೆ ತನಿಖೆಗೆ ಆದೇಶಿಸಲಾಗಿತ್ತು. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನ ಬಚಾವ್ ಮಾಡಲು ಪೇದೆಗಳಾದ ನರಸಿಂಹಮೂರ್ತಿ ಹಾಗೂ ಅಶೋಕ್ ಅವರನ್ನು ವಿನಾಕಾರಣವಾಗಿ ಸಿಲುಕಿಸಿದ್ದಾರಂತೆ. ಇದನ್ನ ಪ್ರಶ್ನಿಸಿದ್ದಕ್ಕೆ ಟ್ರಾನ್ಸ್ ಫರ್ ಶಿಕ್ಷೆ ನೀಡುವುದರ ಜೊತೆಗೆ ಮೇಲ್ಮಟ್ಟದ ಅಧಿಕಾರಿಗಳಿಂದ ಟಾರ್ಚರ್ ನೀಡುತ್ತಿದ್ದಾರಂತೆ. ಇದರಿಂದ ರೋಸಿಹೋದ ಪೇದೆಗಳಾದ ಅಶೋಕ್ ಹಾಗೂ ನರಸಿಂಹಮೂರ್ತಿ ತಮ್ಮ ಪತ್ನಿ,ಮಕ್ಕಳನ್ನ ಕರೆದುಕೊಂಡು ಬಂದು ಚಿಕ್ಕಬಳ್ಳಾಪುರ ನಗರ ಹೊರವಲಯದ ಅಣಕನೂರು ಬಳಿಯ ಜಿಲ್ಲಾ ಎಸ್ಪಿ ಕಚೇರಿ ಎದುರು ಧರಣಿ ಕುಳಿತು, ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ಇನ್ನು ಮಬ್ಲಿಂಗ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ಬಂಧಿಸಿ ಹಣ ವಸೂಲಿ ಮಾಡಿ ನಕಲಿ ರೈಡ್ ಮಾಡಿದ ಪ್ರಕರಣದಲ್ಲಿ ಇಬ್ಬರು ಸಿಬ್ಬಂಧಿಗಳು ಹಾಗೂ ಇನ್ಸ್ಪೆಕ್ಟರ್ ರವಿಕುಮಾರ್ ಅಮಾನತು ಆಗಿದ್ದು, ಹಾಗೆ ಇಲಾಖೆ ಇಲಾಖೆ ವಿಚಾರಣೆ ಎದುರಿಸುತ್ತಿದ್ದಾರೆ. ಇದೆ ವಿಚಾರದಲ್ಲಿ ಈಗ ಕಿರುಕುಳ ಎಂದು ಆರೋಪ ಬಂದಿದೆ. ಇದ್ರಿಂದ ಎಸ್ಪಿ ಖಾಸೀಮ್ ರವರು ಧರಣಿ ನಿರತ ಇಬ್ಬರು ಅಧಿಕಾರಿಗಳಿಂದ ಮನವಿ ಸ್ವೀಕರಿಸಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಸಮಾಧಾನ ಮಾಡಿದ್ದಾರೆ.