ಚಿಕ್ಕಬಳ್ಳಾಪುರ: ಯಾವ ಊರೋ.. ಯಾರ್ ಹೆತ್ತ ಮಗಳೋ..ಯಾರನ್ನ ನಂಬಿ ಬಂದಿದ್ಳೋ.. ಅದ್ಯಾವ ಕಿರಾತಕನ ಕೈಗೆ ಸಿಲುಕಿದ್ಳೋ ಏನೋ.. ರಾಗಿ ಹೊಲದ ಮಧ್ಯೆಯೇ ರಕ್ಕಸರ ಕೈಗೆ ಸಿಲುಕಿ ನಲುಗಿದ್ದಾಳೆ. ನೋಡಲಾಗದಂತಹ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದಾಳೆ. ಚಿಕ್ಕಬಳ್ಳಾಪುರದ(chikkaballapur) ಹಾರೋಬಂಡೆ ಗ್ರಾಮದ ಹೈವೇ ಬಳಿ ರಾಗಿ ಹೊಲದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಯುವತಿ ಶವ (Dead Body)ಪತ್ತೆಯಾಗಿದ್ದು, ಅನ್ಯರಾಜ್ಯದ ಯುವತಿಯನ್ನ ಇಲ್ಲಿ ಕೊಂದಿದ್ಯಾರು..? ಅಪರಿಚಿತ ಯುವತಿಯ ಹತ್ಯೆ ಕಾರಣವೇ ನಿಗೂಢವಾಗಿದೆ.
ಹೊನ್ನೇನಹಳ್ಳಿಯ ವೆಂಕಟೇಶಪ್ಪಗೆ ಸೇರಿದ ರಾಗಿ ಜಮೀನಿನಲ್ಲಿ ಯುವತಿ ತಲೆಯನ್ನ ಜಜ್ಜಿಹಾಕಿರುವ ಕ್ರಿಮಿಗಳು, ಅರೆಬೆತ್ತಲಾಗಿ ಶವವನ್ನ ಎಸೆದಿದ್ದಾರೆ. ಅಪರಿಚಿತ ಯುವತಿಯ ಇದೇ ಮೃತದೇಹ ಜನರನ್ನೆಲ್ಲ ಬೆಚ್ಚಿ ಬೀಳಿಸಿದೆ. ಕಲ್ಲಿನಿಂದ ಜಜ್ಜಿ ಯುವತಿಯನ್ನ ಕೊಂದಿರುವ ಕ್ರಿಮಿಗಳು, ಅರೆಬೆತ್ತಲಾಗಿ ಶವ ಎಸೆದು ಹೋಗಿದ್ದಾರೆ.. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ಪರಿಶೀಲನೆ ಪ್ರಕಾರ, ಹತ್ಯೆಯಾದ ಯುವತಿ ಮೃತ ಯುವತಿ ನೇಪಾಳ ಅಥವಾ ಈಶಾನ್ಯ ರಾಜ್ಯಗಳ ಮೂಲದವಳು ಎನ್ನಲಾಗ್ತಿದೆ.
ಅನೈತಿಕ ಸಂಬಂಧ: ಅಡಿಕೆ ತರಲು ಪ್ರಿಯಕರನ ಮನೆಗೆ ಹೋದವಳು ಹೆಣವಾದಳು!
ಆದ್ರೆ, ಯುವತಿಯನ್ನ ಇಲ್ಲಿಗೆ ಕರೆತಂದಿದ್ದು ಯಾರು..? ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾರಾ..? ಇಲ್ಲ ಬೇರೆ ಯಾವುದಾದ್ರೂ ಕಾರಣಕ್ಕೆ ಹತ್ಯೆ ನಡೆದಿದೆಯಾ ಅನ್ನೋ ಪ್ರಶ್ನೆಗಳು ಎದ್ದಿವೆ.. ಸದ್ಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಶವವಾಗಿರುವ ಯುವತಿ ಕೈಯಲ್ಲಿ ವಾಚ್ ಇದೆ. ಚಪ್ಪಲಿಯೂ ಅಲ್ಲೇ ಬಿದ್ದಿದೆ. ಆದ್ರೆ, ವಿವಾಹವಾದ ಕುರುಹುಗಳು ಇಲ್ಲ. ಸದ್ಯ, ಮೃತದೇಹವನ್ನ ಮೆಡಿಕಲ್ ಕಾಲೇಜು ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.. ಯುವತಿ ಹತ್ಯೆಯನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹತ್ತಾರು ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ.
ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಫುರ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Tue, 8 November 22