ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಂಜಿನಪ್ಪ ಮೂಗು-ಬಾಯಿ ಮೂಲಕ ಒಂದೇ ಸಮಯದಲ್ಲಿ ವಿವಿಧ ಸ್ವರ ಸೃಷ್ಟಿಸ್ತಾರೆ, ಇಲ್ಲಿದೆ ಪರಿಚಯ

| Updated By: ಸಾಧು ಶ್ರೀನಾಥ್​

Updated on: Oct 31, 2022 | 5:34 PM

Kannada Rajyotsava Award 2022: ಮೂಗಿನ ಮೂಲಕ ನೀರ ಝರಿ, ಉಸಿರಿನ ಮೂಲಕ ನಾದ ಝರಿ ಒಟ್ಟಿಗೇ ಹೊರಹೊಮ್ಮಿಸುತ್ತಾರೆ ಹಿರಿಯ ಕಲಾವಿದ ಮುಖವೀಣೆ ಆಂಜಿನಪ್ಪ. ರಾಜ್ಯ ಸರ್ಕಾರ ಆ ಅಪರೂಪದ ಕಲಾವಿದನನ್ನು ಗುರ್ತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ, ಗೌರವಿಸಿದೆ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಂಜಿನಪ್ಪ ಮೂಗು-ಬಾಯಿ ಮೂಲಕ ಒಂದೇ ಸಮಯದಲ್ಲಿ ವಿವಿಧ ಸ್ವರ ಸೃಷ್ಟಿಸ್ತಾರೆ, ಇಲ್ಲಿದೆ ಪರಿಚಯ
ಆಂಜಿನಪ್ಪ ಮೂಗು-ಬಾಯಿ ಮೂಲಕ ಒಂದೇ ಸಮಯದಲ್ಲಿ ವಿವಿಧ ಸ್ವರ ಸೃಷ್ಟಿಸ್ತಾರೆ
Follow us on

ಅವರ ಕಲೆ ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪ. ಅವರ ತರುವಾಯ ಆ ಕಲೆಯೂ ನಾಶವಾಗುತ್ತದೆಂಬ ಚಿಂತೆ! ಇವೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಆ ಅಪರೂಪದ ಕಲಾವಿದನನ್ನು ಗುರ್ತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award 2022) ನೀಡಿ ಗೌರವಿಸಿದೆ, ಅಷ್ಟಕ್ಕೂ ಆ ಕಲೆಯಾದ್ರುಯಾರು? ಅದರ ವಿಶೇಷತೆಯಾದ್ರು ಏನು? ಅನ್ನೋ ವಿವರ ಇಲ್ಲಿದೆ ನೋಡಿ.

ಅಪರೂಪದ ಕಲಾವಿದ ಮುಖವೀಣೆ ಆಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ!!

ಇವರು ಮುಖವೀಣೆ ಆಂಜಿನಪ್ಪ (Mukha Veena Kale Chikkaballapur artist Anjinappa). ಜನಪದ ಕಲಾವಿದ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಗವಿಕುಂಟಹಳ್ಳಿ ನಿವಾಸಿ. ಮುಖವೀಣೆ ಆಂಜಿನಪ್ಪ ಮೂಲತಃ ಕಲಾವಿದರ ಕುಟುಂಬದವರು. ತಮ್ಮ ಪೂರ್ವಜರಿಂದ ಬಂದಂತಹ ಮುಖವೀಣೆ ಕಲೆಯನ್ನೆ…. ಬಾಲ್ಯದಲ್ಲೇ ಕಲಿತುಕೊಂಡು, ಹೊಟ್ಟೆ ಪಾಡಿಗೆ ಊರೂರು ಸುತ್ತಿ ತಮ್ಮ ಕಲೆಯನ್ನ ಪ್ರದರ್ಶಿಸುತ್ತಾರೆ.

ಮೂಗಿನ ಮೂಲಕ ನೀರ ಝರಿ, ಉಸಿರಿನ ಮೂಲಕ ನಾದ ಝರಿ ಒಟ್ಟಿಗೇ:

ಮೊದ್ಲಿಗೆ ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕಲೆಯನ್ನ ದೇಶಾದ್ಯಂತ ಪ್ರಖ್ಯಾತಿಗೊಳಿಸಿ, ಹಲವು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಬೆರಳಿಣಿಕೆ ಸಂಖ್ಯೆಯಲ್ಲಿರುವ ಮುಖವೀಣೆ ಕಲಾವಿದರಲ್ಲಿ ಆಂಜಿನಪ್ಪ ಅವರೂ ಒಬ್ಬರು. ಆಂಜಿನಪ್ಪ ಹಾಗೂ ಅವರ ಕಲೆಯನ್ನು ಗುರ್ತಿಸಿ ರಾಜ್ಯ ಸರ್ಕಾರ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ಗೌರವ ಸಲ್ಲಿಸ್ತಿದೆ.

ಇವರ ಬತ್ತಳಿಕೆಯಲ್ಲಿರುವ ಪುಟ್ಟ ಪುಟ್ಟ ವಾದ್ಯಗಳು ಹಾಗೂ ಮುಖವೀಣೆಯಿಂದ ಹೊರಬರುವ ನಾದಲೀಲೆಗಳು ಎಂತಹವರನ್ನೂ ಮೋಡಿ ಮಾಡುತ್ತದೆ. ಈ ನಾದಗಾರುಡಿಗನ ಸ್ವರ ಮಾಧುರ್ಯಕ್ಕೆ ಸೋಲದವರೆ ಇಲ್ಲ. ಕೊಳಲು, ಶೃತಿವಾದ್ಯ ಹಾಗೂ ಮುಖವೀಣೆಗಳನ್ನ ಮುಪ್ಪುರಿಗೊಳಿಸಿ ನುಡಿಸಬಲ್ಲರಲ್ಲದೇ… ಮೂಗಿನ ಮೂಲಕ ನೀರ ಝರಿಯನ್ನೂ, ಉಸಿರಿನ ಮೂಲಕ ನಾದ ಝರಿಯನ್ನ ಒಟ್ಟಿಗೆ ಹರಿಸಿ ನೋಡುಗರನ್ನ ಮಂತ್ರಮುಗ್ದಗೊಳಿಸಬಲ್ಲರು. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಚಿಕ್ಕಬಳ್ಳಾಪುರದ ಸನಾದಿ ಅಪ್ಪಣ್ಣ ಎಂದೇ ಖ್ಯಾತರಾಗಿರುವ ಮುಖವೀಣೆ ಆಂಜಿನಪ್ಪನವರಿಗೆ ಈಗಾಗಲೇ ಹಲವಾರು ಪ್ರಶಸ್ತಿ ಸನ್ಮಾನಗಳು ಬಂದಿವೆ. ಆದ್ರೂ ಆಂಜಿನಪ್ಪನವರನ್ನು ಕಾಡ್ತಿರುವ ಆರ್ಥಿಕ ಸಂಕಷ್ಟ ಮಾತ್ರ ದೂರವಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಆಂಜಿನಪ್ಪ ಕೀರ್ತಿ ತಂದಿದ್ದಾರೆ. ಈಗ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯ ಜನ ಹಾಗೂ ಸ್ವತಃ ಆಂಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿಧ ಪ್ರಶಸ್ತಿಗಳ ಮಧ್ಯೆ ಇದೀಗ ನಾಡಿನ‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಆದ್ರೆ ಮುಖ ವೀಣೆ ಆಂಜಿನಪ್ಪನವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಸರ್ಕಾರ ಮತ್ತು ದಾನಿಗಳು ಅವರ ಸಹಾಯಕ್ಕೆ ಮುಂದಾಗಬೇಕಿದೆ.