Temple Tour: ಚಿನ್ನದ ಗೋಪುರದ ಮಧ್ಯೆ ಪ್ರತಿಷ್ಠಾಪನೆಯಾಗಿರುವ ಸಾಯಿಬಾಬಾ

Edited By:

Updated on: Nov 08, 2021 | 7:01 AM

ಚಿಕ್ಕಬಳ್ಳಾಪುರದ ಉದ್ಯಮಿ ಹಾಗು ರಾಜಕೀಯ ಮುಖಂಡ ಜಿಎಚ್ ನಾಗರಾಜ್ ಈ ಸಾಯಿಬಾಬಾ ದೇವಾಲಯವನ್ನು ನಿರ್ಮಿಸಿದ್ದಾರೆ.

ಸಾಯಿಬಾಬಾ ಅಂದಕೂಡಲೇ ನೆನಪಾಗುವುದು ಮಹಾರಾಷ್ಟ್ರದ ಶಿರಡಿ. ಆದರೆ ಎಲ್ಲರಿಗೂ ಶಿರಡಿಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಚಿಕ್ಕಬಳ್ಳಾಪುರದಲ್ಲಿ ಸಾಯಿಬಾಬಾನ ಅದ್ಭುತ ಆಲಯವೊಂದು ತಲೆ ಎತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮಕ್ಕೆ ಬಂದರೆ ಶಿರಡಿ ಸಾಯಿಯೇ ಇಲ್ಲಿ ನಿಮಗೆ ದರ್ಶನ ನೀಡುವ ಅನುಭವ ಆಗದೆ ಇರೋದಿಲ್ಲ. ಚಿಕ್ಕಬಳ್ಳಾಪುರದ ಉದ್ಯಮಿ ಹಾಗು ರಾಜಕೀಯ ಮುಖಂಡ ಜಿಎಚ್ ನಾಗರಾಜ್ ಈ ಸಾಯಿಬಾಬಾ ದೇವಾಲಯವನ್ನು ನಿರ್ಮಿಸಿದ್ದಾರೆ. ದೇಗುಲದ ಮತ್ತೊಂದು ವಿಶೇಷ ಏನು ಗೊತ್ತಾ? ಬರೋಬ್ಬರಿ ಎಂಟೂವರೆ ಕೆಜಿ ಚಿನ್ನದ ಲೇಪನ ಒಳಾಂಗಣ ದೇಗುಲಕ್ಕೆ ಆಗಿದೆ. ಹಾಗಾಗಿ ಚಿನ್ನದ ಲೋಕದಲ್ಲಿ ಬಾಬಾ ಕುಳಿತಿರುವ ಹಾಗೆ ಭಾಸವಾಗುತ್ತದೆ.