AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತ್ ಶೆಟ್ಟಿಗೆ ಬರ್ತ್​ಡೇ ಗಿಫ್ಟ್​; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟೀಸರ್ ರಿಲೀಸ್

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾಗೆ ಹೇಮಂತ್ ರಾವ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದರು. ಈಗ ಇಬ್ಬರೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

ರಕ್ಷಿತ್ ಶೆಟ್ಟಿಗೆ ಬರ್ತ್​ಡೇ ಗಿಫ್ಟ್​; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟೀಸರ್ ರಿಲೀಸ್
ರಕ್ಷಿತ್-ರುಕ್ಮಿಣಿ
TV9 Web
| Edited By: |

Updated on: Jun 06, 2022 | 9:35 PM

Share

ರಕ್ಷಿತ್ ಶೆಟ್ಟಿ ಅವರು (Rakshit Shetty) ಇಂದು (ಜೂನ್​ 6) ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಯಿಂದ ಶುಭಾಶಯಗಳು ಬಂದಿವೆ. ರಕ್ಷಿತ್​ಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಶುಭಾಶಯ (Rakshit Shetty Birthday) ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ‘777 ಚಾರ್ಲಿ’ ಸಿನಿಮಾ (777 Charlie Movie) ರಿಲೀಸ್ ಆಗುತ್ತಿದೆ. ಹೀಗಾಗಿ, ರಕ್ಷಿತ್ ಬರ್ತ್​ಡೇ ಸಂಭ್ರಮ ಜೋರಾಗಿದೆ. ರಕ್ಷಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್ ರಿಲೀಸ್ ಆದ ಎರಡು ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್​ ಸಿಕ್ಕಿದೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾಗೆ ಹೇಮಂತ್ ರಾವ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದರು. ಈಗ ಇಬ್ಬರೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರೊಮ್ಯಾಂಟಿಕ್ ಚಿತ್ರ ಇರಬಹುದು ಎಂಬುದು ಎಲ್ಲರ ಊಹೆ ಆಗಿತ್ತು. ಆದರೆ, ಈ ಸಿನಿಮಾದಲ್ಲಿ ಬೇರೆ ಏನೋ ಇದೆ ಎಂಬುದನ್ನು ಚಿತ್ರತಂಡ ಇತ್ತೀಚೆಗೆ ರಿವೀಲ್ ಮಾಡುತ್ತಿದೆ. ಈ ಮೊದಲು ರಕ್ಷಿತ್ ಲವರ್ ಬಾಯ್ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಯಿತು. ಅದರಲ್ಲಿ ಅವರು ದೇಹದ ತೂಕ ಹೆಚ್ಚಿಸಿಕೊಂಡು ಭಿನ್ನವಾಗಿ ಕಾಣಿಸಿಕೊಂಡಿದ್ದರು. ಅವರ ಲುಖ್ ಸಖತ್ ರಗಡ್ ಆಗಿತ್ತು.

ಇದನ್ನೂ ಓದಿ
Image
ರಕ್ಷಿತ್ ರುದ್ರಾಕ್ಷಿ ಮಾಲೆ ಧರಿಸುವುದು ಏಕೆ? ಇಲ್ಲಿದೆ ಉತ್ತರ
Image
ಸ್ಟಾರ್​ ನಟನ ರೀತಿ ತಲೆ ಎತ್ತಿದೆ ಚಾರ್ಲಿ ಶ್ವಾನದ ಕಟೌಟ್​; ರಕ್ಷಿತ್​ ಶೆಟ್ಟಿ ಸಿನಿಮಾಗೆ ಭರ್ಜರಿ ಪ್ರಚಾರ
Image
21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ
Image
‘ಬೇರೆ ಭಾಷೆಯಲ್ಲಿ ನಟಿಸೋ ಆಸೆ ಇಲ್ಲ, ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡಿದ್ರೆ ದೇಶಾದ್ಯಂತ ರೀಚ್​ ಆಗತ್ತೆ’: ರಕ್ಷಿತ್​ ಶೆಟ್ಟಿ

ಇಂದು ರಿಲೀಸ್ ಆದ ಟೀಸರ್​ನ ಆರಂಭದಲ್ಲಿ ಕಥಾ ನಾಯಕಿ (ರುಕ್ಮಿಣಿ ವಸಂತ್) ತನ್ನ ಕನಸುಗಳನ್ನು ಹೇಳಿಕೊಳ್ಳುತ್ತಾಳೆ. ಇಲ್ಲಿ ಕ್ಯಾಸೆಟ್ ತೋರಿಸಲಾಗಿದೆ. ಹೀಗಾಗಿ, ಸಿನಿಮಾದ ಕಥೆ ಸುಮಾರು 10-15 ವರ್ಷ ಹಿಂದೆ ನಡೆಯುವಂತಹದ್ದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಟೀಸರ್​ನ  ಕೊನೆಯಲ್ಲಿ ರಕ್ತವನ್ನು ತೋರಿಸಲಾಗಿದೆ. ಹೀಗಾಗಿ, ಈ ಸಿನಿಮಾದಲ್ಲಿ ಸಸ್ಪೆನ್ಸ್ ಅಂಶ ಕೂಡ ಇರಬಹುದು ಎನ್ನಲಾಗುತ್ತಿದೆ. ಈ ಸಿನಿಮಾ ಈ ವರ್ಷವೇ ತೆರೆಗೆ ಬರಲಿದೆ. ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ ರಕ್ಷಿತ್ ಅವರು ‘777 ಚಾರ್ಲಿ’ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಂಳ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಸಿನಿಮಾಗೆ ಪ್ರಚಾರ ನೀಡಲಾಗಿದೆ. ಈ ಚಿತ್ರ ತೆರೆಕಂಡ ಬಳಿಕ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.