AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: ಐಪಿಎಲ್ ಮೆಗಾ ಹರಾಜಿನಲ್ಲಿದ್ದಾರೆ ಪಾಕಿಸ್ತಾನ್ ಮೂಲದ ಮೂವರು ಕ್ರಿಕೆಟಿಗರು

IPL 2022 Auction: ವಿಶೇಷ ಎಂದರೆ ಈ ಪಟ್ಟಿಯಲ್ಲಿ ಪಾಕಿಸ್ತಾನ್ ಮೂಲದ ಮೂವರು ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2008 ರಲ್ಲಿ ಪಾಕ್ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಪಾಕ್ ಆಟಗಾರರನ್ನು ಐಪಿಎಲ್​ನಿಂದ ಬ್ಯಾನ್ ಮಾಡಲಾಗಿತ್ತು.

TV9 Web
| Edited By: |

Updated on: Feb 03, 2022 | 2:39 PM

Share
ಐಪಿಎಲ್ (Indian Premier League) ಸೀಸನ್​ 15 ಮೆಗಾ ಹರಾಜಿಗೆ ಆಟಗಾರರ ಶಾರ್ಟ್​ ಲೀಸ್ಟ್​ ಮಾಡಲಾಗಿದೆ. ಅದರಂತೆ ಈ ಹಿಂದೆ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ 1214 ಆಟಗಾರರಿಂದ ಅಂತಿಮ ಪಟ್ಟಿಗೆ 590 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

1 / 7
 ಈ ಪಟ್ಟಿಯಲ್ಲಿ  370 ಭಾರತೀಯ ಕ್ರಿಕೆಟಿಗರಿದ್ದರೆ, 220 ವಿದೇಶಿ ಆಟಗಾರರು ಇದ್ದಾರೆ. ಇನ್ನು 220 ವಿದೇಶಿ ಆಟಗಾರರಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾ ಆಟಗಾರರು. ಆಸ್ಟ್ರೇಲಿಯಾದ 47 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್​ನ 34 ಆಟಗಾರರು, ಸೌತ್ ಆಫ್ರಿಕಾದ 33 ಆಟಗಾರರು ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ.

2 / 7
ಹಾಗೆಯೇ ಇಂಗ್ಲೆಂಡ್​ನ 24 ಆಟಗಾರರು, ನ್ಯೂಜಿಲೆಂಡ್​ನ 24 ಆಟಗಾರರು, ಶ್ರೀಲಂಕಾದ 23 ಆಟಗಾರರು, ಅಫ್ಘಾನಿಸ್ತಾನದ 17 ಆಟಗಾರರು, ಬಾಂಗ್ಲಾದೇಶದ 5 ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐರ್ಲೆಂಡ್​ನ 5 ಆಟಗಾರರು, ನಮೀಬಿಯಾದ 3 ಆಟಗಾರರು, ಸ್ಕಾಟ್ಲೆಂಡ್​ನ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಯುಎಸ್​ಎ, ನೇಪಾಳ, ಜಿಂಬಾಬ್ವೆಯಿಂದ ಒಬ್ಬೊಬ್ಬ ಆಟಗಾರರು ಮೆಗಾ ಹರಾಜು ಪಟ್ಟಿಯ ಅಂತಿಮ ಲೀಸ್ಟ್​ನಲ್ಲಿದ್ದಾರೆ.

3 / 7
ವಿಶೇಷ ಎಂದರೆ ಈ ಪಟ್ಟಿಯಲ್ಲಿ ಪಾಕಿಸ್ತಾನ್ ಮೂಲದ ಮೂವರು ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2008 ರಲ್ಲಿ ಪಾಕ್ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಪಾಕ್ ಆಟಗಾರರನ್ನು ಐಪಿಎಲ್​ನಿಂದ ಬ್ಯಾನ್ ಮಾಡಲಾಗಿತ್ತು. ಇದಾಗ್ಯೂ ಪಾಕ್ ಮೂಲದ ಕೆಲ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಪಾಕ್ ಮೂಲದ ಮೂವರು ಆಟಗಾರರು ಮೆಗಾ ಹರಾಜಿನಲ್ಲಿದ್ದಾರೆ. ಈ ಆಟಗಾರರ ಬಗೆಗಿನ ಮಾಹಿತಿ ಇಲ್ಲಿದೆ.

4 / 7
ಇಮ್ರಾನ್ ತಾಹಿರ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಬಾರಿ ಕೂಡ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ಮೂಲದವರಾಗಿರುವ ಇಮ್ರಾನ್ ತಾಹಿರ್ ತಮ್ಮ ಕ್ರಿಕೆಟ್ ಕೆರಿಯರ್ ಕಂಡುಕೊಂಡಿದ್ದು ಸೌತ್ ಆಫ್ರಿಕಾ ಪರ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಆಟಗಾರನಾಗಿ ತಾಹಿರ್ ಐಪಿಎಲ್​ನಲ್ಲಿ ಸಿಎಸ್​ಕೆ, ಡೆಲ್ಲಿ ತಂಡಗಳ ಪರ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಮೆಗಾ ಹರಾಜಿನಲ್ಲಿದ್ದು, 42 ವರ್ಷದ ತಾಹಿರ್ ಹರಾಜಾಗಲಿದ್ದಾರಾ ಕಾದು ನೋಡಬೇಕಿದೆ.

5 / 7
ಉಸ್ಮಾನ್ ಖ್ವಜಾ: ಪಾಕಿಸ್ತಾನ್ ಮೂಲದ ಉಸ್ಮಾನ್ ಖ್ವಾಜಾ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಆಟಗಾರ. ಈ ಹಿಂದೆ ರೈಸಿಂಗ್ ಪುಣೆ ಸೂಪರ್​ ಜೈಂಟ್ಸ್​ ಪರ ಆಡಿದ್ದ ಖ್ವಾಜಾ ಈ ಬಾರಿ ಮೆಗಾ ಹರಾಜಿನಲ್ಲಿ ಹೆಸರು ನೀಡಿದ್ದಾರೆ.

6 / 7
ಅಲಿ ಖಾನ್: ಅಮೆರಿಕ ತಂಡದ ಆಟಗಾರನಾಗಿರುವ ಅಲಿ ಖಾನ್ ಕೂಡ ಪಾಕ್ ಮೂಲದ ಕ್ರಿಕೆಟಿಗ. 2020ರಲ್ಲಿ ಕೆಕೆಆರ್​ ತಂಡದಲ್ಲಿ ಬದಲಿ ಆಟಗಾರನಾಗಿ ಅಲಿ ಖಾನ್ ಕಾಣಿಸಿಕೊಂಡಿದ್ದರು. ಇದಾಗ್ಯೂ ಗಾಯದ ಕಾರಣ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಇದೀಗ ಅಮೆರಿಕ ತಂಡದ ವೇಗಿ ಅಲಿ ಖಾನ್  ಐಪಿಎಲ್​ ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ.

7 / 7
TV9 Web
TV9 Web

TV9 Kannada

Read More
Follow Us
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ

ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ

ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ

ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ

ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?

ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು

ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?

ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್

ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ

ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು