ಸ್ಯಾಂಡಲ್ವುಡ್ನಲ್ಲಿ ಸಖತ್ ಬ್ಯುಸಿ ಆದ ಧರ್ಮಣ್ಣಗೆ ಹುಟ್ಟು ಹಬ್ಬದ ಸಂಭ್ರಮ
ಇಂದು (ಫೆಬ್ರವರಿ 8) ಧರ್ಮಣ್ಣ ಅವರ ಜನ್ಮದಿನ. ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರದ ಮೂಲಕ ಮಿಂಚುತ್ತಿರುವ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಾಕಷ್ಟು ಬ್ಯುಸಿ ಕಲಾವಿದ ಎನ್ನುವ ಖ್ಯಾತಿಯನ್ನು ಅವರು ಗಳಿಸಿಕೊಂಡಿದ್ದಾರೆ.
Updated on: Feb 08, 2022 | 9:07 AM

ಚಿತ್ರರಂಗ ಎಲ್ಲರನ್ನೂ ಕೈ ಹಿಡಿಯುವುದಿಲ್ಲ. ಇಲ್ಲಿ ಗೆಲ್ಲಬೇಕು ಎಂದರೆ ಸಾಕಷ್ಟು ತಾಳ್ಮೆ ಬೇಕು, ಹಲವು ವರ್ಷಗಳ ಶ್ರಮ ಬೇಕು. ಇಷ್ಟೆಲ್ಲ ಆದಮೇಲೂ ಗೆಲುವು ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಚಿತ್ರರಂಗದಲ್ಲಿ ಸಾಕಷ್ಟ ಶ್ರಮ ಹಾಕಿದ ಧರ್ಮಣ್ಣ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ.

ಇಂದು (ಫೆಬ್ರವರಿ 8) ಧರ್ಮಣ್ಣ ಅವರ ಜನ್ಮದಿನ. ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರದ ಮೂಲಕ ಮಿಂಚುತ್ತಿರುವ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಾಕಷ್ಟು ಬ್ಯುಸಿ ಕಲಾವಿದ ಎನ್ನುವ ಖ್ಯಾತಿಯನ್ನು ಅವರು ಗಳಿಸಿಕೊಂಡಿದ್ದಾರೆ.

ಧರ್ಮಣ್ಣ ನಟನೆಯ ಐದು ಚಿತ್ರಗಳು ರಿಲೀಸ್ಗೆ ರೆಡಿ ಇವೆ. ಕೆಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲಿದ್ದು, ಇನ್ನೂ ಕೆಲವರು ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಲಿದೆ. ‘ಮ್ಯಾನ್ ಆಫ್ ದಿ ಮ್ಯಾಚ್’, ‘ಶುಗರ್ ಲೆಸ್’, ‘ಬೈ ಟೂ ಲವ್’, ‘ಐ ಆ್ಯಮ್ ಪ್ರಗ್ನೆಂಟ್’, ‘ಹ್ಯಾಪಿಲಿ ಮ್ಯಾರೀಡ್’ ಚಿತ್ರಗಳು ರಿಲೀಸ್ಗೆ ರೆಡಿ ಇವೆ.

‘ಅಮರ ಪ್ರೇಮಿ ಅರುಣ್’ ಹಾಗೂ ‘ತ್ರೀವೇದಂ’ ಚಿತ್ರದ ಕೆಲಸಗಳು ನಡೆಯುತ್ತಿವೆ. ‘ಗರಡಿ’ ಹಾಗೂ ‘ಯದುವೀರ’ ಸಿನಿಮಾಗಳ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ.

ಧನಂಜಯ ನಟನೆಯ, ಸತ್ಯ ಪ್ರಕಾಶ್ ನಿರ್ದೇಶನದ ‘ಜಯನಗರ 4th ಬ್ಲಾಕ್’ ಕಿರುಚಿತ್ರದ ಮೂಲಕ ಧರ್ಮಣ್ಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ನಟಿಸಿದ ‘ರಾಮಾ ರಾಮಾ ರೇ’ ಚಿತ್ರ ಧರ್ಮಣ್ಣಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.

‘ಜಯನಗರ 4th ಬ್ಲಾಕ್’ ಕಿರುಚಿತ್ರದಿಂದ ಇಲ್ಲಿಯವರೆಗೆ ಸಾಕಷ್ಟು ಏಳುಬೀಳುಗಳನ್ನು ಕಂಡು ಈಗ ಧರ್ಮಣ್ಣ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಧರ್ಮಣ್ಣಗೆ ಸಾಕಷ್ಟು ಖುಷಿ ಇದೆ. ‘ಚಿತ್ರರಂಗದಲ್ಲಿ ಇಷ್ಟೊಂದು ಬ್ಯುಸಿ ಆಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ಈಗ ಈ ಹಂತಕ್ಕೆ ಬಂದು ನಿಂತಿದ್ದೇನೆ’ ಎಂದು ಸಂತಸ ಹೊರಹಾಕುತ್ತಾರೆ.



















