AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಿಣಿ ಮೇಲೆ ಕಣ್ಣು.. ತನಗೆ ಸಹಕರಿಸ್ತಿಲ್ಲ ಅಂತಾ ಈ ಪಾಪಿ ಮಾಡಿದ್ದು ಭಯಾನಕ ಕೃತ್ಯ, ಪೊಲೀಸರಿಗೆ ಪತ್ತೆಯಾಯ್ತು ಮಗುವಿನ ತಲೆ ಬುರಡೆ

ತನ್ನದೇ ಊರಿನ ಗೃಹಿಣಿ ಮೇಲೆ ಕಣ್ಣು.. ತಾನು ಕರೆದಾಗ ಆಕೆ ಬರ್ತಿಲ್ಲ, ಕಾಮದಾಟಕ್ಕೆ ಸಹಕರಿಸ್ತಿಲ್ಲ ಅಂತಾ ಆ ಪಾಪಿ ಮಾಡಿದ್ದೇನು ಗೊತ್ತಾ? ಆ ಕ್ರೂರ ಮೃಗದ ಕ್ರೌರ್ಯವನ್ನ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ. ಅಷ್ಟಕ್ಕೂ ಆ ಕರುಣಾಜನಕ ಕಥೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ಓದಿ.

ಗೃಹಿಣಿ ಮೇಲೆ ಕಣ್ಣು.. ತನಗೆ ಸಹಕರಿಸ್ತಿಲ್ಲ ಅಂತಾ ಈ ಪಾಪಿ ಮಾಡಿದ್ದು ಭಯಾನಕ ಕೃತ್ಯ, ಪೊಲೀಸರಿಗೆ ಪತ್ತೆಯಾಯ್ತು ಮಗುವಿನ ತಲೆ ಬುರಡೆ
ಘಟನೆ ನಡೆದ ಸ್ಥಳ
ಆಯೇಷಾ ಬಾನು
|

Updated on: Mar 30, 2021 | 8:27 AM

Share

ಚಿಕ್ಕಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಪುಟಾಣಿ ಬುರುಡೆಯೊಂದು ಸಿಕ್ಕಿದೆ. ಯಾರದ್ದೋ ತಪ್ಪಿಗೆ ಏನೂ ಅರಿಯದ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ-ಆಂಧ್ರ ಗಡಿಭಾಗ ಸಾದಾರ‍್ಲಹಳ್ಳಿ ಬಳಿ ಪತ್ತೆಯಾಗಿರೋ ತಲೆಬುರುಡೆ ಹಾಗೂ ಮೂಳೆಗಳು ವಾಟದ ಹೊಸಹಳ್ಳಿ ಗ್ರಾಮದ ನಾರಾಯಣಸ್ವಾಮಿ-ಪ್ರಭಾವತಿ ದಂಪತಿಯ 6 ವರ್ಷದ ಮಗು ವಿಷ್ಣುವರ್ಧನದ್ದು. ಹೌದು, ಮಾರ್ಚ್ 16 ರಂದು ಪುಟಾಣಿ ವಿಷ್ಣುವರ್ಧನ್ ನಿಗೂಢವಾಗಿ ನಾಪತ್ತೆ ಆಗಿದ್ದ. ಆದರೆ 13 ದಿನಗಳ ನಂತರ ಪತ್ತೆಯಾಗಿದ್ದು ಬರೀ ಮೂಳೆಯಾಗಿ. 13 ದಿನಗಳಿಂದ ಮಗುವಿಗೆ ಹುಡುಕಾಟ ನಡೆಸಿದ ಪೋಷಕರು-ಪೊಲೀಸರಿಗೆ 13 ದಿನಗಳ ನಂತರ ಸಿಕ್ಕಿದ್ದು ಮಗುವಿನ ಕಳೆಬರ ಮಾತ್ರ.

ಅಂದಹಾಗೆ ವಾಟದಹೊಸಹಳ್ಳಿಯ ರಾಮಾಂಜಿ ಎಂಬಾತನೇ ಈ ಕೊಲೆಯ ಆರೋಪಿ. ಅಷ್ಟಕ್ಕೂ ಆರೋಪಿ ರಾಮಾಂಜಿ ಮಗುವಿನ ತಾಯಿಗೆ ಪೀಡಿಸುತ್ತಿದ್ದನಂತೆ. ವಿಷ್ಣುವಧನ್ ತಾಯಿ ಪ್ರಭಾವತಿಗೆ ಕಿರುಕುಳ ನೀಡುತ್ತಿದ್ದನಂತೆ. ಆದರೆ ತನ್ನ ಮಾತಿಗೆ ಆಕೆ ಬಗ್ಗುತ್ತಿಲ್ಲ ಅನ್ನೋ ಕಾರಣಕ್ಕೆ ಖತರ್ನಾಕ್ ಐಡಿಯಾ ಮಾಡಿದ ಪಾಪಿ ರಾಮಾಂಜಿ ಆಕೆಯ ಮಗುವನ್ನು ಕಿಡ್ನಾಪ್ ಮಾಡಿ ಬರುವಂತೆ ಕರೆದಿದ್ದಾನೆ. ಆದ್ರೂ ಆಕೆ ಬಗ್ಗದಿದ್ದಾಗ ಮಗುವಿನ ಕತ್ತನ್ನೇ ಹಿಸುಕಿ ಕೊಂದು ಹಾಕಿದ್ದಾನೆ. ಇತ್ತ ಮಗು ಎಲ್ಲಿ ಹೋಯಿತು ಹುಡುಕಿ ಕೊಡಿ ಅಂತಾ ಪ್ರಭಾವತಿ ಗೌರಿಬಿದನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಮಾರ್ಚ್ 17 ರಂದು ಮಗು ಕಾಣೆಯಾದ ಬಗ್ಗೆ ದೂರನ್ನು ದಾಖಲಿಸಿದ್ದರು. ತನಿಖೆ ನಡೆಸುತ್ತಾ ಹೋದಾಗ ಮಗು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗ್ತ್ತಿದ್ದಂತೆ ರಾಮಾಂಜಿ, ಮಗುವಿನ ಶವ ತೆಗೆದುಕೊಂಡು ಹೋಗಿ ಆಂಧ್ರ ಹಾಗೂ ಕರ್ನಾಟಕ ಗಡಿನಾಡು ಸಾದಾರ‍್ಲಹಳ್ಳಿ ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದ. ಪೊಲೀಸರು ಅನುಮಾನದ ಮೇರೆಗೆ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ರೆ ಸತ್ಯ ಬಯಲಾಗಿದೆ. ಇದೀಗ ಮಾಡಿದ ತಪ್ಪಿಗೆ ದುರಳ ಕಂಬಿ ಹಿಂದೆ ಬಿದ್ದಿದ್ದಾನೆ. ಆದರೆ ಏನೂ ಅರಿಯದ ಕಂದಮ್ಮ ಹೀಗೆ ಕ್ರೂರ ಮೃಗದ ಕೈಯಲ್ಲಿ ಜೀವ ಕಳೆದುಕೊಂಡಿದ್ದು ಮಾತ್ರ ಘೋರ ದುರಂತವೇ ಸರಿ.

Lover Son Murder

ಪೊಲೀಸರಿಗೆ ಸಿಕ್ಕ ಮಗುವಿನ ತಲೆ ಬುರಡೆ ಮತ್ತು ಮೂಳೆಗಳು

ಇದನ್ನೂ ಓದಿ: 6 ತಿಂಗಳ ಮಗು ಮುಂದೆಯೇ ಪತ್ನಿಯ ಕೊಲೆ, ಬಣ್ಣ ಬಯಲಾಗುತ್ತೆ ಅಂತಾ ವೈದ್ಯನೂ ಆತ್ಮಹತ್ಯೆ