ಚಿಕ್ಕಬಳ್ಳಾಪುರ: ಮೊನ್ನೆ ಕೈದಿ ಆತ್ಮಹತ್ಯೆ; ಇಂದು ಮತ್ತೊರ್ವ ವಿಚಾರಣಾಧೀನ ಕೈದಿ ಅಸ್ವಸ್ಥ

| Updated By: preethi shettigar

Updated on: Sep 29, 2021 | 11:47 AM

ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಬಳಿಯ ಜಿಲ್ಲಾ ಕಾರಗೃಹದಲ್ಲಿ ಮೊನ್ನೆಯಷ್ಟೇ ವಿಚಾರಣಾಧೀನ ಆರೋಪಿ ನಾಗೇಶ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದನು. ಇದೀಗ ಮತ್ತೋರ್ವ ಕೈದಿ ಅನುಮಾನಸ್ಫದವಾಗಿ ಅಸ್ವಸ್ಥನಾಗಿದ್ದಾನೆ.

ಚಿಕ್ಕಬಳ್ಳಾಪುರ: ಮೊನ್ನೆ ಕೈದಿ ಆತ್ಮಹತ್ಯೆ; ಇಂದು ಮತ್ತೊರ್ವ ವಿಚಾರಣಾಧೀನ ಕೈದಿ ಅಸ್ವಸ್ಥ
ಖೈದಿ ಅಸ್ವಸ್ಥ
Follow us on

ಚಿಕ್ಕಬಳ್ಳಾಪುರ: ಜೈಲಿನಲ್ಲಿ ವಿಚಾರಣಾಧೀನ ಕೈದಿ ಅಸ್ವಸ್ಥನಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಅಶೋಕ್ (29) ಅಸ್ವಸ್ಥನಾದ ವಿಚಾರಣಾಧೀನ ಕೈದಿ. ಜೈಲಿನಲ್ಲಿ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿದೆ ಎಂದು ಶಂಕಿಸಲಾಗಿದೆ. ಪ್ರಜ್ಞಾಹೀನನಾಗಿರುವ ವಿಚಾರಣಾಧೀನ ಕೈದಿ ಆಶೋಕ್​ನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಬಳಿಯ ಜಿಲ್ಲಾ ಕಾರಗೃಹದಲ್ಲಿ ಮೊನ್ನೆಯಷ್ಟೇ ವಿಚಾರಣಾಧೀನ ಆರೋಪಿ ನಾಗೇಶ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದನು. ಇದೀಗ ಮತ್ತೋರ್ವ ಕೈದಿ ಅನುಮಾನಸ್ಫದವಾಗಿ ಅಸ್ವಸ್ಥನಾಗಿದ್ದಾನೆ.

ಚಿಕ್ಕಬಳ್ಳಾಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿ ಅನುಮಾನಸ್ಪದ ಸಾವು
ಜಿಲ್ಲೆಯ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ನಿನ್ನೆವರೆಗೂ ಚೆನ್ನಾಗಿದ್ದ ವಿಚಾರಣಾಧೀನ ಕೈದಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾನೆ. 26 ವರ್ಷದ ನಾಗೇಶ್ ಎಂಬುವವನು ಸಾವನ್ನಪ್ಪಿದ ವಿಚಾರಣಾಧೀನ ಕೈದಿ. ನಾಗೇಶ್​ನ ಮೂಗಿನಲ್ಲಿ ರಕ್ತ ಸುರಿದಿದೆ. ಸದ್ಯ ನಾಗೇಶ್ ಶವ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ನಾಗೇಶ್ ಜೈಲು ಸೇರಿದ್ದ. ಬಾಗಲೂರು ಪೊಲೀಸ್ ಠಾಣೆಯ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯಾಗಿದ್ದ. ನಿನ್ನೆ ರಾತ್ರಿ 10.50ಕ್ಕೆ ಆರೋಗ್ಯದಲ್ಲಿ ಏರು ಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಾಗೇಶ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:
ಚಿಕ್ಕಬಳ್ಳಾಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿ ಅನುಮಾನಸ್ಪದ ಸಾವು

ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಯಾಕೆ? ಒಟ್ಟಿಗೆ ಹಾಕಿ, ಹೊಡೆದುಕೊಂಡು ಸಾಯಲಿ- ಖಾದರ್ ಸಲಹೆ