Tattooed Skin: ಟ್ಯಾಟೂ ಹಾಕಿಸಿಕೊಂಡ ಬಳಿಕ ಚರ್ಮದ ಆರೈಕೆ ಹೇಗಿರಬೇಕು?

Tattooed Skin:ಟ್ಯಾಟೂ ನಿಮಗೆ ಎಷ್ಟು ಮುಖ್ಯವೋ ಬಳಿಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರಬೇಕು. ಒಂದೊಮ್ಮೆ ಚರ್ಮದ ಕಾಳಜಿವಹಿಸದಿದ್ದರೆ ಅಲರ್ಜಿಯುಂಟಾಗುತ್ತದೆ. ಟ್ಯಾಟೂವಿನ ಜಾಗದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಹೆಚ್ಚೆಚ್ಚು ಮಾಯ್ಚುರೈಸರ್​ಗಳನ್ನು ಬಳಕೆ ಮಾಡಬೇಕು.

Tattooed Skin: ಟ್ಯಾಟೂ ಹಾಕಿಸಿಕೊಂಡ ಬಳಿಕ ಚರ್ಮದ ಆರೈಕೆ ಹೇಗಿರಬೇಕು?
Tattoo
Follow us
TV9 Web
| Updated By: ನಯನಾ ರಾಜೀವ್

Updated on: Jun 06, 2022 | 2:39 PM

ಟ್ಯಾಟೂ ನಿಮಗೆ ಎಷ್ಟು ಮುಖ್ಯವೋ ಬಳಿಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರಬೇಕು. ಒಂದೊಮ್ಮೆ ಚರ್ಮದ ಕಾಳಜಿವಹಿಸದಿದ್ದರೆ ಅಲರ್ಜಿಯುಂಟಾಗುತ್ತದೆ. ಟ್ಯಾಟೂವಿನ ಜಾಗದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಹೆಚ್ಚೆಚ್ಚು ಮಾಯ್ಚುರೈಸರ್​ಗಳನ್ನು ಬಳಕೆ ಮಾಡಬೇಕು. ಮಾಯ್ಚುರೈಸ್ ಮಾಡುವುದರಿಂದ ಆಗುವ ಲಾಭಗಳು: ನಿತ್ಯ ಟ್ಯಾಟ್ಯೂ ಜಾಗದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು, ಹೀಗೆ ಕ್ರೀಮ್​ಗಳನ್ನು ಹಚ್ಚುವುದರಿಂದ ಹೊಸ ಸೆಲ್​ಗಳ ಹುಟ್ಟಿಗೆ ಕಾರಣವಾಗುತ್ತದೆ.

ಹೆಚ್ಚು ಮಾಯ್ಚುರೈಸರ್​ಗಳ ಬಳಕೆ ಬೇಡ: ಟ್ಯಾಟೂ ಪ್ರದೇಶದಲ್ಲಿ ಕ್ರೀಂ ಅಥವಾ ಆಯಿಂಟ್​ಮೆಂಟ್ ಹಚ್ಚಿದರೆ ಸಾಕು, ಅತಿಯಾಗಿ ಯಾವುದೇ ಕ್ರೀಂಗಳನ್ನು ಬಳಸಬೇಡಿ.

ನೀವು ನಿತ್ಯ ಬಳಸುವ ಕ್ರೀಂ ಬಳಸಿ: ಟ್ಯಾಟೂ ಹಾಕಿಸಿಕೊಂಡ ಬಳಿಕ ಕ್ರೀಂ ಬದಲಿಸಬೇಡಿ, ನೀವು ನಿತ್ಯ ದೇಹದ ತೇವಾಂಶವನ್ನು ಉಳಿಸಿಕೊಳ್ಳಲು ಯಾವ ಮಾಯ್ಚುರೈಸರ್ ಬಳಕೆ ಮಾಡುತ್ತಿದ್ದೀರೋ ಅದನ್ನೇ ಟ್ಯಾಟೂ ಜಾಗದ ಮೇಲೂ ಬಳಸಿ. ನಿತ್ಯ ಎರಡರಿಂದ ಮೂರು ಬಾರಿ ಮಾಯ್ಚುರೈಸರ್ ಹಚ್ಚಿ. ಟ್ಯಾಟುವಿನಲ್ಲಿ ಎರಡು ವಿಧಗಳಿವೆ. ಒಂದು ತಾತ್ಕಾಲಿಕವಾದುದ್ದು, ಇನ್ನೊಂದು ಶಾಶ್ವತವಾದದ್ದು. ಶಾಶ್ವತವಾದ ಟ್ಯಾಟೂ ಹಾಕಿಸಿಕೊಂಡಾಗ ಕೆಲವು ಕಾಳಜಿಯನ್ನು ಕೈಗೊಳ್ಳಬೇಕು.

ಮುಟ್ಟ ಬಾರದು: ಹೊಸ ಟ್ಯಾಟೂ ಹಾಕಿಸಿಕೊಂಡಾಗ ನಿಮ್ಮಂತೆಯೇ ನಿಮ್ಮೊಂದಿಗೆ ಇರುವವರು ಸಹ ಅದನ್ನು ನೋಡಲು ಮತ್ತು ಮುಟ್ಟಲು ಉತ್ಸುಕರಾಗಿರುತ್ತಾರೆ. ಅವರು ಟ್ಯಾಟೂವನ್ನು ಸ್ಪರ್ಶಿಸದಂತೆ ನೋಡಿಕೊಳ್ಳಬೇಕು. ಟ್ಯಾಟೂ ಹಾಕಿಸಿಕೊಂಡಾಗ ಚರ್ಮದ ಮೇಲೆ ಸಾಕಷ್ಟು ಹಾನಿ ಉಂಟಾಗಿರುತ್ತದೆ. ಅಂತಹ ಸಮಯದಲ್ಲಿ ಆ ಜಾಗವನ್ನು ಆದಷ್ಟು ಶುದ್ಧ ಹಾಗೂ ನಾಜೂಕಿನಿಂದ ನೋಡಿಕೊಳ್ಳಬೇಕು.

ಇತರರ ಕೈಯಲ್ಲಿ ಅಥವಾ ನಿಮ್ಮ ಕೈಯಲ್ಲಿ ರೋಗಾಣುಗಳು ಇದ್ದರೆ, ಟ್ಯಾಟೂ ಮುಟ್ಟಿದಾಗ ಅದು ಚರ್ಮಕ್ಕೆ ಅಂಟಿಕೊಳ್ಳುವುದು. ಜೊತೆಗೆ ಚರ್ಮ ಸಮಸ್ಯೆಯು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಾಗ ಒಂದು ವಾರಗಳ ಕಾಲ ವಿಶೇಷ ಕಾಳಜಿ ಇರಬೇಕು. ಸೇಹಿತರ ಸಂಪರ್ಕ ಹಾಗೂ ಸಾಕು ಪ್ರಾಣಿಗಳ ಸಂಪರ್ಕದಿಂದ ದೂರವಿಡಿ. ಸಂಪೂರ್ಣವಾಗಿ ಒಣಗಿದ ಮೇಲೆ ಅದನ್ನು ಮುಟ್ಟಲು ಬಿಡಬಹುದು.

ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿ: ಟ್ಯಾಟೂ ಹಾಕಿಸಿಕೊಂಡ ಜಾಗದಲ್ಲಿ ನೀರನ್ನು ಹಾಕಬಾರದು ಎನ್ನುವ ನಂಬಿಕೆಯಿದೆ. ಟ್ಯಾಟೂ ಹಾಕಿಕೊಂಡ ಮರುದಿನದಿಂದ ಸೌಮ್ಯವಾದ ಸೋಪ್ ಬಳಸಿ ತೊಳೆಯಬೇಕು. ಆಗ ಚರ್ಮದಲ್ಲಿ ಇರುವ ಕೊಳೆ ಮತ್ತು ರೋಗಾಣುಗಳು ಹೋಗುತ್ತವೆ.

ಇಲ್ಲವಾದರೆ ಆ ಜಾಗದಲ್ಲಿ ಕೀವು, ನೋವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಟ್ಯಾಟೂ ಒಣಗುತ್ತಾ ಬಂದಂತೆ ತೆಳುವಾದ ಚರ್ಮದ ಪದರ ಎದ್ದುಬಂದಂತೆ ಆಗುವುದು. ಅಂತಹ ಸಮಯದಲ್ಲಿ ಉಜ್ಜುವುದು, ಕೀಳುವುದು ಅಥವಾ ಪದೇ ಪದೇ ಮುಟ್ಟುವುದು ಮಾಡಬಾರದು.

​ಟ್ಯಾಟೂ ಮುಲಾಮು ಹಚ್ಚಬೇಕು: ಹಚ್ಚೆ ಒಣಗುತ್ತಾ ಬಂದಂತೆ ಚರ್ಮದ ಮೇಲ್ಪದರ ತೆಳುವಾದ ಪದರವನ್ನು ರೂಪಿಸುತ್ತದೆ. ಅಂತಹ ಸಮಯದಲ್ಲಿ ಸ್ವಲ್ಪ ತುರಿಕೆ ಹಾಗೂ ಕಿರಿಕಿರಿ ಆಗುವುದು. ಆಗ ತಜ್ಞರು ಸೂಚಿಸಿದ ಮುಲಾಮುಗಳನ್ನು ಹಚ್ಚಬೇಕು. ಆಗ ಚರ್ಮದ ಮೇಲೆ ಉಂಟಾಗುವ ತುರಿಕೆ, ಬ್ಯಾಕ್ಟೀರಿಯಾಗಳ ದಾಳಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು. ಹಚ್ಚೆಯು ಸಹ ಆರೋಗ್ಯಕರವಾಗಿ ಉಳಿಯಲು ಸಹಾಯ ಆಗುವುದು. ಆದ್ದರಿಂದ ದಿನಕ್ಕೆ 3-4 ಬಾರಿ ಸಣ್ಣ ಪ್ರಮಾಣದಲ್ಲಿ ಮುಲಾಮುಗಳನ್ನು ಹಚ್ಚುತ್ತಿರಬೇಕು. ​ ದೀರ್ಘ ಕಾಲ ಸೂರ್ಯನ ಬೆಳಕಿಗೆ ಹೋಗಬಾರದು: ದೀರ್ಘ ಸಮಯ ಸಮುದ್ರ ತೀರದಲ್ಲಿ ಇರುವುದು, ಬಿಸಿಲಿನಲ್ಲಿಯೇ ಕುಳಿತಿರುವುದು ಅಥವಾ ಕೆಲಸ ಮಾಡುವುದು ಮಾಡಬಾರದು. ಹಾಗೊಮ್ಮೆ ಬಿಸಿಲಿನಲ್ಲಿ ಇರುವ ಪರಿಸ್ಥಿತಿ ಎದುರಾದರೆ ಎಸ್‍ಪಿಎಫ್ 50ಕ್ಕಿಂತ ಹೆಚ್ಚಿರುವ ಸನ್‍ಸ್ಕ್ರೀನ್ ಕ್ರೀಮ್ ಅನ್ನು ಹಚ್ಚಿಕೊಳ್ಳಬೇಕು.

ಹೊಸದಾಗಿ ಹಚ್ಚೆ ಹಾಕಿಸಿಕೊಂಡಾಗ ಸ್ವಲ್ಪ ದಿನಗಳ ಕಾಲ ಹೆಚ್ಚು ಸೂರ್ಯನ ಬೆಳಕಿಗೆ ತೆರೆದುಕೊಳ್ಳಬಾರದು. ಸೂರ್ಯನ ಯುವಿ ಕಿರಣಗಳು ಹಚ್ಚೆಯ ಮೇಲೆ ಬಿದ್ದಾಗ ಕಿರಿ ಕಿರಿ ಹಾಗೂ ಇನ್ನಿತರ ಸಮಸ್ಯೆ ಉಂಟಾಗುವುದು. ಹಾಗಾಗಿ ಹಚ್ಚೆ ಸಂಪೂರ್ಣವಾಗಿ ಒಣಗಿದ ಬಳಿಕ ಹೋಗಬಹುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ