Air Pollution: ದೀಪಾವಳಿ ಹಬ್ಬದ ಬಳಿಕ ಬೆಂಗಳೂರಿನಲ್ಲಿ ಕೊಂಚ ಮಟ್ಟಿಗೆ ಏರಿಕೆಯಾದ ವಾಯುಮಾಲಿನ್ಯ
Air Pollution In Bengaluru: ದೆಹಲಿ ಬಳಿಕ ರಾಜ್ಯದಲ್ಲಿಯೂ ವಾಯುಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ನಗರದಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ದೀಪಾವಳಿ (Deepavali) ಹಬ್ಬದ ಬಳಿಕ ವಾಯುಮಾಲಿನ್ಯ (Air Pollution) ಕೊಂಚ ಮಟ್ಟಿಗೆ ಏರಿಕೆಯಾಗಿದೆ. ದೆಹಲಿ ಬಳಿಕ ರಾಜ್ಯದಲ್ಲಿಯೂ ವಾಯುಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ನಗರದಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ. ಕಳೆದ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ಲಾಕ್ಡೌನ್ ಹಿನ್ನೆಲೆ ಅತ್ಯಂತ ಕಡಿಮೆ ಮಟ್ಟದಲ್ಲಿ ಮಾಲಿನ್ಯದ ಪ್ರಮಾಣ ದಾಖಲಾಗಿತ್ತು. ಈ ವರ್ಷ ಅನ್ಲಾಕ್ ಆಗಿರುವ ಹಿನ್ನೆಲೆ ಹಬ್ಬದ ಸಮಯದಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ.
2020ರಲ್ಲಿ ವಾಯು ಗುಣಮಟ್ಟ ಸೂಚ್ಯಂಕ (Air Quality Index) 55 ಇತ್ತು. 2021ರಲ್ಲಿ ವಾಯು ಗುಣಮಟ್ಟ ಸೂಚ್ಯಂಕ 67 ಇದ್ದು, ಗುಣಮಟ್ಟ ಕುಸಿದಿದೆ ಎಂಬ ಮಾಹಿತಿ ತಿಳಿದುಬಂದಿದೆ.
2020 ಮತ್ತು 2021ರ ವಾಯು ಗುಣಮಟ್ಟ ಸೂಚ್ಯಂಕ ಸಿಟಿ ರೈಲ್ವೆ ನಿಲ್ದಾಣ 2020- 42 AQI 2021- 112 AQI ಬಶವೇಶ್ವರನಗರ 2020- 21 AQI 2021- 57 AQI ಜಯನಗರ 5ನೇ ಹಂತ 2020- 72 AQI 2021- 74 AQI ಕವಿಕಾ ಮೈಸೂರು ರಸ್ತೆ 2020- 66 AQI 2021- 87 AQI ಸೆಂಟ್ರಲ್ ಸಿಲ್ಕ್ ಬೋರ್ಡ್ 2020- 52 AQI 2021- 54 AQI
ದೆಹಲಿಯಲ್ಲಿ ವಾಯುಮಾಲಿನ್ಯ ದೀಪಾವಳಿಯ ಎರಡು ದಿನಗಳ ನಂತರ ದೆಹಲಿಯ ಗಾಳಿಯ ಗುಣಮಟ್ಟವು “ಗಂಭೀರ” ವಿಭಾಗದಲ್ಲಿ ಮುಂದುವರಿದಿದೆ. ರಾಷ್ಟ್ರವ್ಯಾಪಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಭಾರತದಾದ್ಯಂತ ಅನೇಕ ನಗರಗಳಲ್ಲೂ ಸಹ ಕಳಪೆ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಏಳು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಸ್ಥಿತಿಯಲ್ಲಿದೆ. ಹರಿಯಾಣದ ಏಳು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಸ್ಥಿತಿಯಲ್ಲಿದೆ. ಶನಿವಾರ ಬೆಳಿಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (CPCB) ನೀಡಿದ AQI ಮಾಲಿನ್ಯ ಮಾಹಿತಿಯ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ ಪ್ರಸ್ತುತ ದೇಶದ ಎಲ್ಲಾ ಪ್ರಮುಖ ನಗರಗಳಿಗಿಂತ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ನಗರವಿದೆ.
ಇದನ್ನೂ ಓದಿ
Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು
ವಾಯು ಮಾಲಿನ್ಯ ನಿಯಂತ್ರಿಸಲು ₹ 18 ಕೋಟಿಗೂ ಹೆಚ್ಚು ಹಣವನ್ನು ಕೇಂದ್ರದಿಂದ ಪಡೆಯಲಿದೆ ದೆಹಲಿ
Published On - 10:10 am, Sun, 7 November 21