Nandi Hills: ನಂದಿ ಗಿರಿಧಾಮ ಹೊಸ ವರ್ಷಾಚರಣೆಗೆ ಕ್ಲೋಸ್! ಸಾರ್ವಜನಿಕರಿಗೆ ಪ್ರವೇಶ ಬಂದ್ -ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ

| Updated By: ಸಾಧು ಶ್ರೀನಾಥ್​

Updated on: Dec 30, 2022 | 1:08 PM

Nandi Hills: ನಂದಿಗಿರಿಧಾಮದಲ್ಲಿ ಡಿಸೆಂಬರ್​ 31ರಂದು ರೂಮ್ ಬುಕಿಂಗ್ ಸಹ ರದ್ದುಪಡಿಸಲಾಗಿದೆ. ನಂದಿಗಿರಿಧಾಮದ ಸುತ್ತಮುತ್ತ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

Nandi Hills: ನಂದಿ ಗಿರಿಧಾಮ ಹೊಸ ವರ್ಷಾಚರಣೆಗೆ ಕ್ಲೋಸ್! ಸಾರ್ವಜನಿಕರಿಗೆ ಪ್ರವೇಶ ಬಂದ್ -ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ
ನಂದಿಗಿರಿಧಾಮ ಹೊಸ ವರ್ಷಾಚರಣೆಗೆ ಕ್ಲೋಸ್!
Follow us on

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ (Nandi Hills) ಹೊಸ ವರ್ಷಾಚರಣೆಗೆ (New Year 2023) ನಿರ್ಬಂಧ ಹೇರಲಾಗಿದೆ. ನಾಳೆ ಶನಿವಾರ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆವರೆಗೂ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ (Chikkaballapur DC) ಎನ್.ಎಂ. ನಾಗರಾಜ್ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ನಂದಿ ಹಿಲ್ಸ್​​ಗೆ ಸಾರ್ವಜನಿಕರ ಪ್ರವೇಶ ಮತ್ತು ಹೊಸ ವರ್ಷ ನಿಮಿತ್ತ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ.

ಡ್ರಿಂಕ್ ಆಂಡ್ ಡ್ರೈವ್ ಅಪಘಾತ ಹಾಗೂ ಕೊರೊನಾ (Covid 19) ಹರಡದಂತೆ ತಡೆಯುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ. ನಂದಿಗಿರಿಧಾಮದಲ್ಲಿ ಡಿಸೆಂಬರ್​ 31ರಂದು ರೂಮ್ ಬುಕಿಂಗ್ ಸಹ ರದ್ದುಪಡಿಸಲಾಗಿದೆ. ನಂದಿಗಿರಿಧಾಮದ ಸುತ್ತಮುತ್ತ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ನಂದಿಗಿರಿಧಾಮದ ಸುತ್ತಮುತ್ತ ಎಲ್ಲಾ ಹೌಸ್ ಫುಲ್!

ಕೊರೊನಾ ಸೋಂಕು ಹೊಂಟೋಯ್ತು ಅಂತ ಜನ ಫುಲ್ ಖುಷಿಯಾಗಿದ್ದು, ಈ ಬಾರಿ ಹೊಸ ವರ್ಷದಲ್ಲಿ ಜೋರಾದ ಪಾರ್ಟಿ ಮೂಡಲ್ಲಿ ಇದ್ರು. ಆದ್ರೆ ವಿದೇಶಿ ಕೊರೊನಾಗಳು ಮತ್ತೆ ಅಪ್ಪಳಿಸುವ ಭೀತಿ ಹಿನ್ನೆಲೆ ಸರ್ಕಾರ ಪಾರ್ಟಿ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಗಳು ಲಾಡ್ಜ್ ಗಳಿಗೆ ನಿರ್ಬಂಧ ವಿಧಿಸಿದೆ.

ಇದ್ರಿಂದ ರಾಜಧಾನಿ ಬೆಂಗಳೂರಿನ ಜನ, ಬೆಂಗಳೂರು ನಗರದ ಬದಲು ಹೊರವಲಯದತ್ತ ಚಿತ್ತ ಹರಿಸಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಫುರ ತಾಲೂಕಿನ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್ ಹೋಮ್ ಸ್ಟೇ ಗಳತ್ತ ಚಿತ್ತ ಹರಿಸಿದ್ದಾರೆ. ಇದ್ರಿಂದ ವಾರಕ್ಕೂ ಮುಂಚೆ ಇರೊಬರೊ ರೂಮ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ.

ನಂದಿಗಿರಿಧಾಮದ ಬಳಿ ಡಿಸ್ಕವರಿ ವಿಲೇಜ್ ರೆಸಾರ್ಟ್ ಅಭಿನಂದನ್ ಹೋಟೆಲ್, ಮೌಂಟ್ ವ್ಯೂ, ಸಿಂಚನಾ ಪ್ಯಾಲೆಸ್, ಎಸ್.ಆರ್.ಕೆ. ಸೇರಿದಂತೆ ಕೆಲವು ಹೋಮ್ ಸ್ಟೇ ಗಳು ಇವೆ. ಬಹುತೇಕ ಎಲ್ಲಾ ಕಡೆ ರೂಮ್ ಗಳು ಬುಕ್ ಆಗಿವೆ. ಮತ್ತೊಂದೆಡೆ ಚಿಕ್ಕಬಳ್ಳಾಫುರ ಜಿಲ್ಲಾ ಪೊಲೀಸರು ರಾತ್ರಿ 11.30ರವೆರೆಗೆ ಮಾತ್ರವೇ ಪಾರ್ಟಿ, ಸಂಭ್ರಮಾಚರಣೆಗೆ ಅವಕಾಶ ನೀಡಿದ್ದಾರೆ.

ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ಮೋಜು ಮಸ್ತಿ ಅಂತ ಅನೈತಿಕ ಅಶ್ಲೀಲ ಅವ್ಯವಹಾರ ಮಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ ಎಚ್ಚರಿಸಿದ್ದಾರೆ.

ಒಟ್ನಲ್ಲಿ ಕೊರೊನಾ ಸೋಂಕಿನ ಭೀತಿ ಈ ಬಾರಿಯೂ… ಹೊಸ ವರ್ಷದ ಸಂಭ್ರಮಾಚರಣೆಯ ಮೇಲೆ ಕರಿನೆರಳು ಬೀರಿದೆ. ಬೆಂಗಳೂರು ಬಿಟ್ಟು ಹೊರವಲಯದತ್ತ ಹೋಗೋಣ ಅಂದ್ರೆ ಎಲ್ಲೆಡೆ ಬುಕಿಂಗ್ ಕ್ಲೋಸ್ ಆಗಿದೆ.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Published On - 1:05 pm, Fri, 30 December 22