ಮಸೀದಿ ಕಮಿಟಿ ವಿಚಾರಕ್ಕೆ ಗಲಾಟೆ: ಪೊಲೀಸ್ ಠಾಣೆ ಆವರಣದಲ್ಲೇ ಮುಸ್ಲಿಂ ಸಮುದಾಯಗಳ ಮಧ್ಯೆ ಮಾರಾಮಾರಿ
ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಯ ಆವರಣದಲ್ಲಿ ಮಸೀದಿ ಕಮಿಟಿ ರಚನೆ ವಿಚಾರವಾಗಿ ಪೊಲೀಸ್ ಠಾಣೆ ಆವರಣದಲ್ಲೇ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ. ಪೊಲೀಸ್ ಠಾಣೆ ಆವರಣದಲ್ಲಿ ಗಲಾಟೆ ಕಂಡು ಜನರು ಆತಂಕಗೊಂಡರು. ಗಲಾಟೆ ಮಾಡಿಕೊಂಡವರನ್ನು ಗಂಗಾವತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಪ್ಪಳ, ಮೇ 11: ಮಸೀದಿ (mosque) ಕಮಿಟಿ ರಚನೆ ವಿಚಾರವಾಗಿ ಪೊಲೀಸ್ ಠಾಣೆ ಆವರಣದಲ್ಲೇ 2 ಗುಂಪುಗಳ ನಡುವೆ ಗಲಾಟೆ ನಡೆದಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದಿದೆ. ಕಿಲ್ಲಾ ಏರಿಯಾದ ಮರ್ಕಾಸ್ ಮಸೀದಿ ಕಮಿಟಿ ರಚನೆ ವಿಚಾರವಾಗಿ ಮುಸ್ಲಿಂ (Muslim) ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪೊಲೀಸ್ ಠಾಣೆ ಆವರಣದಲ್ಲಿ ಗಲಾಟೆ ಕಂಡು ಜನರು ಆತಂಕಗೊಂಡರು. ಗಲಾಟೆ ಮಾಡಿಕೊಂಡವರನ್ನು ಗಂಗಾವತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸೀಟ್ ವಿಚಾರವಾಗಿ ಮಹಿಳೆಯರಿಬ್ಬರ ಕಿತ್ತಾಟ
ವಿಜಯಪುರ: ಬಸ್ ಪ್ರಯಾಣದ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಸೀಟ್ ವಿಚಾರವಾಗಿ ಕಿತ್ತಾಟ ಆರಂಭಿಸಿದ್ದು, ಗಲಾಟೆ ತಾರಕಕ್ಕೇರಿದ್ದರಿಂದ ಚಾಲಕ ರಸ್ತೆಯಲ್ಲೇ ಬಸ್ ನಿಲ್ಲಿಸುರುವ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ ನಗರದಿಂದ ಜಮಖಂಡಿ ಕಡೆಗೆ ಹೊರಟಿದ್ದ ಬಸ್ನಲ್ಲಿ ಇಬ್ಬರು ಮಹಿಳೆಯರು ಸೀಟ್ ವಿಷಯವಾಗಿ ಕಿತ್ತಾಡಿಕೊಂಡಿದ್ದರು. ಇದರಿಂದ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ಕೊಡಲು ಹಾಗೂ ಚಾಲಕ ವಾಹನ ಚಲಾಯಿಸಲು ಸಮಸ್ಯೆಯಾಗಿತ್ತು.
ಇದನ್ನೂ ಓದಿ: ಕೊಪ್ಪಳ: ಬಿರುಗಾಳಿ ಹೊಡೆತಕ್ಕೆ ಹಾಳಾದ ಬಾಳೆ ತೋಟ, ಲಕ್ಷಾಂತರ ರೂಪಾಯಿ ಆದಾಯ ಕಳೆದುಕೊಂಡು ಕಂಗಾಲಾದ ರೈತರು
ಚಾಲಕ, ನಿರ್ವಾಹಕರು ಮಾತ್ರವಲ್ಲದೇ ಸಹ ಪ್ರಯಾಣಿಕರು ಇಬ್ಬರೂ ಮಹಿಳೆಯರ ಜಗಳ ಬಿಡಿಸಲು ಯತ್ನಿಸಿದರೂ ಮಹಿಳೆಯರ ಜಗಳ ಬಗೆಹರಿದಿಲ್ಲ. ಪರಿಣಾಮ ಚಾಲಕ ನಗರದ ಹೊರ ವಲಯದಲ್ಲಿ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಬಸ್ ನಲ್ಲಿನ ಮಹಿಳಾ ಮಣಿಗಳ ಜಗಳ ಕಾರಣ ಇತರೆ ಬಸ್ ಗಳ ಪ್ರಯಾಣಕ್ಕೂ ಸಮಸ್ಯೆಯಾಗಿತ್ತು.
ಇದನ್ನೂ ಓದಿ: SSLC ಫಲಿತಾಂಶ ಪ್ರಕಟ: ಮತ್ತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ
ಹೆಚ್ಚು ಜನ ಜಂಗುಳಿ ಸೇರಿದ ಕಾರನ ರಸ್ತೆಯಲ್ಲಿ ಇತರೆ ಬಸ್ಗಳು ಹಾಗೂ ಇತರೆ ವಾಹನಗಳೂ ಸಹ ನಿಲ್ಲುವಂತಾಗಿತ್ತು. ಕೆಲ ಸಮಯದ ಬಳಿಕ ಸಹ ಪ್ರಯಾಣಿಕರು ಗಲಾಟೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಮಾಧಾನ ಮಾಡಿದರು. ನಂತರ ಮುಂದಿನ ಪ್ರಯಾಣ ಆರಂಭವಾಯಿತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Sat, 11 May 24