ಪುನೀತ್ ಮನೆಗೆ ಭೇಟಿ, ಸಮಾಧಿಗೆ ನಮನ; ಇಲ್ಲಿವೆ ಅಲ್ಲು ಅರ್ಜುನ್ ಭೇಟಿಯ ಫೋಟೋ ಚಿತ್ರಣ
ಪುನೀತ್ ನಿಧನ ಹೊಂದಿದ ಸಂದರ್ಭದಲ್ಲಿ ‘ಪುಷ್ಪ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು ಅಲ್ಲು ಅರ್ಜುನ್. ಬೆಂಗಳೂರಿಗೆ ಸಿನಿಮಾ ಕೆಲಸದ ನಿಮಿತ್ತ ಅವರು ಬಂದಿದ್ದರು. ಈ ಸಂದರ್ಭದಲ್ಲಿ ಪುನೀತ್ ಮನೆಗೆ ತೆರಳೋದು ಉತ್ತಮವಲ್ಲ ಎನ್ನುವ ಕಾರಣಕ್ಕೆ ಅಲ್ಲು ಅರ್ಜುನ್ ಹಾಗೆಯೇ ಹೈದರಾಬಾದ್ಗೆ ಮರಳಿದ್ದರು.
Updated on: Feb 03, 2022 | 3:47 PM

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಪುನೀತ್ ನಿಧನ ಹೊಂದಿ 3 ತಿಂಗಳ ಬಳಿಕ ಅವರು ಅಪ್ಪು ಮನೆಗೆ ತೆರಳಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ.

ಪುನೀತ್ ನಿಧನ ಹೊಂದಿದ ಸಂದರ್ಭದಲ್ಲಿ ‘ಪುಷ್ಪ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು ಅಲ್ಲು ಅರ್ಜುನ್. ಬೆಂಗಳೂರಿಗೆ ಸಿನಿಮಾ ಕೆಲಸದ ನಿಮಿತ್ತ ಅವರು ಬಂದಿದ್ದರು. ಈ ಸಂದರ್ಭದಲ್ಲಿ ಪುನೀತ್ ಮನೆಗೆ ತೆರಳೋದು ಉತ್ತಮವಲ್ಲ ಎನ್ನುವ ಕಾರಣಕ್ಕೆ ಅಲ್ಲು ಅರ್ಜುನ್ ಹಾಗೆಯೇ ಹೈದರಾಬಾದ್ಗೆ ಮರಳಿದ್ದರು.

ಅಲ್ಲು ಅರ್ಜುನ್ ಮೊದಲಿಗೆ ತೆರಳಿದ್ದು ಶಿವರಾಜ್ಕುಮಾರ್ ನಿವಾಸಕ್ಕೆ. ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಅವರನ್ನು ಅಲ್ಲು ಅರ್ಜುನ್ ಭೇಟಿ ಮಾಡಿದರು. ಶಿವಣ್ಣನಿಗೆ ನಾಲ್ಕು ಧೈರ್ಯದ ಮಾತುಗಳನ್ನು ಹೇಳಿದರು. ಈ ಭೇಟಿ ಶಿವರಾಜ್ಕುಮಾರ್ಗೆ ಖುಷಿ ನೀಡಿದೆ.

ಬಳಿಕ ಅವರು ಪುನೀತ್ ನಿವಾಸಕ್ಕೆ ಭೇಟಿ ನೀಡಿದರು. ಪುನೀತ್ ಪತ್ನಿ ಅಶ್ವಿನಿ ಅವರು ತುಂಬಾನೇ ನೊಂದುಕೊಂಡಿದ್ದಾರೆ. ಅವರಿಗೆ ಈ ನೋವಿನಿಂದ ಹೊರಬರೋಕೆ ಸಾಧ್ಯವೇ ಆಗುತ್ತಿಲ್ಲ. ಈಗ ಅಲ್ಲು ಅರ್ಜುನ್ ಅವರು ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.

ಮನೆಯಲ್ಲಿ ಪುನೀತ್ ಅವರ ಫೋಟೋವನ್ನು ಇಡಲಾಗಿದೆ. ಮೇಲ್ಭಾಗದಲ್ಲಿ ರಾಜ್ಕುಮಾರ್ ಹಾಗೂ ಪಾರ್ವತಮ್ಮ, ಕೆಳ ಭಾಗದಲ್ಲಿ ಪುನೀತ್ ಫೋಟೋ ಇದೆ. ಇದಕ್ಕೆ ಅಲ್ಲು ಅರ್ಜುನ್ ನಮಸ್ಕರಿಸಿದರು. ಈ ವೇಳೆ ಅವರು ಭಾವುಕರಾಗಿದ್ದರು.

ನಂತರ ಅಲ್ಲು ಅರ್ಜುನ್ ಅವರು ಪುನೀತ್ ಸಮಾಧಿಗೆ ಭೇಟಿ ನೀಡಿದರು. ಅಷ್ಟೇ ಅಲ್ಲ, ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಅವರು ಮಾಡಿದರು.

ಈ ವೇಳೆ ಅಂಬರೀಷ್, ರಾಜ್ಕುಮಾರ್ ಹಾಗೂ ಪಾರ್ವತಮ್ಮ ಸಮಾಧಿಗೆ ಅಲ್ಲು ಅರ್ಜುನ್ ನಮಿಸಿದ್ದಾರೆ. ಸದ್ಯ, ಈ ಫೋಟೋಗಳು ವೈರಲ್ ಆಗುತ್ತಿವೆ.

ಪಾರ್ವತಮ್ಮ ಸಮಾಧಿ ಎದುರು ಅಲ್ಲು ಅರ್ಜುನ್



















