ಚಿಕ್ಕಬಳ್ಳಾಪುರ, ಜು.18: ಬಯಲು ಸೀಮೆ ಜಿಲ್ಲೆಗಳಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯಲ್ಲಿ ಈ ಬಾರಿಯೂ ನಿರೀಕ್ಷೆಯಂತೆ ಮಳೆರಾಯ ಕರುಣೆ ತೋರುತ್ತಿಲ್ಲ. ಇದರಿಂದ ಜಿಲ್ಲೆಯಾದ್ಯಂತ ನಿರೀಕ್ಷೆ ಹಾಗೂ ವಾಡಿಕೆ ಮಳೆಯೂ ಬರುತ್ತಿಲ್ಲ, ರೈತರು ಹುಯ್ಯೊ ಮಳೆರಾಯ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದ್ರೆ, ಮಳೆರಾಯ ಚಿಕ್ಕಬಳ್ಳಾಪುರದ ಬದಲು ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನೆರೆ ಸೃಷ್ಟಿಸಿದ್ದಾನೆ. ಇದ್ರಿಂದ ಮಳೆರಾಯ ಚಿಕ್ಕಬಳ್ಳಾಪುರದತ್ತ ಕರುಣೆ ತೊರಲಿ ಎಂದು ಚಿಕ್ಕಬಳ್ಳಾಪುರ ನಗರದ ಶ್ರೀ ಮಹಾಕಾಳಿ ದೇವಸ್ಥಾನಲ್ಲಿ ಮಳೆಗಾಗಿ ಪ್ರಾರ್ಥಿಸಿ, ವಿವಿಧ ದೇವರುಗಳ ಕಲ್ಯಾಣೋತ್ಸವ ನಡೆಸಲಾಯಿತು.
ಇನ್ನು ದೇವಸ್ಥಾನದಲ್ಲಿ ನಡೆಯುವ ಪೂಜೆ ನೋಡಲು ಸಾವಿರಾರು ಜನ ಮಹಿಳೆಯರು, ಭಕ್ತರು ಆಗಮಿಸಿದ್ದರು. ಕಲ್ಯಾಣೋತ್ಸವ ಪ್ರಯುಕ್ತ ಮಹಾಕಾಳಿ ದೇವಸ್ಥಾನವನ್ನು ವಿವಿಧ ತಳಿರು ತೊರಣ, ಎಳನೀರು, ತೆಂಗಿನಕಾಯಿ, ಜೋಳದ ತೆನೆ, ವಿವಿಧ ಹೂ ಗಳಿಂದ ಅದ್ದೂರಿಯಾಗಿ ಅಲಂಕರಿಸಲಾಗಿತ್ತು. ಒಂದೆ ಜಾಗದಲ್ಲಿ ಗಿರಿಜಾ ಕಲ್ಯಾಣೋತ್ಸವ, ಸುಬ್ರಮಣ್ಯೇಶ್ವರ ಸ್ವಾಮಿ ಕಲ್ಯಾಣೋತ್ಸವ, ಸೀತಾರಾಮ ಕಲ್ಯಾಣೋತ್ಸವ, ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವ, ಲಕ್ಷ್ಮಿ ನರಸಿಂಹಸ್ವಾಮಿ ಕಲ್ಯಾಣೋತ್ಸವ ನೋಡು ಭಾಗ್ಯ ಭಕ್ತಾಧಿಗಳಿಗೆ ದೊರೆಯಿತು.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, 15ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ
ಒಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಬೇಡ ಎಂದರೂ ಮಳೆಯ ಅಬ್ಬರ ಜೋರಾಗಿದೆ. ಆದ್ರೆ, ಇತ್ತ ಬಯಲು ಸೀಮೆಯ ಚಿಕ್ಕಬಳ್ಳಾಪುರದಲ್ಲಿ ಪ್ರಾರ್ಥಿಸಿದರೂ ಮಳೆ ಬರುತ್ತಿಲ್ಲ. ಹುಯ್ಯೊ ಮಳೆರಾಯ ಎಂದು ಬೇಡಿಕೊಂಡರೂ ನಿರೀಕ್ಷೆಯಂತೆ ಮಳೆ ಬರುತ್ತಿಲ್ಲ. ಇದ್ರಿಂದ ಜನ ದೇವರ ಮೊರೆ ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ