AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ

ಆಶೋಕ್ ಲೈಲ್ಯಾಂಡ್ ಮಿನಿ ಟೆಂಪೋ ಚಾಲಕ ತನ್ನದೇ ವಾಹನದಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದ ಬಳಿ ಘಟನೆ ನಡೆದಿದೆ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದ ಚಾಲಕ ಹೆದ್ದಾರಿ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಪೆರೇಸಂದ್ರ ಪೊಲೀಸರು ತನಿಖೆ ನಡೆಸಿದ್ದಾರೆ.

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ
ಮೃತ ವ್ಯಕ್ತಿ, ಟೆಂಪೋImage Credit source: tv9 kannada
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Apr 01, 2026 | 5:10 PM

Share

ಚಿಕ್ಕಬಳ್ಳಾಪುರ, ಏಪ್ರಿಲ್​ 01: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಪತ್ತೆಯಾಗಿದ್ದು (death), ಕೊಲೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುರುಬರಕುಂಟೆಯ ಕಾಲೋನಿ ನಿವಾಸಿ 48 ವರ್ಷದ ಸುಬ್ರಮಣಿ, ಶನಿವಾರ ಮನೆಯಿಂದ ಬಾಡಿಗೆಗೆ ಹೋಗಿ ಬರ್ತಿನಿ ಎಂದವನು ವಾಪಸ್ ಬಂದಿಲ್ಲ. ಇದರಿಂದ ಅನುಮಾನಗೊಂಡು ಹೆದ್ದಾರಿ ಬಳಿ ವಾಹನ ಹುಡುಕಿಕೊಂಡು ಬಂದಾಗ ಸುಬ್ರಮಣಿಯ ವಾಹನ ಹಾಗೂ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್​​​ಗೆ ಚಾಕುವಿನಿಂದ 10 ಬಾರಿ ಇರಿದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಇನ್ನು ಸುಬ್ರಮಣಿಗೆ ಚಿಕ್ಕಬಳ್ಳಾಪುರ ತಾಲೂಕಿನ ಪರೇಸಂದ್ರ ಗ್ರಾಮದ ಪರಿಚಯಸ್ಥ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತಂತೆ. ಆಕೆಯನ್ನು ನೋಡಿಕೊಂಡು ವಾಪಸ್ ಬರುವಾಗ ಏನೋ ನಡೆದಿದೆ ಅಂತ ಸುಬ್ರಮಣಿ ಸಾವಿನ ಬಗ್ಗೆ ಆತನ ತಮ್ಮ ಮುನಿರಾಜು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೆರೇಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುಬ್ರಮಣಿ ಟೆಂಪೋದಲ್ಲೇ ಶವವಾಗಿದ್ದು, ಸಹಜ ಸಾವಾ, ಇಲ್ಲಾ ಯಾರಾದರೂ ಕೊಂದು ಶವ ಹಾಗೂ ವಾಹನ ಬಿಟ್ಟು ಪರಾರಿಯಾಗಿದ್ದಾರಾ ಎಂದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಹಿಂಬದಿಯಿಂದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿಯೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಬಳಿ ನಡೆದಿದೆ.  ಗುಂಡಾ ತಾಂಡಾದ ನಿವಾಸಿ ಕಿರಣ್ (27) ಮೃತ ಬೈಕ್ ಸವಾರ. ಹಗರಿಬೊಮ್ಮನ ಹಳ್ಳಿ ಸಿಪಿಐ, ವಿಕಾಸ್ ಲಮಾಣಿ, ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ ಆಪ್ತನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುಂಡಾ ತಾಂಡದಿಂದ, ಹೊಸಪೇಟೆಗೆ ಮಾತ್ರೆ ತರಲು ಬೈಕ್ ಸವಾರ ಕಿರಣ್ ಹೊರಟ್ಟಿದ್ದರು. ಬೆಂಗಳೂರಿನಿಂದ ಅಹಮದಾಬಾದ್ ಕಡೆ ಹೋಗುತ್ತಿದ್ದ ಲಾರಿ, ಬೈಕ್ ಸವಾರನಿಗೆ ಗುದ್ದಿದೆ. ತಲೆ ಮತ್ತು ಬೆನ್ನು, ಮುಖಕ್ಕೆ ಬಲವಾದ ಗಾಯವಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನನ್ನು ಮರಿಯಮ್ಮನ ಹಳ್ಳಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us