ಕನ್ನಡದ ಮುದ್ದು ಚಾರ್ಲಿ ಎದುರು ಫೈಟ್​ ಮಾಡಲಿದೆ ಡೈನೋಸಾರ್; ಈ ಯುದ್ಧದಲ್ಲಿ ಏನಾಗಲಿದೆ ಭವಿಷ್ಯ?

Jurassic World Dominion | 777 Charlie: ಜೂನ್​ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ದಿನ ಹಾಲಿವುಡ್​ನ ‘ಜುರಾಸಿಕ್​ ವರ್ಲ್ಡ್​ ಡೊಮೇನಿಯನ್​’ ಚಿತ್ರ ಕೂಡ ರಿಲೀಸ್​ ಆಗಲಿದೆ.

ಕನ್ನಡದ ಮುದ್ದು ಚಾರ್ಲಿ ಎದುರು ಫೈಟ್​ ಮಾಡಲಿದೆ ಡೈನೋಸಾರ್; ಈ ಯುದ್ಧದಲ್ಲಿ ಏನಾಗಲಿದೆ ಭವಿಷ್ಯ?
ಜುರಾಸಿಕ್ ವರ್ಲ್ಡ್ ಡೊಮೇನಿಯನ್, 777 ಚಾರ್ಲಿ
Follow us
TV9 Web
| Updated By: ಮದನ್​ ಕುಮಾರ್​

Updated on: May 17, 2022 | 8:55 AM

ಕನ್ನಡದ ಸಿನಿಮಾಗಳು ಈಗ ಯಾವ ಭಾಷೆಯ ಚಿತ್ರಗಳಿಗೂ ಕಮ್ಮಿ ಇಲ್ಲದಂತೆ ಪೈಪೋಟಿ ನೀಡುತ್ತಿವೆ. ಒಂದು ಕಡೆ ‘ಕೆಜಿಎಫ್​: ಚಾಪ್ಟರ್​ 2’ ರೀತಿಯ ಅದ್ದೂರಿ ಮೇಕಿಂಗ್​ ಇರುವ ಸಿನಿಮಾಗಳು ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ‘777 ಚಾರ್ಲಿ’ (777 Charlie) ರೀತಿಯ ಕಂಟೆಂಟ್​ ಬೇಸ್ಡ್​ ಚಿತ್ರಗಳು ಗಮನ ಸೆಳೆಯುತ್ತಿವೆ. ಈ ಎರಡೂ ರೀತಿಯ ಸಿನಿಮಾಗಳಿಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರಿದ್ದಾರೆ. ರಕ್ಷಿತ್​ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟ್ರೇಲರ್​ ಮೂಲಕ ಈ ಚಿತ್ರ ಕೌತುಕ ಮೂಡಿಸಿದೆ. ಟ್ರೇಲರ್​ ಕಂಡ ಬಳಿಕ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸ್ಟಾರ್​ ನಟ-ನಟಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ ಮುಂತಾದವರಿಗೆ ಟ್ರೇಲರ್​ ಸಖತ್​ ಇಷ್ಟವಾಗಿದೆ. ಇಷ್ಟೆಲ್ಲ ಹೈಪ್​ ಸೃಷ್ಟಿ ಮಾಡಿರುವ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆ ಇದೆ. ಪ್ರಾಣಿಪ್ರಿಯರೆಲ್ಲರೂ ಈ ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ. ಜೂನ್​ 10ರಂದು ‘777 ಚಾರ್ಲಿ’ ಚಿತ್ರ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಅದೇ ದಿನ ಹಾಲಿವುಡ್​ದ ದೈತ್ಯ ಸಿನಿಮಾ ‘ಜುರಾಸಿಕ್​ ವರ್ಲ್ಡ್​ ಡೊಮೇನಿಯನ್​’ (Jurassic World Dominion) ಕೂಡ ಬಿಡುಗಡೆ ಆಗುತ್ತಿದೆ.

ಹಾಲಿವುಡ್​ ಸಿನಿಮಾಗಳಿಗೆ ವಿಶ್ವಾದ್ಯಂತ ದೊಡ್ಡ ಮಾರುಕಟ್ಟೆ ಇದೆ. ಭಾರತದಲ್ಲಿಯೂ ಈ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಕಮಾಯಿ ಮಾಡುತ್ತವೆ. ಅದರಲ್ಲೂ ಡೈನೋಸಾರ್​ ಕಥೆ ಹೊಂದಿರುವ ಸಿನಿಮಾ ಎಂದರೆ ಜನರು ಮುಗಿಬಿದ್ದು ನೋಡುತ್ತಾರೆ. ಈಗ ‘ಜುರಾಸಿಕ್​ ವರ್ಲ್ಡ್​ ಡೊಮೇನಿಯನ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್​ 10ರಂದು ರಿಲೀಸ್​ ಆಗಲಿರುವ ಈ ಸಿನಿಮಾದ ಎದುರಿನಲ್ಲಿ ‘777 ಚಾರ್ಲಿ’ ಚಿತ್ರ ಫೈಟ್​ ಮಾಡಬೇಕಿದೆ.

ಕೆಲವೇ ದಿನಗಳ ಹಿಂದೆ ‘ಜುರಾಸಿಕ್​ ವರ್ಲ್ಡ್​ ಡೊಮೇನಿಯನ್​’ ಸಿನಿಮಾದ ಟ್ರೇಲರ್​ ರಿಲೀಸ್​ ಆಯಿತು. ವಿಶ್ವಾದ್ಯಂತ ಈ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. ಈ ಹಿಂದಿನ ಸರಣಿಗಳು ಸೂಪರ್​ ಹಿಟ್​ ಆಗಿದ್ದಕ್ಕಿಂತಲೂ ದೊಡ್ಡದಾಗಿ ‘ಜುರಾಸಿಕ್​ ವರ್ಲ್ಡ್​ ಡೊಮೇನಿಯನ್​’ ಚಿತ್ರ ಬ್ಲಾಕ್​ ಬಸ್ಟರ್​ ಆಗುವ ಸೂಚನೆ ಸಿಕ್ಕಿದೆ. ಇಂಥ ದೈತ್ಯ ಚಿತ್ರ ರಿಲೀಸ್​ ಆಗುವಾಗ ಹೆಚ್ಚಿನ ಸಂಖ್ಯೆಯ ಪರದೆಗಳನ್ನು ಆಕ್ರಮಿಸಿಕೊಳ್ಳುವುದು ಸಹಜ. ಆಗ ಬೇರೆ ಸಿನಿಮಾಗಳಿಗೆ ಸ್ಕ್ರೀನ್​ ಸಂಖ್ಯೆ ಕಡಿಮೆ ಆಗಬಹುದು. ‘777 ಚಾರ್ಲಿ’ ಚಿತ್ರಕ್ಕೆ ಚಿತ್ರಮಂದಿರಗಳ ಕೊರತೆ ಆಗದಿರಲಿ ಎಂದು ಫ್ಯಾನ್ಸ್​ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಡೈನೋಸಾರ್​ ಸಿನಿಮಾ, ಇನ್ನೊಂದೆಡೆ ಕನ್ನಡದ ಮುದ್ದಿ ಶ್ವಾನ ಚಾರ್ಲಿಯ ಸಿನಿಮಾ. ಇವೆರಡಲ್ಲಿ ಪ್ರೇಕ್ಷಕ ಪ್ರಭುಗಳು ಯಾವ ಚಿತ್ರಕ್ಕೆ ಮೊದಲ ಆದ್ಯತೆ ನೀಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ
Image
ಶ್ವಾನದ ಬಳಿಯೇ ‘777 ಚಾರ್ಲಿ’ ಟ್ರೇಲರ್ ರಿಲೀಸ್ ಮಾಡಿಸಿದ ರಕ್ಷಿತ್ ಶೆಟ್ಟಿ
Image
ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?
Image
777 Charlie Trailer: ‘777 ಚಾರ್ಲಿ’ ಸಿನಿಮಾ ಟ್ರೇಲರ್​ ರಿಲೀಸ್​: ಎಮೋಷನಲ್​ ಕಥೆಯ ಸುಳಿವು ನೀಡಿದ ರಕ್ಷಿತ್​ ಶೆಟ್ಟಿ
Image
‘777 ಚಾರ್ಲಿ’ ಟ್ರೇಲರ್​ಗಾಗಿ ರಕ್ಷಿತ್ ಶೆಟ್ಟಿಗೆ ಸಾಯಿ ಪಲ್ಲವಿ ಸಾಥ್​; ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ‘ಪ್ರೇಮಂ’ ಬ್ಯೂಟಿ

‘ಜುರಾಸಿಕ್​ ವರ್ಲ್ಡ್​ ಡೊಮೇನಿಯನ್​’ ಸಿನಿಮಾದ ಕ್ರೇಜ್​ ಜೋರಾಗಿದೆ. ಅಚ್ಚರಿ ಎಂದರೆ ಒಂದು ತಿಂಗಳು ಮುನ್ನವೇ ಈ ಚಿತ್ರಕ್ಕೆ ಅಡ್ವಾನ್ಸ್​ ಬುಕಿಂಗ್​ ಶುರುವಾಗಿದೆ. ಬೆಂಗಳೂರು, ಹೈದರಾಬಾದ್​, ಮುಂಬೈ, ಚೆನ್ನೈ, ದೆಹಲಿ ಸೇರಿದಂತೆ ಹತ್ತಾರು ನಗರಗಳಲ್ಲಿ ಮುಂಗಡ ಟಿಕೆಟ್​ ಬುಕಿಂಗ್​ ಆಗುತ್ತಿದೆ. ತೆಲುಗು, ತಮಿಳು, ಹಿಂದಿಗೂ ಡಬ್​ ಆಗಿ ಈ ಚಿತ್ರ ತೆರೆಕಾಣುತ್ತಿದೆ. ಅದೇ ರೀತಿ ‘777 ಚಾರ್ಲಿ’ ಸಿನಿಮಾ ಕೂಡ ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ