ಚಿಕ್ಕಬಳ್ಳಾಫುರ, ಆ.11: ನಂದಿಹಿಲ್ಸ್ ರೋಪ್ ವೇ(Nandi Hills Rope Way) ಬಗ್ಗೆ ನಾನು ಈಗ ಏನು ಹೇಳುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್(HK Patil) ಹೇಳಿದ್ದಾರೆ. ಇಂದು(ಆ.11) ನಂದಿಗಿರಿಧಾಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ ನಂದಿಹಿಲ್ಸ್ ರೋಪ್ ವೇ ಬಗ್ಗೆ ಬಹಳ ಮಾತುಕತೆ ಆಗಿದ್ದವು. ರೋಪ್ ವೇ ಕಾಮಗಾರಿಯ ಬಗ್ಗೆ ದೊಡ್ಡ ಹಣದ ಸಂಖ್ಯೆಗಳು ಬಂದವು. ಆದ್ರೆ, ಯಾವುದೇ ಕಾಮಗಾರಿ ಆಗಿಲ್ಲ. ಮುಂದೆ ಏನು ಆಗಬೇಕೋ ಅದರ ಕಡೆ ಗಮನ ಕೊಡುತ್ತೇನೆ ಎಂದರು. ಈ ಮೂಲಕ ನಂದಿಹಿಲ್ಸ್ ರೋಪ್ ವೇ ಕಾಮಗಾರಿಗೆ ರಾಜ್ಯ ಸರ್ಕಾರ ಎಳ್ಳುನೀರು ಬೀಡುತ್ತಾ ಎಂಬ ಪ್ರಶ್ನೆ ಮೂಡಿದೆ.
ರೋಪ್ ವೇ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬರೊಬ್ಬರಿ 94 ಕೋಟಿ ರೂಪಾಯಿ ವೆಚ್ಚದಲ್ಲಿ ನಂದಿಹಿಲ್ಸ್ ರೋಪ್ ವೇ ನಿರ್ಮಾಣ ಮಾಡಲು 2023 ಮಾರ್ಚ್ 27 ರಂದು ಶಂಕು ಸ್ಥಾಪನೆ ಮಾಡಿದ್ದರು. ಜೊತೆಗೆ ಇದೇ ವೇಳೆ ಜಿಲ್ಲೆಯಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡವನ್ನ ಉದ್ಘಾಟಿಸಿದ್ದರು. ಅಂದು ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಸಿಎಂ ಗೆ ಸಾಥ್ ನೀಡಿದ್ದರು.
ಇದನ್ನೂ ಓದಿ: Nandi Hills: ಪ್ರವಾಸಿಗರಿಗೆ ಗುಡ್ ನ್ಯೂಸ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ
ಪ್ರವಾಸಿತಾಣ ನಂದಿಗಿರಿಧಾಮದ ಬುಡದಲ್ಲಿ ರಾಜ್ಯ ಸರ್ಕಾರ 7 ಎಕರೆ ಜಮೀನು ಮಂಜೂರು ಮಾಡಿದೆ. 50 ಲಕ್ಷ ರೂಪಾಯಿ ಹಣ ಸಹ ಮಂಜೂರು ಮಾಡಿದೆ. ಜಮೀನಿನ ಸುತ್ತಲು ತಂತಿ ಬೆಲೆ ಹಾಕಿ ಬೀಡಲಾಗಿದೆ. ಅರಣ್ಯ ಇಲಾಖೆಯಿಂದ ಎನ್.ಒ.ಸಿ ನೀಡಬೇಕಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟನಲ್ಲಿ ತಡೆಯಾಜ್ಞೆ ಇದೆ. ಇದ್ರಿಂದ ಕಾಮಗಾರಿ ಆರಂಭವಾಗುವುದು ಸದ್ಯ ಅನುಮಾನ ಇದೆ.
ಹೌದು, ವಿಶ್ವವಿಖ್ಯಾತ ಪ್ರವಾಸಿ ತಾಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ರೋಪ್ ವೇ ನಿರ್ಮಾಣದ ಕನಸನ್ನು ಅಂದೇ ದಿವಂಗತ ನಟ ಶಂಕರ್ನಾಗ್ ಕಂಡಿದ್ದರು. ಆದರೆ, ಅಂತಿಮ ರೂಪಕ್ಕೆ ಬಂದಿರಲಿಲ್ಲವಾಗಿತ್ತು. ಅಂದು ರಾಜ್ಯ ಸರ್ಕಾರ 94 ಕೋಟಿ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗಿರಿಧಾಮಕ್ಕೆ ಆಗಮಿಸಿ ಶಂಕು ಸ್ಥಾಪನೆ ಮಾಡಿದ್ದರು. ಇದರಿಂದ ಶಂಕರ್ನಾಗ್ ಕನಸಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಾಗಿತ್ತು. ಆದರೆ, ಇದೀಗ ಸರ್ಕಾರ ಬದಲಾಗಿದ್ದು, ಈ ಕಾಮಗಾರಿ ಬಗ್ಗೆ ತಲೆಕೆಡಸಿಕೊಂಡಂತೆ ಕಾಣುತ್ತಿಲ್ಲ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 11 August 23