ಅಲ್ಲು ಅರ್ಜುನ್​ ಜತೆ ರನ್ನಿಂಗ್​ ರೇಸ್​ಗೆ ಇಳಿದ ಮಗಳು ಅಲ್ಲು ಅರ್ಹಾ; ವೈರಲ್​ ಆಯ್ತು ವಿಡಿಯೋ

ಅಲ್ಲು ಅರ್ಜುನ್​ ಪತ್ನಿ ಸ್ನೇಹಾ ರೆಡ್ಡಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಗಾರ್ಡನ್​ ಒಂದರ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಹಾಗೂ ಅಲ್ಲು ಅರ್ಹ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್​ ಜತೆ ರನ್ನಿಂಗ್​ ರೇಸ್​ಗೆ ಇಳಿದ ಮಗಳು ಅಲ್ಲು ಅರ್ಹಾ; ವೈರಲ್​ ಆಯ್ತು ವಿಡಿಯೋ
ಅಲ್ಲು ಅರ್ಜುನ್​-ಅಲ್ಲು ಅರ್ಹ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 08, 2022 | 10:02 AM

ಅಲ್ಲು ಅರ್ಜುನ್​ (Allu Arjun) ಅವರು ಟಾಲಿವುಡ್​ನಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ಪುಷ್ಪ’ ಚಿತ್ರ (Pushpa Movie) ಸೂಪರ್ ಹಿಟ್​ ಆಗಿದೆ. ಬಾಕ್ಸ್​ ಆಫೀಸ್​ಅನ್ನು ಈ ಚಿತ್ರ ಉಡೀಸ್​ ಮಾಡಿದೆ. ಸಿನಿಮಾಗಳಿಗೆ ನೀಡುವಷ್ಟೇ ಸಮಯವನ್ನು ಅಲ್ಲು ಅರ್ಜುನ್​ ತಮ್ಮ ಕುಟುಂಬಕ್ಕೂ ನೀಡುತ್ತಾರೆ. ವರ್ಷಕ್ಕೆ ಒಂದೆರಡು ಬಾರಿ ಕುಟುಂಬದ ಜತೆ ವಿದೇಶ ಪ್ರಯಾಣ ಮಾಡುತ್ತಾರೆ. ಕುಟುಂಬದ ಜತೆ ಹಬ್ಬವನ್ನು ಆಚರಿಸುತ್ತಾರೆ. ಈಗ ಅವರು ಮಗಳು ಅಲ್ಲು ಅರ್ಹಾ (Allu Arha) ಜತೆ ಖುಷಿಯಿಂದ ಸಮಯ ಕಳೆಯುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ನಟಿ ಸಮಂತಾ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಈ ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ.

ಅಲ್ಲು ಅರ್ಜುನ್​ ಪತ್ನಿ ಸ್ನೇಹಾ ರೆಡ್ಡಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಗಾರ್ಡನ್​ ಒಂದರ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಹಾಗೂ ಅಲ್ಲು ಅರ್ಹಾ ಅವರು ರನ್ನಿಂಗ್​ ರೇಸ್​ ಮಾಡಿದ್ದಾರೆ. ಇದರಲ್ಲಿ ಅಲ್ಲು ಅರ್ಹಾ ಗೆದ್ದಿದ್ದಾರೆ. ಈ ಕ್ಯೂಟ್​ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ನೊಬೆಲ್​ ವಿಶ್ವ ದಾಖಲೆ ಪಟ್ಟಿಯಲ್ಲಿ ಅಲ್ಲು ಅರ್ಹಾ

ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್​ ಆಡಿದ್ದಾಳೆ. ಈ ವಿಡಿಯೋವನ್ನು ಅಲ್ಲು ಅರ್ಜುನ್​ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್​ ವರ್ಲ್ಡ್​ ರೆಕಾರ್ಡ್​ ನೀಡಿ ಗೌರವಿಸಲಾಗಿದೆ. ಇದು ಅಲ್ಲು ಅರ್ಜುನ್​ ಕುಟುಂಬಕ್ಕೆ ಖುಷಿ ನೀಡಿತ್ತು.

ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾಗೆ ಇನ್ನೂ 5ರ ಪ್ರಾಯ. ಈ ಪುಟಾಣಿಗೆ ಸಮಂತಾ ಅಕ್ಕಿನೇನಿ ನಟನೆಯ ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಿದ್ದಾಳೆ.

‘ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಅಲ್ಲು ಅರ್ಜುನ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: Pushpa: ಕಾರಿನಲ್ಲಿ ನಡೆವ ರಶ್ಮಿಕಾ-ಅಲ್ಲು ಅರ್ಜುನ್ ಇಂಟಿಮೇಟ್ ದೃಶ್ಯಕ್ಕೆ ಕತ್ತರಿ 

ಪುನೀತ್​ ಮನೆಗೆ ಭೇಟಿ, ಸಮಾಧಿಗೆ ನಮನ; ಇಲ್ಲಿವೆ ಅಲ್ಲು ಅರ್ಜುನ್ ಭೇಟಿಯ ಫೋಟೋ ಚಿತ್ರಣ

Published On - 9:56 am, Tue, 8 February 22