ಸ್ಟಾರ್​ ನಟನ ರೀತಿ ತಲೆ ಎತ್ತಿದೆ ಚಾರ್ಲಿ ಶ್ವಾನದ ಕಟೌಟ್​; ರಕ್ಷಿತ್​ ಶೆಟ್ಟಿ ಸಿನಿಮಾಗೆ ಭರ್ಜರಿ ಪ್ರಚಾರ

777 Charlie Movie: ರಕ್ಷಿತ್ ಶೆಟ್ಟಿ ಜೊತೆ ನಟಿಸಿರುವ ಚಾರ್ಲಿ ಶ್ವಾನದ ಬೃಹತ್​ ಕಟೌಟ್​ ನಿಲ್ಲಿಸಲಾಗಿದೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಸ್ಟಾರ್​ ನಟನ ರೀತಿ ತಲೆ ಎತ್ತಿದೆ ಚಾರ್ಲಿ ಶ್ವಾನದ ಕಟೌಟ್​; ರಕ್ಷಿತ್​ ಶೆಟ್ಟಿ ಸಿನಿಮಾಗೆ ಭರ್ಜರಿ ಪ್ರಚಾರ
ಚಾರ್ಲಿ ಕಟೌಟ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 05, 2022 | 12:15 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘777 ಚಾರ್ಲಿ’ ಕೂಡ ಪ್ರಮುಖವಾಗಿದೆ. ರಕ್ಷಿತ್​ ಶೆಟ್ಟಿ (Rakshit Shetty) ನಟನೆಯ ಈ ಸಿನಿಮಾದಲ್ಲಿ ಚಾರ್ಲಿ ಹೆಸರಿನ ಶ್ವಾನ ನಟಿಸಿದೆ. ಜೂನ್​ 10ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆಯನ್ನು ಹೊಂದಿರುವ ಈ ಸಿನಿಮಾಗೆ ಕಿರಣ್​ ರಾಜ್​ (Director Kiran Raj) ನಿರ್ದೇಶನ ಮಾಡಿದ್ದಾರೆ. ಪ್ರಾಣಿಪ್ರಿಯರೆಲ್ಲರಿಗೂ ಈ ಚಿತ್ರ ಖಂಡಿತಾ ಇಷ್ಟ ಆಗಲಿದೆ ಎಂಬ ಭರವಸೆ ಚಿತ್ರತಂಡದ್ದು. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಹಲವು ಚಿತ್ರಮಂದಿರಗಳ ಎದುರು ಚಾರ್ಲಿಯ ಕಟೌಟ್​ ತಲೆ ಎತ್ತಿದೆ! ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ಸ್ಟಾರ್​ ನಟರ ಕಟೌಟ್​ ರಾರಾಜಿಸುವುದು ಸಹಜ. ಆದರೆ ‘777 ಚಾರ್ಲಿ’ ಸಿನಿಮಾದಲ್ಲಿ (777 Charlie Movie) ನಾಯಿ ಕೂಡ ಪ್ರಮುಖ ಪಾತ್ರ ನಿಭಾಯಿಸಿರುವುದರಿಂದ ಅದರ ಕಟೌಟ್​ ಕೂಡ ಹಾಕಲಾಗಿದೆ.

‘777 ಚಾರ್ಲಿ’ ಒಂದು ಪ್ಯಾನ್​ ಇಂಡಿಯಾ ಸಿನಿಮಾ. ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಚೆನ್ನೈನ ಸತ್ಯಂ ಸಿನಿಮಾಸ್​ ಎದುರು ಚಾರ್ಲಿ ಶ್ವಾನದ ಬೃಹತ್​ ಕಟೌಟ್​ ನಿಲ್ಲಿಸಲಾಗಿದೆ. ಅದರ ಫೋಟೋವನ್ನು ಚಿತ್ರತಂಡ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ
Image
21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ
Image
ಶ್ವಾನದ ಬಳಿಯೇ ‘777 ಚಾರ್ಲಿ’ ಟ್ರೇಲರ್ ರಿಲೀಸ್ ಮಾಡಿಸಿದ ರಕ್ಷಿತ್ ಶೆಟ್ಟಿ
Image
ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?
Image
777 Charlie Trailer: ‘777 ಚಾರ್ಲಿ’ ಸಿನಿಮಾ ಟ್ರೇಲರ್​ ರಿಲೀಸ್​: ಎಮೋಷನಲ್​ ಕಥೆಯ ಸುಳಿವು ನೀಡಿದ ರಕ್ಷಿತ್​ ಶೆಟ್ಟಿ

ಇದನ್ನೂ ಓದಿ: ಕನ್ನಡದ ಮುದ್ದು ಚಾರ್ಲಿ ಎದುರು ಫೈಟ್​ ಮಾಡಲಿದೆ ಡೈನೋಸಾರ್; ಈ ಯುದ್ಧದಲ್ಲಿ ಏನಾಗಲಿದೆ ಭವಿಷ್ಯ?

ರಕ್ಷಿತ್​ ಶೆಟ್ಟಿ ಅವರ ಪರಂವಾ ಸ್ಡುಡಿಯೋಸ್​ ಬ್ಯಾನರ್​ ಮೂಲಕ ‘777 ಚಾರ್ಲಿ’ ಸಿನಿಮಾ ನಿರ್ಮಾಣ ಆಗಿದೆ. ರಾಜ್​ ಬಿ. ಶೆಟ್ಟಿ, ದಾನಿಶ್​ ಸೇಠ್​, ಸಂಗೀತ ಶೃಂಗೇರಿ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನೋಬಿನ್​ ಪೌಲ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೂ ಮುನ್ನ 21 ನಗರಗಳಲ್ಲಿ ಪೇಯ್ಡ್​ ಪ್ರೀಮಿಯರ್​ ಮಾಡಲಾಗುತ್ತಿದೆ.

ಈಗಾಗಲೇ ದೆಹಲಿ, ಲಖನೌ ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಪೇಯ್ಡ್​ ಪ್ರೀಮಿಯರ್​ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಭಾವುಕರಾಗಿ ಚಿತ್ರಮಂದಿರದಿಂದ ಹೊರಬರುತ್ತಿರುವ ವಿಡಿಯೋಗಳನ್ನು ಕೂಡ ಚಿತ್ರತಂಡ ಹಂಚಿಕೊಂಡಿದೆ. ಅನೇಕರಿಂದ ಚಿತ್ರದ ಬಗ್ಗೆ ಪಾಸಿಟಿವ್​ ವಿಮರ್ಶೆ ಸಿಗುತ್ತಿದೆ. ಇದರಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ. ವಿವಿಧ ಭಾಷೆಯಲ್ಲಿ ಈ ಸಿನಿಮಾವನ್ನು ಅಲ್ಲಿನ ಸ್ಟಾರ್​ ನಟರು ಬಿಡುಗಡೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:15 pm, Sun, 5 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ