- Kannada News Karnataka Chikkaballapur chikkaballapur tourist attractions Nandi Hills visiting timings change
Nandi Hills: ಪ್ರವಾಸಿಗರಿಗೆ ಗುಡ್ ನ್ಯೂಸ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ
ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.
Updated on:Nov 20, 2022 | 11:00 AM

chikkaballapur tourist attractions Nandi Hills visiting timings change

ಆದ್ರೆ ಇನ್ಮುಂದೆ ಇಂಥಾ ಹೆಣಗಾಟ ಸ್ವಲ್ಪ ಕಡಿಮೆ ಆಗುತ್ತೆ. ಯಾಕಂದ್ರೆ ಇಷ್ಟು ದಿನ ಗಿರಿಧಾಮ ಬೆಳಗ್ಗೆ 6 ಗಂಟೆಗೆ ಓಪನ್ ಆಗ್ತಿತ್ತು. ಈಗ ನೂತನ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನೂತನ ನಿರ್ವಹಣಾ ಸಮಿತಿ ಹೊಸ ನಿರ್ಧಾರ ಕೈಗೊಂಡಿದೆ. 6 ಗಂಟೆ ಬದಲು ಬೆಳಿಗ್ಗೆ 5-30ಕ್ಕೆ ಗಿರಿಧಾಮ ಓಪನ್ ಮಾಡಲು ಆದೇಶಿಸಿದೆ.

ನಂದಿ ಹಿಲ್ಸ್ ಅಂದ್ರೆ ತಂಪಾದ ವಾತಾವರಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ಹೂಗಳ ರಾಶಿ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಅದ್ರಲ್ಲೂ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತದ ವಿಹಂಗಮ ನೋಟ ನೋಡುವುದೇ ಚೆಂದ.

ಹೀಗೆ ಸಾವಿರಾರು ಜನ ಪ್ರವಾಸಿಗರು ಬೆಳ್ಳಂಬೆಳಗ್ಗೆ 4 ಗಂಟೆಗೆ ಗಿರಿಧಾಮಕ್ಕೆ ಬಂದ್ರೂ ಗಿರಿಧಾಮ ಬಂದ್ ಆಗಿರುತ್ತಿತ್ತು. ಆದ್ರೆ ಇನ್ಮುಂದೆ ಬೆಳಗ್ಗೆ 6ರ ಬದಲು 5-30ಕ್ಕೆ ಓಪನ್ ಮಾಡೋದ್ರಿಂದ ಅನುಕೂಲ ಆಗಲಿದೆ. ಹೀಗಾಗಿ ಪ್ರವಾಸಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಜನ ಪ್ರವಾಸಿಗರು ಬಂದ್ರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ವಲ್ಪ ಒತ್ತು ಕೊಟ್ರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ.
Published On - 11:00 am, Sun, 20 November 22