ಚಿಕ್ಕಬಳ್ಳಾಪುರ: ದೇಶಕ್ಕೆ ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿ (BJP) ಏನು ಕೊಡುಗೆ ಕೊಟ್ಟಿದೆ? ದೇಶಕ್ಕೆ ಕಾಂಗ್ರೆಸ್ (Congress) ಏನು ಕೊಡುಗೆ ಕೊಟ್ಟಿದೆ ಎಂದು ಹೇಳುತ್ತೇನೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ (VS Ugrappa) ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ RSS ಮೇಲೆ ಟೀಕೆ ಕಿಡಿಕಾರಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ವಿ.ಎಸ್.ಉಗ್ರಪ್ಪ ದೇಶಕ್ಕೆ RSS ಮತ್ತು ಬಿಜೆಪಿ ಕೊಡುಗೆ ಏನು ಎಂಬುದರ ಕುರಿತು ವಿಧಾನಸೌಧದ ಮುಂದೆ ಚರ್ಚೆಗೆ ಬನ್ನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಇದನ್ನು ಓದಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಿದ ಮಂಗಳೂರು ವಿವಿ
ಬಿಜೆಪಿಯವರ ಯೋಗ್ಯತೆಗೆ ಬೆಲೆ ನಿಯಂತ್ರಣ ಮಾಡಲು ಆಗುತ್ತಿಲ್ಲ. ಬಿಜೆಪಿ ತನ್ನ ಹುಳುಕನ್ನ ಮುಚ್ಚಿಕೊಳ್ಳಲು ಕೋಮು ಸಂಘರ್ಷಕ್ಕೆ ಇಳಿದಿದೆ. ಬಿಜೆಪಿ ಪಕ್ಷದವರು ಆಧುನಿಕ ಭಷ್ಮಾಸುರರು ಎಂದು ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ ಎಸ್ ಅಥವಾ ಭಾರತೀಯರು ಅಂದ್ರೆ ಪುರೊಹಿತ ಶಾಹಿಗಳು ಮಾತ್ರನಾ ಅಂಥ ಸ್ಪಷ್ಟಪಡಿಸಲಿ.ದೇಶದಲ್ಲಿ ಆರ್ ಎಸ್ ಎಸ್ ನ 42 ಸಂಘಟನೆಗಳು ಇವೆ. 3500 ಪ್ರಚಾರಕರು ದೇಶದಲ್ಲಿ ಇದ್ದಾರೆ. ರಾಜ್ಯದಲ್ಲಿ 100 ಜನ ಪ್ರಚಾರಕರು ಇದ್ದಾರೆ. 3500 ಜನ ಪ್ರಚಾರಕರಲ್ಲಿ ಎಷ್ಟು ಜನ ದಲಿತರು ಲಿಂಗಾಯತರು ಒಕ್ಕಲಿಗರು ಸೇರಿದಂತೆ ಇನ್ನೀತರ ಜಾತಿಗಳವರು ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಮಂಡ್ಯ: ಸಿದ್ದರಾಮಯ್ಯಗೆ RSS ಕಾರ್ಯಕರ್ತರಿಂದ ಚಡ್ಡಿ ಪಾರ್ಸಲ್
ಹಿಂದುತ್ವ ಅಂದ್ರೆ ಕೇವಲ ನಾಲ್ಕು ಪರ್ಷೆಂಟ್ ಇರುವ ಒಂದು ಸಮುದಾಯದವರು ಅಲ್ಲ. ಆರ್.ಎಸ್. ಆಸ್ ನ ಅಂಗ ಸಂಸ್ಥೆಗಳಲ್ಲಿ ಒಂದು ಸಮುದಾಯಕ್ಕೆ ಸೇರಿದವರೆ ಪ್ರಮುಖರಾಗಿದ್ದಾರೆ. ಆರ್.ಎಸ್.ಎಸ್ ನ ಕಚೇರಿಗಳಲ್ಲಿ ಇದುವರೆಗೂ ರಾಷ್ಟ್ರಧ್ವಜ ಹಾರಿಸಿಲ್ಲ. ಆರ್.ಎಸ್.ಎಸ್ ಕಚೇರಿಗಳಲ್ಲಿ ಗಾಂಧೀಜಿಯವರ ಪೋಟೊ ಹಾಕಿಲ್ಲ. ಸ್ವಾಮಿ ವಿವೇಕಾನಂದರಿಗಿಂತ ಆರ್.ಎಸ್.ಎಸ್ ನವರು ದೊಡ್ಡ ಚಿಂತಕರು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.