ಚಿಕ್ಕಬಳ್ಳಾಪುರ: ನಿತ್ಯೋತ್ಸವ ಕವಿ ಎಂದೇ ಖ್ಯಾತನಾಮರಾದ ಡಾ. ಕೆಎಸ್ ನಿಸಾರ್ ಅಹಮದ್ರವರ (Nisar Ahmed) ಪುತ್ಥಳಿಯನ್ನು (Statue) ಚಿಕ್ಕಬಳ್ಳಾಪುರ ತಾಲೂಕಿನ ಮೊಟ್ಲೋರು ಗ್ರಾಮದ ಬಳಿ ಹಚ್ಚ ಹಸಿರಿನ ಸುಂದರ ಪರಿಸರದ ಮದ್ಯೆ ಅನಾವರಣ ಮಾಡಲಾಯಿತು. ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಪೌರಾಡಳಿತ ಸಚಿವ ಎನ್ ನಾಗರಾಜ್, ಕವಿ ಬಿಆರ್ ಲಕ್ಷ್ಮಣ ರಾವ್ ಸೇರಿದಂತೆ ಗಣ್ಯರು ಆಗಮಿಸಿ ಪುತ್ಥಳಿ ಅನಾವರಣ ಮಾಡಿದರು.
ಪ್ರೋ. ಕೆಎಸ್ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸಮಾನ ಮನಸ್ಕರು ಸೇರಿ ಟ್ರಸ್ಟ್ವೊಂದನ್ನು ರಚಿಸಿದ್ದು, ಟ್ರಸ್ಟ್ಗೆ ರಾಜ್ಯ ಸರ್ಕಾರ ಎರಡೂವರೆ ಎಕೆರೆ ಜಮೀನು ನೀಡಿದೆ. ಟ್ರಸ್ಟ್ ಹಾಗೂ ಕೆಎಸ್ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ನಿಸಾರ್ ಇನ್ಸ್ಟಿಟ್ಯೂಟ್ ಆಫ್ ಏಜುಕೇಷನ್ ಸಂಸ್ಥೆಯನ್ನು ನೊಂದಣಿ ಮಾಡಿದ್ದು, ನಿನ್ನೆ ಟ್ರಸ್ಟ್ ಹಾಗೂ ಶಿಕ್ಷಣ ಸಂಸ್ಥೆಯನ್ನು ಸಹ ಉದ್ಘಾಟನೆ ಮಾಡಲಾಯಿತು.
ಕವಿ ನಿಸಾರ್ ಅಹಮದ್ ಅವರು ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅದರಲ್ಲೂ ಅವರ ಸಾಹಿತ್ಯ ಕನ್ನಡ ಭಾಷಾಭಿಮಾನವನ್ನು ಹೆಚ್ಚಿಸುತ್ತದೆ. ಜೊತೆಗೆ ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಸಂದೇಶಗಳನ್ನು ತಮ್ಮ ಅಮೂಲ್ಯವಾದ ಸಾಹಿತ್ಯದ ಮೂಲಕ ಕೊಡುಗೆ ನೀಡಿದ್ದಾರೆ. ಅವರ ಎಷ್ಟೋ ಕವಿತೆಗಳು ಜನಪ್ರಿಯ ಭಾವಗೀತೆಗಳಾಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ. ನಿಸಾರ್ ಅಹಮದ್ ಅವರು ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದು, ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೂಲದವರು.
ಕವಿ ನಿಸಾರ್ ಅಹಮದ್ ಸೊಸೆ ಹೇಳಿದ್ದೇನು?:
ನಾಡೋಜ ಕವಿ ನಿಸಾರ್ ಅಹಮದ್ ಅವರ ಸೊಸೆ ರುಮಾನ್ ನವೀದ್ ಮಾತನಾಡಿ, ಈ ಸ್ಥಳದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಮ್ಯೂಸಿಯಂ ಒಂದನ್ನು ನಿರ್ಮಿಸುವ ಆಸೆ ಇದೆ. ಸರ್ಕಾರದ ಸಹಕಾರದೊಂದಿಗೆ ಮಾಡುವ ಉದ್ದೇಶವಿದೆ. ನಿಸಾರ್ ಅವರ ಹೆಸರಿನ ಟ್ರಸ್ಟ್ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಅಲ್ಲದೇ ಹಲವು ಸೇವಾ ಕಾರ್ಯಗಳ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸಲಾಗುವುದು ಎಂದರು.
ವರದಿ: ಭೀಮಪ್ಪ ಪಾಟೀಲ
ಇದನ್ನೂ ಓದಿ
ಮುಸ್ಲಿಂ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಹಿಂದೂ ಧಾರ್ಮಿಕ ಆಚರಣೆ; ಹಿಜಾಬ್ ಗಲಾಟೆ ನಡುವೆ ಮಾದರಿಯಾದ ಅಂತ್ಯ ಸಂಸ್ಕಾರ
ಅಲ್ಲು ಅರ್ಜುನ್ ಜತೆ ರನ್ನಿಂಗ್ ರೇಸ್ಗೆ ಇಳಿದ ಮಗಳು ಅಲ್ಲು ಅರ್ಹಾ; ವೈರಲ್ ಆಯ್ತು ವಿಡಿಯೋ
Published On - 12:44 pm, Tue, 8 February 22