ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಿದ ಮಂಗಳೂರು ವಿವಿ
ಮಂಗಳೂರು ವಿವಿ ಕಾಲೇಜಿಗೆ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಬಂದ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರು: ಮಂಗಳೂರು ವಿವಿ ಕಾಲೇಜಿಗೆ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಬಂದ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾಲೇಜಿನ ಶಿಸ್ತು ಉಲ್ಲಂಘಿಸಿ, ಘನತೆಗೆ ಧಕ್ಕೆ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ. ಗೌಸಿಯಾ ಸೇರಿದಂತೆ ಕೆಲ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಬಳಿಕವೂ ನಿಯಮ ಮೀರಿದರೆ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಗಡುವು ನೀಡಿದ ಹಿನ್ನೆಲೆ ಎಚ್ಚರಿಕೆ ನೋಟೀಸ್ ನೀಡಲಾಗಿದೆ. ಸುದ್ದಿಗೋಷ್ಟಿಯಲ್ಲಿ ಕಾಲೇಜು ಆಡಳಿತಕ್ಕೆ ವಿದ್ಯಾರ್ಥಿನಿಯರು ಎರಡು ದಿನ ಗಡುವು ನೀಡಿದ್ದರು.
ಇದನ್ನು ಓದಿ: ಮಂಗಳೂರು ನ್ಯಾಯಾಲಯದಲ್ಲಿ ಇಂದು ಮಳಲಿ ಮಸೀದಿ ವಿವಾದ ವಿಚಾರಣೆ, ತೀರ್ಪು ಸಾಧ್ಯತೆ
ಮಂಗಳೂರು ವಿವಿ ಘಟಕದ ಕಾಲೇಜಿನಲ್ಲಿ ನಿರ್ಬಂಧದ ನಡುವೆಯು ಜೂನ್ 4 ರಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ತೆರಳಿದ್ದರು. ಆದರೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ತರಗತಿಗೆ ಹೋಗದಂತೆ ಪ್ರಾಂಶುಪಾಲೆ ಡಾ.ಅನುಸೂಯ ರೈ ತಡೆದಿದ್ದಾರೆ. ಸೋಮವಾರ (ಮೇ 30) ರಂದು ಜಿಲ್ಲಾಧಿಕಾರಿ ಜತೆ ಸಭೆ ನಡೆಸಿದ ಬಳಿಕ ಕಾಲೇಜಿಗೆ ಬಂದಿರಲಿಲ್ಲ. ಮತ್ತೆ ಜೂನ್ 4 ರಂದು 16 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು.
ಇದೇ ಸಂಬಂಧವಾಗಿ ವಿದ್ಯಾರ್ಥಿನಿಯರುಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿದ್ದರು. ವಿದ್ಯಾರ್ಥಿನಿಯರ ಪರವಾಗಿ ಗೌಸಿಯಾ ಹೆಸರಿನ ವಿದ್ಯಾರ್ಥಿನಿ ಮಾತಾಡಿದರು. ಅವರು ಹೇಳುವ ಪ್ರಕಾರ ಕಾಲೇಜು ಹಿಜಾಬ್ ಕ್ಯಾಂಪಸ್ ನಲ್ಲಿ ಅವರಿಗೆ ಹಿಜಾಬ್ ಧರಿಸಲು ಕೆಲವು ಉಪನ್ಯಾಸಕರು ಅನುಮತಿ ನೀಡುತ್ತಿದ್ದಾರೆ ಕೆಲವರು ನೀಡುತ್ತಿಲ್ಲ. ತರಗತಿಗಳಲ್ಲಿ ಕೂರಲು ಅನುಮತಿ ನೀಡದ ಸಂದರ್ಭದಲ್ಲಿ ಅವರು ಲೈಬ್ರರಿ ಇಲ್ಲವೇ ಲೇಡೀಸ್ ರೂಮಿಗೆ ಹೋಗಿ ಕೂರುತ್ತಾರಂತೆ.
ಇದನ್ನು ಓದಿ: ಟ್ಯಾಟೂ ಹಾಕಿಸಿಕೊಂಡ ಬಳಿಕ ಚರ್ಮದ ಆರೈಕೆ ಹೇಗಿರಬೇಕು?
ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕಾಲೇಜಿಗೆ ನಿರ್ದೇಶನ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದಾಗ ಅವರು ಎರಡು ದಿನಗಳ ನಂತರ ಇದು ಕಾಲೇಜಿನ ಸಿಂಡಿಕೇಟ್ ತೆಗೆದುಕೊಂಡಿರುವ ನಿರ್ಣಯವಾಗಿರುವುದರಿಂದ ತಾವು ಅದನ್ನು ಪ್ರಶ್ನಿಸಲಾಗದು ಅಂತ ಹೇಳಿದ್ದಾರಂತೆ.
ಆಮೇಲೆ ಅವರು ಕಾಲೇಜಿನ ಪತ್ರಿ ಹೆಚ್ ಒ ಡಿ ಮನವಿಗಳನ್ನು ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ಮನವಿಗಳನ್ನು ಸ್ವೀಕರಿಸಿದ್ದಾರೆ ಇನ್ನೂ ಕೆಲವರು ಸ್ವೀಕರಿಸಿಲ್ಲ. ಕಾಲೇಜಿನ ಪ್ರಿನ್ಸಿಪಾಲರು ಮಧ್ಯಪ್ರವೇಶಿಸಿ ಮನವಿಯನ್ನು ಯಾರೂ ಸ್ವೀಕರಿಸಕೂಡದು ಅಂತ ಹೇಳಿದರಂತೆ. ಹಿಜಾಬ್ ಧರಿಸದೆ ಬರೋದಾದ್ರೆ ಬನ್ನಿ ಇಲ್ಲದಿದ್ದರೆ ಕ್ಯಾಂಪಸ್ ಪ್ರವೇಶಿಸುವ ಪ್ರಯತ್ನ ಮಾಡಬೇಡಿ ಅಂತ ಪ್ರಾಂಶುಪಾಲರು ಹೇಳಿದ್ದಾರೆ ಅಂತ ಗೌಸಿಯಾ ಹೇಳಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.