Pushpa: ಕಾರಿನಲ್ಲಿ ನಡೆವ ರಶ್ಮಿಕಾ-ಅಲ್ಲು ಅರ್ಜುನ್ ಇಂಟಿಮೇಟ್ ದೃಶ್ಯಕ್ಕೆ ಕತ್ತರಿ

‘ಪುಷ್ಪ’ ಸಿನಿಮಾದಲ್ಲಿ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಹಾಗೂ ಪುಷ್ಪರಾಜ್​ (ಅಲ್ಲು ಅರ್ಜುನ್)​ ನಡುವೆ ಆಗತಾನೇ ಪ್ರೀತಿ ಮೂಡಿರುತ್ತದೆ. ಇಬ್ಬರಿಗೂ ಕಾರಿನಲ್ಲಿ ಏಕಾಂತ ಸಿಕ್ಕಿರುತ್ತದೆ. ಈ ವೇಳೆ ಇಂಟಿಮೇಟ್​ ದೃಶ್ಯವೊಂದಿದೆ.

Pushpa: ಕಾರಿನಲ್ಲಿ ನಡೆವ ರಶ್ಮಿಕಾ-ಅಲ್ಲು ಅರ್ಜುನ್ ಇಂಟಿಮೇಟ್ ದೃಶ್ಯಕ್ಕೆ ಕತ್ತರಿ
ಅಲ್ಲು ಅರ್ಜುನ್​-ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 18, 2021 | 6:11 PM

‘ಪುಷ್ಪ’ ಸಿನಿಮಾಗೆ ಪಾಸಿಟಿವ್​ಗಿಂತ ನೆಗೆಟಿವ್​ ವಿಮರ್ಶೆಗಳೇ ಹೆಚ್ಚು ಕೇಳಿಬರುತ್ತಿವೆ. ಸಿನಿಮಾ ತುಂಬಾ ದೀರ್ಘವಾಯಿತು ಎಂದು ಒಂದಷ್ಟು ಜನರು ಹೇಳಿದರೆ, ಸಿನಿಮಾದ ಕಥೆಯಲ್ಲಿ ಗಟ್ಟಿತನ ಇಲ್ಲ ಎಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಮಧ್ಯೆ ಸಿನಿಮಾದಲ್ಲಿ ಬರುವ ದೃಶ್ಯವೊಂದು ಅಲ್ಲು ಅರ್ಜುನ್​ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ದೃಶ್ಯಕ್ಕೆ ಕತ್ತರಿ ಹಾಕೋಕೆ ಚಿತ್ರತಂಡ ಮುಂದಾಗಿದೆ. ಹಾಗಾದರೆ, ಆ ದೃಶ್ಯದಲ್ಲಿ ಏನಿತ್ತು? ಅದಕ್ಕೆ ಇಲ್ಲಿದೆ ಉತ್ತರ.

‘ಪುಷ್ಪ’ ಸಿನಿಮಾದಲ್ಲಿ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಹಾಗೂ ಪುಷ್ಪರಾಜ್​ (ಅಲ್ಲು ಅರ್ಜುನ್)​ ನಡುವೆ ಆಗತಾನೇ ಪ್ರೀತಿ ಮೂಡಿರುತ್ತದೆ. ಇಬ್ಬರಿಗೂ ಕಾರಿನಲ್ಲಿ ಏಕಾಂತ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಶ್ರೀವಲ್ಲಿ ಹೆಗಲಮೇಲೆ ಪುಷ್ಪರಾಜ್​​ ಕೈ ಇಟ್ಟುಕೊಂಡಿರುತ್ತಾನೆ. ಈ ವೇಳೆ ಕೆಲ ಇಂಟಿಮೇಟ್​ ದೃಶ್ಯಗಳಿವೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ದೃಶ್ಯ ಎನಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಈ ದೃಶ್ಯದಲ್ಲಿರುವ ಇಂಟಿಮೇಟ್​ನ ಆಳ ಗೊತ್ತಾಗುತ್ತದೆ. ಸಿನಿಮಾ ನೋಡಿದ ನಂತರದಲ್ಲಿ ಅಲ್ಲು ಅರ್ಜುನ್​ಗೆ ಈ ದೃಶ್ಯ ಇಷ್ಟವಾಗಿಲ್ಲ. ಫ್ಯಾಮಿಲಿ ಆಡಿಯನ್ಸ್​ ನೋಡುವ ದೃಶ್ಯ ಇದಲ್ಲ ಎನ್ನುವ ಕಾರಣಕ್ಕೆ ಅದನ್ನು ತೆಗೆದು ಹಾಕುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಪುಷ್ಪ ಕಲೆಕ್ಷನ್​ ಎಷ್ಟು?

‘ಪುಷ್ಪ’ ಆಂಧ್ರ ಪ್ರದೇಶದ ನಿಜಾಮ್​ ಭಾಗದಲ್ಲಿ11.44 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಉಳಿದಂತೆ ಕೃಷ್ಣ ಭಾಗದಲ್ಲಿ ಒಂದು ಕೋಟಿ ರೂಪಾಯಿ, ಗುಂಟೂರು ಭಾಗದಲ್ಲಿ 2.28 ಕೋಟಿ ರೂಪಾಯಿ ಸೇರಿದಂತೆ ಒಟ್ಟೂ 24.90 ಕೋಟಿಯನ್ನು ಈ ಚಿತ್ರ ಕಲೆಕ್ಷನ್ ಮಾಡಿದೆ. ‘ಪುಷ್ಪ’ ಮೊದಲ ದಿನ 30-35 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದರು. ಆದರೆ, ಹಾಗಾಗಿಲ್ಲ. ತಮಿಳುನಾಡಿನಲ್ಲೂ ಚಿತ್ರದ ಕಲೆಕ್ಷನ್​ ಇಳಿಕೆ ಆಗಿದೆ. ಮೊದಲ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಚಿತ್ರ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ ಮಾತ್ರ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪಕ್ಕಾ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಕ್ತ ಚಂದನದ ಕಳ್ಳ ಸಾಗಾಣಿಕೆಯ ಬಗ್ಗೆ ಹೇಳಲಾಗಿದೆ. ಅಲ್ಲು ಅರ್ಜುನ್ ಲುಕ್​ ಬಗ್ಗೆ, ಸಿನಿಮಾ ಮೇಕಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಸಿನಿಮಾದ ಅವಧಿ ದೀರ್ಘ ಎನಿಸುತ್ತದೆ. ಸಿನಿಮಾ ಬಗ್ಗೆ ನೆಗೆಟಿವ್​ ಮಾತನಾಡಿದವರೇ ಹೆಚ್ಚು. ಈ ಕಾರಣಕ್ಕೆ ಅನೇಕರು ಈ ಸಿನಿಮಾ ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಪುಷ್ಪ ಸಿನಿಮಾ 10 ಕೆಜಿಎಫ್​ಗೆ ಸಮ ಎಂದವರು ಈಗೆಲ್ಲಿ ಹೋದ್ರಿ?’; ಟ್ರೋಲ್​ ಆದ ಅಲ್ಲು ಅರ್ಜುನ್​ ಸಿನಿಮಾ

ತಗ್ಗಿದ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಕಲೆಕ್ಷನ್; ಬಾಕ್ಸ್​ ಆಫೀಸ್​ ಗಳಿಕೆ​ ಬಗ್ಗೆ ಇಲ್ಲಿದೆ ಮಾಹಿತಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್