
ಚಿಕ್ಕಬಳ್ಳಾಪುರ: ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಇಂದು ಅದ್ದೂರಿಯಾಗಿ ನಡೆದಿದ್ದು ಘಟಿಕೋತ್ಸವದಲ್ಲಿ ನಾಲ್ವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಅಣು ವಿಜ್ಞಾನಿ R.ಚಿದಂಬರಂ, ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಕಸ್ತೂರಿ ರಂಗನ್, ಪಂಡಿತ್ ಎಂ.ವೆಂಕಟೇಶ್ ಕುಮಾರ್ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಆಶ್ರಮದಲ್ಲಿ ನಾಲ್ವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಇನ್ನು ಘಟಿಕೋತ್ಸವದಲ್ಲಿ ಸಚಿವರಾದ ಸುಧಾಕರ್, ಎಂಟಿಬಿ ನಾಗರಾಜ್ ಭಾಗಿಯಾಗಿದ್ದರು.
ಶಿಕ್ಷೆಯಿಂದ ಬದಲಾವಣೆ ಆಗಲ್ಲ, ಬದುಕುವುದಕ್ಕಾಗಿ ಜೀವನ ವ್ಯರ್ಥ
ಸತ್ಯಸಾಯಿ ಮಾನವ ಅಭ್ಯುದಯ ವಿವಿ ಘಟಿಕೋತ್ಸವದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಿದ್ರು. ವಿಶ್ವದಲ್ಲಿ ಸ್ವೇಚ್ಛಾಚಾರ ಬಹುದೊಡ್ಡ ಸಮಸ್ಯೆ ಉಂಟುಮಾಡಿದೆ. ಭಾಷೆ ಹಾಗೂ ಪೂಜೆಗಳು ಬೇರೆಬೇರೆ ಆದ್ರೆ ಸಮಸ್ಯೆಗಳು ಆಗುತ್ತವೆ. ಶಿಕ್ಷೆಯಿಂದ ಬದಲಾವಣೆ ಆಗಲ್ಲ, ಬದುಕುವುದಕ್ಕಾಗಿ ಜೀವನ ವ್ಯರ್ಥ. ಪರೋಪಕಾರಕ್ಕಾಗಿ ಬದುಕುವುದೇ ಶ್ರೇಷ್ಠ. ವಿಜ್ಞಾನ, ಪರಂಪರೆಯನ್ನ ಒಟ್ಟಿಗೆ ಕೊಂಡೊಯ್ಯುವ ಕೆಲಸವಾಗಬೇಕು. ಕೆಲಸ ಮಾಡುವಾಗ ಯೋಚಿಸಿ ಮಾಡಬೇಕು. ಭೌತಿಕವಾಗಿ ದೇಶ ಬಲಿಷ್ಠಗೊಳಿಸುವಂತೆ, ಮಾನಸಿಕವಾಗಿಯೂ ಕಟ್ಟಬೇಕು. ಆಧ್ಯಾತ್ಮಿಕ ಭಾರತ ಮಾತ್ರವೇ ಪ್ರಪಂಚದ ಸರ್ವಶ್ರೇಷ್ಠ ಭಾರತ. ಭಾರತ ಹಿಂದೂ ರಾಷ್ಟ್ರವಾಗಿದ್ದು ಇಲ್ಲಿರುವ ದೇವರು ಒಂದೇ ಆಗಿದೆ. ಈ ವಿಚಾರದಲ್ಲಿ ಕೆಲವರು ಗೊಂದಲ ಮೂಡಿಸುತ್ತಾರೆ. ಸತ್ಯ ಕರುಣ ಪ್ರೇಮ ಭಾರತದ ಆತ್ಮವಾಗಬೇಕಿದೆ ಎಂದು ಭಾಗವತ್ ಭಾಷಣದಲ್ಲಿ ಹೇಳಿದ್ರು.
Published On - 8:12 pm, Wed, 13 July 22