Dental Health: ಹಲ್ಲಿನ ಆರೋಗ್ಯ: ರೂಟ್ ಕೆನಾಲ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಹೊರಬನ್ನಿ

Dental Health;ಹಲ್ಲುಗಳು ಸೌಂದರ್ಯದ ಪ್ರತಿರೂಪ, ದಾಳಿಂಬೆಯ ಹಣ್ಣಿನಂತಹ ದಂತಪಂಕ್ತಿಗಳು, ಬಿಳುಪಾದ ಹಲ್ಲು, ಅಂದವಾದ ನಗು ಇವೇ ಸೌಂದರ್ಯದ ಗುಟ್ಟು. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಮಧ್ಯವಯಸ್ಕರಿರಲಿ ವೃದ್ಧಾಪ್ಯದ ಸಮೀಪ ಇರುವವರು ಕೂಡ ಕ್ಯಾವಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Dental Health: ಹಲ್ಲಿನ ಆರೋಗ್ಯ: ರೂಟ್ ಕೆನಾಲ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಹೊರಬನ್ನಿ
Root CanalImage Credit source: Bell Harbour Dental
Follow us
TV9 Web
| Updated By: ನಯನಾ ರಾಜೀವ್

Updated on: Jun 06, 2022 | 4:26 PM

ಹಲ್ಲುಗಳು ಸೌಂದರ್ಯದ ಪ್ರತಿರೂಪ, ದಾಳಿಂಬೆಯ ಹಣ್ಣಿನಂತಹ ದಂತಪಂಕ್ತಿಗಳು, ಬಿಳುಪಾದ ಹಲ್ಲು, ಅಂದವಾದ ನಗು ಇವೇ ಸೌಂದರ್ಯದ ಗುಟ್ಟು. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಮಧ್ಯವಯಸ್ಕರಿರಲಿ ವೃದ್ಧಾಪ್ಯದ ಸಮೀಪ ಇರುವವರು ಕೂಡ ಕ್ಯಾವಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲ್ಲಿನ ಹುಳುಕಿನ ಸಮಸ್ಯೆ ಅಷ್ಟೇ ಅಲ್ಲದೇ, ಒಸಡಿನ ಬಗ್ಗೆ ಜಾಗ್ರತೆ ವಹಿಸದೇ ಇರುವುದು ಕೂಡ ಇಂತಹ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ.

ಗಟ್ಟಿ ಬ್ರಷ್​ನಿಂದ ಹಲ್ಲುಜ್ಜುವಿಕೆ, ನಿರಂತರ ಟೂತ್ ಪಿಕ್ ಬಳಕೆಯಿದ ಹಲ್ಲಿನ ನಡುವೆ ಸಂಧಿ ದೊಡ್ಡಾಗುವಿಕೆಯೂ ಕೂಡ ವಸಡಿನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಅಂತಿಮವಾಗಿ ಈ ಎಲ್ಲಾ ಸಮಸ್ಯೆಗಳು ರೂಟ್ ಕೆನಾಲ್ ಚಿಕಿತ್ಸೆಯಲ್ಲಿ ಕೊನೆಗೊಳ್ಳುತ್ತವೆ.

ಹಲ್ಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. 6 ತಿಂಗಳಿಗೆ ಒಮ್ಮೆಯಾದರೂ ದಂತ ಪರೀಕ್ಷೆ ಮಾಡಿಸಿಕೊಳ್ಳಿ. ಒಂದು ವೇಳೆ ಸಮಸ್ಯೆ ಬೇಗ ತಿಳಿದುಕೊಂಡರೆ, ಎನಾಮಲ್ ಹಲ್ಲಿನಲ್ಲೇ ಅದನ್ನು ಸರಿ ಮಾಡಬಹುದು. ಆಗ ರೂಟ್ ಕೆನಾಲ್​ನ ಅಗತ್ಯವಿಲ್ಲ.

ರೂಟ್ ಕೆನಾಲ್ ಬಗ್ಗೆ ಭಯ ಬೇಡ ರೂಟ್ ಕೆನಾಲ್ ಅಂದರೆ ನೋವಿನಿಂದ ಕೂಡಿದ ಚಿಕಿತ್ಸೆ. ಬಹಳ ಕಷ್ಟ ಅಲ್ಲದೇ ಊತ ಕಾಣಿಸಿಕೊಳ್ಳುತ್ತದೆ. ಇದೊಂದು ಫೇಲ್ಡ್ ಟ್ರೀಟ್ಮೆಂಟ್ ಎನ್ನುವ ಅನೇಕ ತಪ್ಪು ತಿಳಿವಳಿಕೆ ಮತ್ತು ಗೊಂದಲಗಳು ಜನರಲ್ಲಿ ಮನೆ ಮಾಡಿವೆ. ಆದರೆ ಇವತ್ತು ಈ ಎಲ್ಲಾ ಗೊಂದಲಗಳಿಗೂ ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಫುಲ್ ಸ್ಟಾಪ್ ಇಡೋಣ.

​ರೂಟ್ ಕೆನಾಲ್ ಅಂದ್ರೆ ಏನು? ನಮ್ಮ ಹಲ್ಲಿನಲ್ಲಿ ಮೂರು ಪದರಗಳಿರುತ್ತವೆ. ನಮ್ಮ ಒಸಡಿನಲ್ಲಿ ಹೆಚ್ಚು ಬಲಶಾಲಿಯಾದ ಮೊಟ್ಟ ಮೊದಲ ಪದರ ಎನಾಮಲ್. ಇದು ಹಲ್ಲುಗಳನ್ನು ರಕ್ಷಿಸುವ ರಕ್ಷಾ ಕವಚವೆಂದೇ ಹೇಳಬೇಕು. ಇದು ನಮ್ಮ ಇಡೀ ದೇಹದಲ್ಲೇ ಹೆಚ್ಚು ಬಲಶಾಲಿಯಾಗಿರುವ ಪದರ. ಇನ್ನೂ ಇದರ ಕೆಳಭಾಗದ ಎರಡನೇ ಪದರ ಡೆಂಟೈನ್. ಡೆಂಟೈನ್ ನಂತರದ ಪ್ರಮುಖವಾದ ಮೂರನೇ ಪದರವೇ ಪಲ್ಪ್ ಅಥವಾ ನರವಾಗಿರುತ್ತದೆ. ರೂಟ್ ಕೆನಾಲ್ ಚಿಕಿತ್ಸೆಯಲ್ಲಿ ಇದು ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ.

ಈ ಕಲ್ಪನೆಗಳಿಂದ ಹೊರಬನ್ನಿ ರೂಟ್​ ಕೆನಾಲ್​ ಮಾಡಲು ಹೆಚ್ಚು ಸಮಯ ಬೇಕು ರೂಟ್ ಕೆನಾಲ್ ಮಾಡಲು ತುಂಬಾ ಸಮಯ ಬೇಕು ಎಂಬುದು ಸುಳ್ಳು, ಕೇವಲ ಅರ್ಧ ಗಂಟೆಗಳಲ್ಲೇ ಚಿಕಿತ್ಸೆಯನ್ನು ಮುಗಿಸಬಹುದಾಗಿದೆ.

ರೂಟ್ ಕೆನಾಲ್​ಗಿಂತ ಹಲ್ಲು ಕೀಳಿಸುವುದು ಉತ್ತಮವೇ? ರೂಟ್ ಕೆನಾಲ್ ಮಾಡುವುದಕ್ಕಿಂತ ಹಲ್ಲು ಕೀಳಿಸುವುದು ಉತ್ತಮ ಉಪಾಯವಲ್ಲ, ನಿಮ್ಮ ಹಲ್ಲುಗಳು ಹೇಗೆಯೇ ಇದ್ದರೂ, ಅದನ್ನು ಉಳಿಸಿಕೊಂಡು ಅದಕ್ಕೆ ಕ್ಯಾಪ್ ಹಾಕಿದರೆ ತುಂಬಾ ವರ್ಷಗಳ ಕಾಲ ಬಾಳಿಕೆ ಬರುತ್ತದೆ.

ರೂಟ್​ ಕೆನಾಲ್ ಮಾಡುವಾಗ ಅಧಿಕ ನೋವಾಗುವುದು ಹೌದು ರೂಟ್ ಕೆನಾಲ್ ಮಾಡುವಾಗ ನೋವಾಗುವುದು ಸಹಜ ಆದರೆ ಡೆಕ್ನಾಲಜಿ ತುಂಬಾ ಅಡ್ವಾನ್ಸ್ ಆಗಿದ್ದು, ತುಂಬಾ ಬೇಗ ಹಾಗೂ ನೋವು ರಹಿತವಾಗಿಯೂ ರೂಟ್ ಕೆನಾಲ್ ಮಾಡಬಲ್ಲರು.

ಯಾವಾಗ ರೂಟ್ ಕೆನಾಲ್ ಅಗತ್ಯ ಬೀಳುತ್ತದೆ? ಹಲ್ಲು ಹುಳುಕಾದಾಗ ಅಥವಾ ಯಾವುದೋ ಕಾರಣದಿಂದಾಗಿ ಹಲ್ಲು ಮುರಿದಾಗ ಈ ಎಲ್ಲಾ ಕಾರಣಗಳಿಂದ ನರ ಅಂದರೆ ಪಲ್ಪ್ ಡ್ಯಾಮೇಜ್ ಆದಂತಹ ಸಂದರ್ಭದಲ್ಲಿ ರೂಟ್ ಕೆನಾಲ್ ಮಾಡಬೇಕಾಗುತ್ತದೆ.

ರೂಟ್ ಕೆನಾಲ್ ಮಾಡುವ ಬಗೆ ಹೇಗೆ? ನರ ಡ್ಯಾಮೇಜ್ ಆಗಿದ್ದ ಸಂದರ್ಭದಲ್ಲಿ ಅದನ್ನು ಮೇಲ್ಭಾಗದಿಂದ ಹಲ್ಲಿನಿಂದ ಒಂದು ಸಂಧಿ ಮಾಡಿ, ಡ್ಯಾಮೇಜ್ ಆಗಿರುವ ನರವನ್ನು ತೆಗೆಯಲಾಗುತ್ತದೆ. ಆ ನಂತರ ಅದನ್ನು ಮತ್ತೆ ಫಿಲ್ಲಿಂಗ್ ಮಾಡುತ್ತೇವೆ. ಇದುವೇ ರೂಟ್ ಕೆನಾಲ್ ಚಿಕಿತ್ಸೆಯಾಗಿದೆ. ಇದು ಸರಳ ಮತ್ತು ಹಲ್ಲಿನ ಆರೋಗ್ಯಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

​ಅರ್ಧಗಂಟೆಯಲ್ಲಿ ರೂಟ್  ಕೆನಾಲ್​ನಿಂದ ಪರಿಹಾರ ಅಡ್ವಾನ್ಸ್ಡ್ ಚಿಕಿತ್ಸೆಗಳಿಂದ ಕೇವಲ ಅರ್ಧಗಂಟೆಯಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಪೂರ್ಣಗೊಳ್ಳುತ್ತದೆ. ಸಿಂಗಲ್ ಸಿಟ್ಟಿಂಗ್​ನಲ್ಲಿ ರೂಟ್ ಕೆನಾಲ್ ಸಮಸ್ಯೆಯಿಂದ ಹೊರಬರಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ