ಮಳಲಿ ಮಸೀದಿ ವಿವಾದ; ಅರ್ಜಿ ವಿಚಾರಣೆ ಜೂನ್ 9ಕ್ಕೆ ಮುಂದೂಡಿದ ಮಂಗಳೂರು ಕೋರ್ಟ್
ಮಳಲಿ ಮಸೀದಿ ವಿವಾದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಮತ್ತೆ ಜೂನ್ 9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಮತ್ತೆ ಜೂನ್ 9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಮಳಲಿ ಮಸೀದಿ ಜಾಗದ ವಿವಾದ ಕೋರ್ಟ್ ನಲ್ಲಿ ನಿತ್ಯ ಒಂದೊಂದು ಹಂತ ತಲುಪುತ್ತಿದೆ. ಇಂದು ಮಂಗಳೂರಿನ ಕೋರ್ಟ್ ನಲ್ಲಿ ಏನೇನಾಯ್ತು. ಕೋರ್ಟ್ನಲ್ಲಿ ನಡೆದ ವಾದ ವಿವಾದದ ಸಂಪೂರ್ಣ ವರದಿ ಇಲ್ಲಿದೆ.
ಮಂಗಳೂರಿನ ಮಳಲಿ ಮಸೀದಿ ವಿವಾದ ವಿಚಾರ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನೆಡೆಯುತ್ತಿದೆ. ವಿಎಚ್ಪಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಅಂತಾ ಮಸೀದಿ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಇಂದು ಕೂಡ ಅರ್ಜಿ ವಿಚಾರಣೆ ನಡೆಯಿತು. ಅರ್ಜಿ ವಿಚಾರಣೆ ನಡೆಸಿ ಇಂದು ಆದೇಶದ ನಿರೀಕ್ಷೆಯಲ್ಲಿದ್ದವರಿಗೆ ನ್ಯಾಯಾಲಯ ಮತ್ತೆ ವಿಚಾರಣೆಗೆ ಅವಾಕಾಶ ನೀಡಿ ಅಚ್ಚರಿಯನ್ನುಂಟು ಮಾಡಿದೆ. ಇದನ್ನೂ ಓದಿ: ಅಥಣಿ: ಮಕ್ಕಳು ಓದುವ ಶಾಲೆಗೆ ಮೇಲ್ಛಾವಣಿಯಾಗಿ ಹೊದಿಸಿದ್ದ ಶೀಟುಗಳು ಬಿರುಗಾಳಿ ಮತ್ತು ಮಳೆಗೆ ಹಾರಿಹೋಗಿವೆ
ಕಳೆದ ವಿಚಾರಣೆಯಲ್ಲಿ ಏನಾಗಿತ್ತು? -ಮಂಗಳೂರು ಕೋರ್ಟ್ ನಲ್ಲಿ ವಿಎಚ್ ಪಿ ವರ್ಸಸ್ ಮಳಲಿ ಮಸೀದಿ ಫೈಟ್ ವಿಚಾರ ಸಂಬಂಧ ವಿಎಚ್ ಪಿ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ಸಲ್ಲಿಸಿರೋ ಅರ್ಜಿಗಳನ್ನು ಮೇ.31 ಮತ್ತು ಜೂ.1ರಂದು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಎಚ್ ಪಿ ವಕೀಲ ಚಿದಾನಂದ ಕೆದಿಲಾಯ ಹಾಗೂ ಮಸೀದಿ ವಕೀಲ ಎಂ.ಪಿ.ಶೆಣೈ ಅವರ ವಾದ ಆಲಿಸಿತ್ತು. ಮಸೀದಿ ಕಮಿಟಿ ವಿಎಚ್ ಪಿ ಅರ್ಜಿ ತಿರಸ್ಕರಿಸಿ ನವೀಕರಣ ಕಾಮಗಾರಿ ತಡೆ ತೆರವಿಗೆ ಮನವಿ ಮಾಡಿತ್ತು. ಇನ್ನು ವಿಎಚ್ಪಿ, ಮಳಲಿ ಮಸೀದಿ ಸರ್ವೆಗೆ ಕೋರ್ಟ್ ಕಮಿಷನರ್ ನೇಮಿಸುವಂತೆ ಮನವಿ ಮಾಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇಂದು ಕೋರ್ಟ್ನಲ್ಲಿ ಏನೇನಾಯ್ತು? ಇಂದು ಮಳಲಿ ಮಸೀದಿ ವಿವಾದ ಸಂಬಂಧ ಮತ್ತೆ ವಿಚಾರಣೆಗೆ ಅವಕಾಶ ನೀಡಲಾಗಿದೆ. ಆದೇಶದ ಬದಲು ಮಂಗಳೂರು ಕೋರ್ಟ್ ನಲ್ಲಿ ಮತ್ತೆ ವಿಚಾರಣೆ ಆರಂಭ ಮಾಡಿದೆ. ವಾದ ಮಾಡಿದ ಮಳಲಿ ಮಸೀದಿ ಪರ ವಕೀಲ ಎಂ.ಪಿ.ಶೆಣೈ ವಕ್ಛ್ ಕಾಯ್ದೆಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ವಕ್ಫ್ ಕಾಯ್ದೆಗಳ ಪ್ರಮುಖ ಪುಟಗಳನ್ನು ಓದಿ ಕೋರ್ಟ್ಗೆ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಬೇರೆ ರಾಜ್ಯದ ಹೈಕೋರ್ಟ್ ತೀರ್ಪುಗಳ ಬಗ್ಗೆ ಉಲ್ಲೇಖ ಮಾಡಿ ಹಲವು ಹೈ ಕೋರ್ಟ್ ಗಳ ತೀರ್ಪುಗಳನ್ನ ಓದಿದ್ದಾರೆ. ಕೋರ್ಟ್, ಮಸೀದಿ ಪರ ವಕೀಲ ಎಂ.ಪಿ.ಶೆಣೈ ವಾದ ಆಲಿಸಿದೆ. ವಿಎಚ್ಪಿ ಅರ್ಜಿ ತಿರಸ್ಕರಿಸಿ ನವೀಕರಣ ಕಾಮಗಾರಿ ತಡೆ ತೆರವಿಗೆ ಮಸೀದಿ ಕಮಿಟಿ ಮನವಿ ಮಾಡಿದೆ. ಮಳಲಿ ಮಸೀದಿ ಸರ್ವೆಗೆ ಕೋರ್ಟ್ ಕಮಿಷನರ್ ನೇಮಿಸುವಂತೆ ವಿಎಚ್ ಪಿ ಕೂಡ ಮನವಿ ಮಾಡಿದೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ ಬರ್ತ್ಡೇ ಗಿಫ್ಟ್; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟೀಸರ್ ರಿಲೀಸ್
ವಾದ ಆಲಿಸಿದ ಕೋರ್ಟ್ ಜೂನ್ 9 ಕ್ಕೆ ವಿಚಾರಣೆ ಮುಂದೂಡಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆದು, ಮಳಲಿ ಮಸೀದಿ ಪರ ವಕೀಲ ಎಂ.ಪಿ.ಶೆಣೈ ವಾದ ಆಲಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ. ಜೂನ್ 9 ರಂದು ವಿಎಚ್ ಪಿ ಪರ ವಕೀಲರ ವಾದ ಮಂಡನೆಗೆ ಸೂಚನೆ ನೀಡಿದೆ. ಇನ್ನು ಜೂನ್ 9 ರತ್ತ ಎಲ್ಲರ ಚಿತ್ತ ನೆಟ್ಟಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು
Published On - 10:30 pm, Mon, 6 June 22