ಚಿಕ್ಕಬಳ್ಳಾಪುರದಲ್ಲಿ ಜೇಬುಗಳ್ಳನ ಕೈ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ರೈತರು!

TV9kannada Web Team

TV9kannada Web Team | Edited By: sandhya thejappa

Updated on: Nov 07, 2021 | 12:26 PM

ಕಳ್ಳ ಜೇಬಿನಿಂದ ಹಣ ಕದ್ದು ಬೇರೊಬ್ಬರ ಕೈಯಲ್ಲಿ ಕೊಟ್ಟು ಕಳುಹಿಸಿರುವ ಆರೋಪ ಕೇಳಿಬಂದಿದ್ದು, ರೈತರು ರೆಡ್ ಹ್ಯಾಂಡ್ ಆಗಿ ಜೇಬುಗಳ್ಳನನ್ನು ಹಿಡಿದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜೇಬುಗಳ್ಳನ ಕೈ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ರೈತರು!
ಕಳ್ಳನಿಗ ಹಿಗ್ಗಾಮುಗ್ಗಾ ಥಳಿಸಿದ ರೈತರು

ಚಿಕ್ಕಬಳ್ಳಾಪುರ: ರೈತನ ಜೇಬಿನಲ್ಲಿದ್ದ ಸುಮಾರು 50 ಸಾವಿರ ಹಣ ಎಗರಿಸಿ ಸಿಕ್ಕಿಬಿದ್ದ ಕಳ್ಳನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರೈತರು ಕಳ್ಳನ ಕೈ ಕಟ್ಟಿಹಾಕಿ ಥಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ನಡೆದಿದೆ. ನಂತರ ಚಿಂತಾಣಿ ಟೌನ್ ಠಾಣೆ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳ ಜೇಬಿನಿಂದ ಹಣ ಕದ್ದು ಬೇರೊಬ್ಬರ ಕೈಯಲ್ಲಿ ಕೊಟ್ಟು ಕಳುಹಿಸಿರುವ ಆರೋಪ ಕೇಳಿಬಂದಿದ್ದು, ರೈತರು ರೆಡ್ ಹ್ಯಾಂಡ್ ಆಗಿ ಜೇಬುಗಳ್ಳನನ್ನು ಹಿಡಿದಿದ್ದಾರೆ. ನಂತರ ಎರಡು ಕೈಗಳನ್ನು ಕಟ್ಟಿಹಾಕಿ ಮನಸ್ಸೋ ಇಚ್ಛೆಯಂತೆ ಥಳಿಸಿದ್ದಾರೆ.

ಪ್ರಿಯಕರನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಆನೆಮಡಗು ಗ್ರಾಮದಲ್ಲಿ ಕೊಲೆ ಯತ್ನ ನಡೆದಿದೆ. ಬಹಿರ್ದೆಸೆಗೆ ಕುಳಿತುಕೊಂಡಾಗ ಪ್ರಿಯಕರನ ಪತ್ನಿಗೆ ಮಹಿಳೆಯೊಬ್ಬಳು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾಳೆ. ಗಾಯಾಗೊಂಡಿರುವ ಮೋನಿಕಾ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಪಿ ಗಂಗೋತ್ರಿಯನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗಂಗರಾಜು ಎಂಬುವವರು ಗಂಗೋತ್ರಿಯನ್ನು ಪ್ರೀತಿಸಿ ಮೋನಿಕಾಳನ್ನು ಮದುವೆಯಾಗಿದ್ದರಂತೆ.

ತಾಜಾ ಸುದ್ದಿ

ಆಸ್ತಿಗಾಗಿ ದಾಯಾದಿಗಳ ಮಧ್ಯೆ ಗುಂಪು ಘರ್ಷಣೆ ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು, ಘರ್ಷಣೆ ವೇಳೆ ಓಮ್ನಿ ವ್ಯಾನ್ಗೆ ಬೆಂಕಿ, ಎರಡು ವಾಹನಗಳು ಜಖಂಗೊಂಡಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೇಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಳಿನಿ, ಶ್ರೀನಿವಾಸರೆಡ್ಡಿ ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಅಂಜಿ ಎಂಬುವರಿಗೆ ಗಾಯವಾಗಿದೆ. ಸದ್ಯ ಬೊಮ್ಮೇಪಲ್ಲಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ

Viral Video: ಯುವತಿ ಚರಂಡಿ ಬಳಿ ನಿಂತು ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಏನಾಯ್ತು ಅನ್ನೋದನ್ನಾ ವಿಡಿಯೊದಲ್ಲೇ ನೋಡಿ

Air Pollution: ದೀಪಾವಳಿ ಹಬ್ಬದ ಬಳಿಕ ಬೆಂಗಳೂರಿನಲ್ಲಿ ಕೊಂಚ ಮಟ್ಟಿಗೆ ಏರಿಕೆಯಾದ ವಾಯುಮಾಲಿನ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada