ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ವಿದುರಾಶ್ವತ್ಥದ ಕಾಂಗ್ರೆಸ್ ವೇದಿಕೆಯಲ್ಲಿ ಭಾಷಣ ಮಾಡುವಾಗ ಅಜಾನ್ ಕೂಗಿದ ಹಿನ್ನಲೆ ಭಾಷಣ ಮೊಟಕುಗೊಳಿಸಿ ಮೌನಕ್ಕೆ ಶರಣಾದ ಘಟನೆ ನಡೆಯಿತು. ಅಜಾನ್ ಮುಗಿಯುವವರೆಗೂ ಸಿದ್ದರಾಮಯ್ಯ ಭಾಷಣ ಆರಂಭಿಸಲಿಲ್ಲ.
ಅಜಾನ್ ಮುಗಿದ ಬಳಿಕ ಭಾಷಣ ಮುಂದುವರೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಆರ್ಎಸ್ಎಸ್ ನ ಯಾವುದೆ ನಾಯಕರು ಭಾಗವಹಿಸಲಿಲ್ಲ. ವಿಶ್ವ ಹಿಂದೂ ಪರಿಷತ್ ನವರು ಹೋರಾಟ ಮಾಡಲಿಲ್ಲ. ಆರ್ಎಸ್ಎಸ್ ನವರು ಬ್ರಿಟಿಷರ ಜೊತೆ ಶಾಮೀಲು ಆಗಿದ್ರು. ಆದ್ರೆ ಈಗ ಬಿಜೆಪಿ, ಆರ್ಎಸ್ಎಸ್ ಈಗ ದೇಶ ಭಕ್ತಿ ಬಗ್ಗೆ ಪಾಠ ಹೇಳ್ತಿದ್ದಾರೆ. ಬಿಜೆಪಿ ಆರ್ಎಸ್ಎಸ್ ನವರು ಡೋಂಗಿಗಳು, ಇವರಿಗೆ ನಾಚಿಕೆ ಆಗಲ್ವಾ ಎಂದು ವಾಗ್ದಾಳಿ ನಡೆಸಿದ್ದಾರೆ.
ತ್ರಿವರ್ಣ ಧ್ವಜ ಈ ದೇಶದ ಹೆಮ್ಮೆ. ಆದ್ರೆ ಧ್ವಜವನ್ನೆ ವಿರೋಧಿಸಿದ್ದ ಬಿಜೆಪಿ ಈಗ ಹರ್ ಘರ್ ತಿರಂಗಾ ಎನ್ನುತ್ತಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದಿಯಾ? ಬರಿ ನಾಟಕವಾಡ್ತೀರಲ್ಲ ನಿಮಗೆ ನಾಚಿಕೆ ಆಗಲ್ವಾ? ದೇಶವನ್ನು ಆಳಲು ಬಿಜೆಪಿ ನಾಲಾಯಕ್ ಎಂದು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ ವಿತರಣೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸಬ್ ಕಾ ನಾಶ ಆಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ ವಿತರಣೆ ಮಾಡ್ತೇವೆ. ಬಹುಮತ ಇದೆ ಅನ್ನೊ ಕಾರಣಕ್ಕೆ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇದು 40ಪರ್ಸೆಂಟ್ ಕಮಿಷನ್ ಸರ್ಕಾರ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ದ್ವಿಮುಖ ನೀತಿ ಹೊಂದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇನ್ನೂ ದೇಶದಲ್ಲಿ ಅಸಮಾನತೆ ಹೋಗಿಲ್ಲ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ. ಬಿಜೆಪಿ, ಜೆಡಿಎಸ್ ನವರು ರಾಜ್ಯದಲ್ಲಿ ಒಂದೆ ಒಂದು ಆಣೆಕಟ್ಟು ಕಟ್ಟಿಲ್ಲ. ಬಹುತೇಕ ಅಣೆಕಟ್ಟುಗಳನ್ನು ಕಾಂಗ್ರೆಸ್ಸಿಗರು ಕಟ್ಟಿದ್ದಾರೆ. ಬಿಜೆಪಿಯವರು ದೇಶವನ್ನು ಹಾಳು ಮಾಡ್ತಿದ್ದಾರೆ. ಬಿಜೆಪಿ ಅಧಿಕಾರ ಕೊನೆಗಾನಿಸಬೇಕು. ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಕಿತ್ತು ಹಾಕ್ತೇವೆ ಅಂತ ಶಪಥ ಮಾಡಬೇಕು ಎಂದರು.
Published On - 5:34 pm, Thu, 11 August 22